ಬ್ರೇಕಿಂಗ್ ನ್ಯೂಸ್
11-09-22 11:14 am HK News Desk ಕ್ರೈಂ
ಉಡುಪಿ, ಸೆ.11: ಬೆಂಗಳೂರು ನೋಂದಣಿಯ ಇನ್ನೋವಾ ಕಾರಿನಲ್ಲಿ ಬಂದಿದ್ದ ತಂಡವೊಂದು ಉಡುಪಿ ಕೃಷ್ಣ ಮಠದ ಬಳಿ ವ್ಯಕ್ತಿಯೊಬ್ಬರನ್ನು ಅಪಹರಿಸಿದ ಘಟನೆ ನಡೆದಿದ್ದು, ಕೆಲಕಾಲ ಆತಂಕಕ್ಕೀಡು ಮಾಡಿದ್ದಲ್ಲದೆ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರನ್ನು ಬೇಸ್ತು ಬೀಳುವಂತೆ ಮಾಡಿತ್ತು.
ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರ ತಂಡ ಕಾರಿನಿಂದ ಇಳಿದು ಕೃಷ್ಣ ಮಠಕ್ಕೆ ನಡೆದುಕೊಂಡು ಹೋಗುತ್ತಿದ್ದ ಒಬ್ಬರನ್ನು ಬಲವಂತದಿಂದ ಕಾರಿನಲ್ಲಿ ಒಳಕ್ಕೆಳೆದು ಕರೆದೊಯ್ದಿದ್ದರು. ಇದನ್ನು ಕಂಡ ಸ್ಥಳೀಯರು ಅಪಹರಣದ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಕೂಡಲೇ ಉಡುಪಿ ನಗರ ಪೊಲೀಸರು ಅಲರ್ಟ್ ಆಗಿದ್ದು ವಿವಿಧ ಠಾಣೆಗಳಿಗೆ ಎಚ್ಚರಿಕೆ ರವಾನಿಸಿದ್ದರು. ವಾಹನ ಕಲ್ಸಂಕ ಮಾರ್ಗವಾಗಿ ಕರಾವಳಿ ಬೈಪಾಸ್ ತಲುಪಿ, ಅಲ್ಲಿಂದ ಹೆಜಮಾಡಿ ಟೋಲ್‌ಗೇಟ್ ದಾಟಿ ಮುಂದೆ ಹೋಗಿರುವುದು ಟ್ರಾಫಿಕ್ ಪೊಲೀಸರಿಗೆ ತಿಳಿದುಬಂದಿತ್ತು.
ಬಳಿಕ ಉಡುಪಿ ಪೊಲೀಸರು ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು ನಂಬರ್ ಪ್ಲೇಟ್ ಆಧರಿಸಿ ಹಿಂದೆ ಬಿದ್ದ ಪೊಲೀಸರು ಕೂಳೂರು ಬಳಿ ಇನ್ನೋವಾ ಕಾರನ್ನು ಅಡ್ಡಹಾಕಿ, ಕಾರಿನಲ್ಲಿದ್ದವರನ್ನು ವಿಚಾರಣೆ ನಡೆಸಿದ್ದಾರೆ. ಕಿಡ್ನಾಪ್ ಮಾಹಿತಿ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಕಾರಿನಲ್ಲಿದ್ದವರ ಮಾತು ಕೇಳಿ ಶಾಕ್ ಆಗಿತ್ತು. ಅಲ್ಲದೆ, ಅಪಹರಣ ಕತೆಯೇ ಉಲ್ಟಾ ಆಗಿ ಪೊಲೀಸರೇ ತಮ್ಮ ಕಣ್ಣನ್ನು ನಂಬದಾಗಿದ್ದರು. ಯಾಕಂದ್ರೆ, ಅಲ್ಲಿ ನಿಜಕ್ಕೂ ಅಪಹರಣ ಆಗಿರಲಿಲ್ಲ.
ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಾನಸಿಕ ಅಸ್ವಸ್ಥ ರೋಗಿ ತಪ್ಪಿಸಿಕೊಂಡು ಉಡುಪಿಗೆ ಬಂದಿದ್ದು ಮನೆಯವರ ಕೋರಿಕೆಯಂತೆ ರಕ್ಷಣೆ ಮಾಡಿದ್ದರು. ಕಾರಿನಲ್ಲಿ ಬಲವಂತದಿಂದ ಕುಳ್ಳಿರಿಸಿ ಹೊತ್ತೊಯ್ದಿದ್ದು ಸ್ಥಳೀಯರಿಗೆ ಯಾರನ್ನೋ ಅಪಹರಿಸಲಾಗಿದೆ ಎನ್ನುವ ಸಂದೇಶ ಹೋಗಿತ್ತು. ಸೆ.8ರಂದು ಯೋಗೀಶ್ ಭಟ್ (54) ಎಂಬ ವ್ಯಕ್ತಿ ಬೆಂಗಳೂರಿನ ಮಾನಸಿಕ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದು ಉಡುಪಿಯ ಎಂಜಿಎಂ ಕಾಲೇಜು ಸಮೀಪದ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಈ ಬಗ್ಗೆ ಮನೆಯವರೇ ಆಸ್ಪತ್ರೆಯವರಿಗೆ ಮಾಹಿತಿ ನೀಡಿದ್ದರು. ಶನಿವಾರ ಬೆಳಗ್ಗೆ ಯೋಗೀಶ್ ಭಟ್ ಅವರು ಮನೆಯಿಂದ ಕೃಷ್ಣ ಮಠದತ್ತ ತೆರಳಿದ್ದರು. ಇದೇ ವೇಳೆ, ಬೆಂಗಳೂರಿನಿಂದ ಬಂದಿದ್ದ ಮಾನಸಿಕ ವೈದ್ಯರ ತಂಡ ಉಡುಪಿಯಲ್ಲಿ ಹುಡುಕಾಟ ನಡೆಸಿದ್ದು ಬಳಿಕ ಕನಕದಾಸ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅವರನ್ನ ಪತ್ತೆಹಚ್ಚಿ ಇನ್ನೋವಾ ಕಾರಿನಲ್ಲಿ ಬಲವಂತದಿಂದ ಕೂರಿಸಿದ್ದರು. ಇದನ್ನು ಕಂಡ ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇನೋವಾ ಕಾರು ಜಿಲ್ಲೆಯ ಗಡಿ ದಾಟುತ್ತಲೇ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿ ಕೂಳೂರಿನಲ್ಲಿ ಅಡ್ಡಹಾಕಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ವೈದ್ಯರ ತಂಡವನ್ನು ಬೆಂಗಳೂರಿಗೆ ತೆರಳಲು ಅನುಮತಿ ನೀಡಿದ್ದಾರೆ.
Metally retired man who had escaped from Bangalore hospital was caught in Udupi near Krishna temple as he was forced to sit inside the car people who were seeing it complained to the police that some person was kidnapped, High alert was issued all over Udupi and Mangalore, later the car was stopped at Kulur in Mangalore we're the police came to know that it was not a kidnap but it was a rescue to nab the mentally retired man.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 12:44 pm
Mangaluru Correspondent
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm