ಬ್ರೇಕಿಂಗ್ ನ್ಯೂಸ್
16-09-22 08:35 pm Mangalore Correspondent ಕ್ರೈಂ
ಪುತ್ತೂರು, ಸೆ.16: ಪುತ್ತೂರು ಪೇಟೆಯಲ್ಲಿರುವ ಚಪ್ಪಲಿ ಅಂಗಡಿಗೆ ನುಗ್ಗಿದ ಕಳ್ಳರು ಹಳೆ ಕಾರು ಮಾರಾಟದಲ್ಲಿ ಬಂದಿದ್ದ 14.75 ಲಕ್ಷ ನಗದನ್ನು ಕಳವು ಮಾಡಿದ್ದಾರೆ.
ಪುತ್ತೂರು ಬಸ್ ನಿಲ್ದಾಣದ ಬಳಿಯಲ್ಲೇ ಇರುವ ಪ್ರಕಾಶ್ ಫೂಟ್ ವೇರ್ ಅಂಗಡಿಗೆ ಸೆ.15ರ ಗುರುವಾರ ರಾತ್ರಿ 9ರಿಂದ ಶುಕ್ರವಾರ ಬೆಳಗ್ಗಿನ ನಡುವೆ ನುಗ್ಗಿದ ಕಳ್ಳರು ಕಳವು ಕೃತ್ಯ ಎಸಗಿದ್ದಾರೆ. ಅಂಗಡಿ ಮಾಲಕ ಮಹಮ್ಮದ್ ಶಮೀರ್, ಹಳೆಯ ಕಾರುಗಳ ಮಾರಾಟವನ್ನೂ ಮಾಡುತ್ತಿದ್ದು, ಇದರಿಂದ ಬಂದ ನಗದು ಹಣವನ್ನು ಅಂಗಡಿಯ ಡ್ರಾವರಿನಲ್ಲಿ ಇರಿಸಿದ್ದರು. ಎಂಟು ಲಕ್ಷ ರೂ. ಕಾರಿನ ವ್ಯವಹಾರದಲ್ಲಿ ಬಂದಿದ್ದ ಹಣ ಮತ್ತು ಏಳು ಲಕ್ಷ ಸ್ನೇಹಿತ ಸಿದ್ದಿಕ್ ಎಂಬವರಲ್ಲಿ ಪಡೆದಿದ್ದ ಹಣವಾಗಿತ್ತು. ಇನ್ನೋವಾ ಕಾರು ಖರೀದಿಸಲು ಹಣ ಒಟ್ಟು ಮಾಡಿ ಇಟ್ಟಿದ್ದರು ಎನ್ನಲಾಗಿದೆ.
ಬೆಳಗ್ಗೆ ಅಂಗಡಿ ಬಾಗಿಲು ತೆಗೆದಾಗ, ಮೇಲ್ಭಾಗದ ಹಂಚನ್ನು ತೆಗೆದು ಕಳ್ಳರು ನುಗ್ಗಿರುವುದು ಕಂಡುಬಂದಿತ್ತು. ಇದಲ್ಲದೆ, ಇನ್ನೊಂದು ಡ್ರಾವರಿನಲ್ಲಿ ಇಟ್ಟಿದ್ದ 24,500 ನಗದನ್ನು ಕೂಡ ಎಗರಿಸಲಾಗಿತ್ತು. ಕಳ್ಳರು ಕೃತ್ಯ ಎಸಗಿದ ಬಳಿಕ ಒಳಗಿದ್ದ ಸಿಸಿಟಿವಿಯ ಡಿವಿಆರ್ ಅನ್ನೂ ಹೊತ್ತೊಯ್ದಿದ್ದಾರೆ. ಹಾಗಾಗಿ, ಮಹ್ಮದ್ ಶಮೀರ್ ಅಂಗಡಿಯಲ್ಲಿ ಲಕ್ಷಾಂತರ ರೂ. ಹಣವನ್ನು ಇಟ್ಟಿರುವ ಬಗ್ಗೆ ಮಾಹಿತಿ ಇದ್ದವರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪುತ್ತೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
A gang of thieves broke into a footwear shop and decamped with Rs 14,74,500 cash and a CCTV DVR worth from a footwear shop in Kasaba village of Puttur.The theft was reported at 'Prakash Footwear Co' located near Puttur bus stand. The shop belongs to Mohammed Shamir.He also owns a shop that sells second-hand cars.In the complaint, it is said that the owner had kept Rs 8 lac from the car business and Rs 7,00,000 taken from his friend Siddik in a wooden box behind the cash drawer of his footwear shop.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm