ಬ್ರೇಕಿಂಗ್ ನ್ಯೂಸ್
16-09-22 09:15 pm Udupi Correspondent ಕ್ರೈಂ
ಉಡುಪಿ, ಸೆ.16: ಸೈಬರ್ ವಂಚನೆಯಿಂದ ಹಣ ಕಳಕೊಂಡ ಎರಡು ಗಂಟೆಯ ಒಳಗಡೆ ನ್ಯಾಶನಲ್ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದಲ್ಲಿ 70ರಿಂದ 90 ಶೇ. ಪ್ರಕರಣಗಳಲ್ಲಿ ಹಣವನ್ನು ಮರಳಿ ಪಡೆಯಬಹುದಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಂದಾರ್ತಿಯ ಉದ್ಯಮಿ ಮತ್ತು ಪಡುಬಿದ್ರಿಯಲ್ಲಿ 28 ಲಕ್ಷ ಹಣ ಕಳಕೊಂಡ ಪ್ರಕರಣದಲ್ಲಿ ಪೂರ್ತಿ ಹಣವನ್ನು ರಿಕವರಿ ಮಾಡಲಾಗಿದೆ ಎಂದು ಉಡುಪಿ ಎಸ್ಪಿ ಅಕ್ಷಯ್ ಮಚೀಂದ್ರ ಹೇಳಿದ್ದಾರೆ.
ಸೈಬರ್ ಕ್ರೈಮ್ ಪತ್ತೆ ಮಾಡುವುದಕ್ಕಾಗಿಯೇ 2021ರಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ‘ಗೋಲ್ಡನ್ ಅವರ್’ ಹೆಲ್ಪ್ ಲೈನ್ ತರಲಾಗಿದೆ. 1930 ಸಂಖ್ಯೆಗೆ ಫೋನ್ ಮಾಡಿ ದೂರು ಸಲ್ಲಿಸಬಹುದು. ಘಟನೆ ನಡೆದ ಎರಡು ಗಂಟೆಯ ಒಳಗಡೆ ದೂರು ನೀಡಿದಲ್ಲಿ 90 ಶೇಕಡಾ ಹಣವನ್ನು ಮತ್ತೆ ಪಡೆಯುವಲ್ಲಿ ಅವಕಾಶ ಇರುತ್ತದೆ. ಈ ರೀತಿ ಪ್ರಕರಣ ದಾಖಲಾದಲ್ಲಿ ‘ಗೋಲ್ಡನ್ ಅವರ್’ ಎನ್ನಲಾಗುತ್ತದೆ. ಈ ಅವಧಿಯನ್ನು ಅಮೂಲ್ಯ ಎಂದು ಪರಿಗಣಿಸಿ ಈ ಹೆಸರನ್ನು ಇಡಲಾಗಿದೆ. ಪ್ರಕರಣ ದಾಖಲಾದ ಕೂಡಲೇ ದೂರುದಾರರು ಮತ್ತು ಅವರು ಕಳಿಸಿರುವ ಖಾತೆ ಎರಡನ್ನೂ ಫ್ರೀಜ್ ಮಾಡಿ, ಪೊಲೀಸರು ಆರೋಪಿಗಳ ಬೆನ್ನು ಹತ್ತುತ್ತಾರೆ. ಈ ಬಗ್ಗೆ ಸಾರ್ವಜನಿಕರು ವಂಚನೆ ಆದಕೂಡಲೇ ಎಚ್ಚೆತ್ತುಕೊಂಡು ಸೈಬರ್ ಠಾಣೆಗೆ ದೂರು ನೀಡಬೇಕು ಎಂದು ಎಸ್ಪಿ ಮಚೀಂದ್ರ ಹೇಳಿದ್ದಾರೆ.
ಮಂದಾರ್ತಿಯ ಉದ್ಯಮಿ ಪ್ರಮೋದ್ ಎಂಬವರಿಗೆ ಇತ್ತೀಚೆಗೆ, ತನ್ನ ಮಗನನ್ನು ಏರ್ ಲಿಫ್ಟ್ ಮಾಡಬೇಕೆಂದು ಹೇಳಿ ತುರ್ತು ಹಣಕ್ಕಾಗಿ ವ್ಯಕ್ತಿಯೊಬ್ಬ ಫೋನ್ ಮಾಡಿದ್ದ. ತನ್ನನ್ನು ಯೂರೋ ಬಾಂಡ್ ಕಂಪನಿಯ ಮಾಲಕ ಎಂದು ಹೇಳಿ ಪರಿಚಯಿಸಿದ್ದ. ಯುರೋ ಬಾಂಡ್ ಡೀಲರ್ ಆಗಿದ್ದ ಪ್ರಮೋದ್, ಆ ವ್ಯಕ್ತಿಯ ಮಾತನ್ನು ಸುಲಭದಲ್ಲಿ ನಂಬಿದ್ದರು. ತನ್ನ ಮಗನಿಗೆ ಅಪಘಾತದಲ್ಲಿ ಗಾಯಗೊಂಡಿದ್ದು, ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲು ತುರ್ತು 3 ಲಕ್ಷ ಹಣ ಬೇಕೆಂದು ಕೇಳಿದ್ದ.

ಆನಂತರ ಪ್ರಮೋದ್ ತನ್ನಲ್ಲಿದ್ದ ಹಣ ಮತ್ತು ಸ್ನೇಹಿತರ ಮೂಲಕ ಹಣ ಪಡೆದು ಆ ವ್ಯಕ್ತಿಯ ಖಾತೆಗೆ ವರ್ಗಾಯಿಸಿದ್ದರು. ಆದರೆ, ಕೆಲಹೊತ್ತಿನಲ್ಲೇ ಕಂಪನಿಯ ಮಾಲಕರಾಗಿದ್ದವರಿಗೆ ಮೂರು ಲಕ್ಷ ಹಣದ ಕೊರತೆ ಆಗಲಿಕ್ಕಿಲ್ಲ ಎಂದೆನಿಸಿ, ಕಂಪನಿ ಕಡೆಗೆ ಫೋನ್ ಮಾಡಿ ಮಾಹಿತಿ ಕೇಳಿದರು. ಅಷ್ಟು ಹೊತ್ತಿಗೆ ತಾನು ಮೋಸ ಹೋಗಿದ್ದು ಅರಿವಾಗಿದ್ದು ಪ್ರಮೋದ್ ಕೂಡಲೇ ಉಡುಪಿ ಸೈಬರ್ ಠಾಣೆಗೆ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರ ಸೂಚನೆಯಂತೆ ಗೋಲ್ಡನ್ ಅವರ್ ಮೂಲಕ ದೂರು ದಾಖಲಿಸಲಾಗಿತ್ತು. ಆನಂತರ, ಎರಡೂ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿದ್ದಲ್ಲದೆ, ಕೂಡಲೇ ಫೋನ್ ಮಾಡಿದ್ದ ವ್ಯಕ್ತಿಯ ಮೊಬೈಲ್ ಟ್ರೇಸ್ ಮಾಡಿದ್ದರು. ಆತ ಗುಜರಾತಿನಿಂದ ಕರೆ ಮಾಡಿದ್ದು ತಿಳಿದುಬಂದಿತ್ತು. ಅಲ್ಲದೆ, ಮುಂಬೈನ ವ್ಯಕ್ತಿಯೊಬ್ಬನ ಖಾತೆಗೆ ಹಣ ರವಾನೆ ಆಗಿರುವುದನ್ನೂ ಪೊಲೀಸರು ಪತ್ತೆ ಮಾಡಿದ್ದರು.
ಮುಂಬೈಗೆ ತೆರಳಿ ಕಾರ್ಯಾಚರಣೆ ನಡೆಸಿದ ಉಡುಪಿ ಪೊಲೀಸರು ಕೆಲವೇ ದಿನಗಳಲ್ಲಿ ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದಾರೆ. ಅಲ್ಲದೆ, ವಂಚನೆಯಾಗಿದ್ದ ಮೂರು ಲಕ್ಷ ರೂಪಾಯಿ ಹಣವನ್ನು ಮರಳಿ ಪಡೆದಿದ್ದಾರೆ. ಗೋಲ್ಡನ್ ಅವರ್ ಅನ್ನುವ ಪರಿಕಲ್ಪನೆಯಡಿ ಕೇಸು ದಾಖಲಾದಲ್ಲಿ ಈ ರೀತಿ ಕಾರ್ಯಾಚರಣೆ ಮಾಡಲು ಸಾಧ್ಯಾವಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.
District Superintendent of Police Hakay Akshay Machindra has cautioned the public about cyber frauds and requested the members of the public to report such incidences within the golden hour period. In a press note, Hakay Akshay Machindra said, "People will be in doubt in cyber crime cases as to whom to report and how to report incidents.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm