ಬ್ರೇಕಿಂಗ್ ನ್ಯೂಸ್
19-09-22 11:12 pm HK News Desk ಕ್ರೈಂ
ಚಿಕ್ಕಮಗಳೂರು, ಸೆ.20 : ಗೋವನ್ನು ಹತ್ಯೆ ಮಾಡಬಾರದೆಂದು ಸರಕಾರ ಕಾನೂನು ಜಾರಿ ಮಾಡಿದೆ. ಆದರೆ ಇಲ್ಲೊಂದು ಕುಟುಂಬ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಕಡಿದು ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ನಿಶ್ಚಿತಾರ್ಥಕ್ಕೆ ಬರುವ ಬಂಧುಗಳಿಗೆ ಕೆಲವು ಕಡೆ ಭೂರಿ ಭೋಜನ ಏರ್ಪಡಿಸುವುದು ಸಹಜ. ಮಾಂಸಹಾರಿಗಳು ಕೋಳಿ, ಮಟನ್ ಬಳಸಿ ಭರ್ಜರಿ ಊಟವನ್ನೇ ತಯಾರಿಸುತ್ತಾರೆ. ಆದರೆ ತಮ್ಮದೇ ಮನೆಯಲ್ಲಿ ಸಾಕಿರುವ ಹಸುವನ್ನೇ ಕೊಂದು ಊಟ ತಯಾರಿಸಿದ ಘಟನೆ ಯಾರೂ ಕೇಳಿರಲಿಕ್ಕಿಲ್ಲ. ಆ ಮನೆಯವರಿಗೆ ಬೀಫ್ ತಿನ್ನಲೇಬೇಕೆಂಬ ಆಸೆ ಹುಟ್ಟಿತ್ತೋ ಏನೋ.. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮಾನವೀಯ ಎನ್ನುವಂಥ ಘಟನೆಯೇ ನಡೆದುಹೋಗಿದೆ.
ಎನ್ಆರ್ ಪುರ ತಾಲೂಕಿನ ಈಚಿಕೆರೆ ಗ್ರಾಮದ ರೋಷನ್ ಎಂಬವರ ಮನೆಯಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದ ಊಟಕ್ಕೆಂದು ಮನೆಯಲ್ಲಿ ಸಾಕಿದ್ದ ಹಸುವನ್ನೇ ಬಲಿ ಕೊಟ್ಟಿದ್ದಾರೆ. ವಿಷಯ ತಿಳಿದ ಎನ್ಆರ್ ಪುರ ಪೊಲೀಸರು ದಾಳಿ ಮಾಡಿದ್ದು ಹಸುವನ್ನು ಕಡಿದು ಮಾಂಸ ಬೇರ್ಪಡಿಸುವಾಗಲೇ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ದಾಳಿ ಆಗುತ್ತಿದ್ದಾಗಲೇ ಮೂವರು ಓಡಿ ತಪ್ಪಿಸಿಕೊಂಡಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಅನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ಪ್ರಕಾರ, ಕರ್ನಾಟಕದಲ್ಲಿ ಯಾವುದೇ ವ್ಯಕ್ತಿ ಜಾನುವಾರು ಹತ್ಯೆ ಮಾಡಲು ಅವಕಾಶವಿಲ್ಲ. ಕಾನೂನು ಸಮ್ಮತ ಇರುವ ವಧಾಗೃಹದಲ್ಲಿ ಗೋವನ್ನು ಕಡಿಯುವುದಕ್ಕೂ ವಯಸ್ಸು ಮೀರಿದವುಗಳಾಗಿರಬೇಕು. ಅದನ್ನು ವೈದ್ಯರು ದೃಢ ಪಡಿಸಬೇಕೆಂಬ ನಿಯಮ ಇದೆ. ಆದರೆ ಚಿಕ್ಕಮಗಳೂರಿನ ಈ ಕುಟುಂಬ ಕಾನೂನು ಕಟ್ಟಳೆಯ ಗೋಜಿಗೆ ಹೋಗದೇ ತಾವೇ ಸಾಕಿದ ದನವನ್ನು ಕಡಿದು ಅಡುಗೆ ತಯಾರಿಗೆ ಸಿದ್ಧತೆ ನಡೆಸಿದ್ದರು. ಆದರೆ ವಿಷಯ ಹೊರಗೆ ಲೀಕ್ ಆಗುತ್ತಲೇ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಜೈಲಿಗೆ ತಳ್ಳಿದ್ದಾರೆ.
The State Government has enacted a law prohibiting the slaughter of cows. However, a family here chopped off a cow they had kept at home for lunch at an engagement ceremony.In some places, it is natural to arrange bhoori dinner for relatives who come for the engagement. Non-vegetarians prepare a sumptuous meal using chicken and mutton. But no one has ever heard of an incident where a cow kept in his own house was slaughtered and a meal was prepared. Perhaps the family wanted to eat beef. An inhuman incident has taken place in Kafinadu Chikkamagaluru district.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm