ಪ್ರೀತಿಸಿ ಮದುವೆ, ಬುರ್ಖಾ ಧರಿಸಲು ನಿರಾಕರಿಸಿದ್ದಕ್ಕೆ ಹಿಂದು ಪತ್ನಿಯನ್ನು ಕತ್ತು ಸೀಳಿ ಕೊಂದ ಮುಸ್ಲಿಂ ಗಂಡ !

27-09-22 07:35 pm       HK News Desk   ಕ್ರೈಂ

ಹಿಂದು ಯುವತಿಯನ್ನು ಮದುವೆಯಾಗಿ ಆಕೆ ಬುರ್ಖಾ ತೊಟ್ಟಿಲ್ಲ, ಇಸ್ಲಾಮ್ ಸಂಪ್ರದಾಯ ಅನುಸರಿಸಿಲ್ಲ ಎಂದು ಮುಸ್ಲಿಂ ಯುವಕ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ಮುಂಬೈನ ತಿಲಕ್ ನಗರದಲ್ಲಿ ನಡೆದಿದೆ.

ಮುಂಬೈ, ಸೆ.27: ಹಿಂದು ಯುವತಿಯನ್ನು ಮದುವೆಯಾಗಿ ಆಕೆ ಬುರ್ಖಾ ತೊಟ್ಟಿಲ್ಲ, ಇಸ್ಲಾಮ್ ಸಂಪ್ರದಾಯ ಅನುಸರಿಸಿಲ್ಲ ಎಂದು ಮುಸ್ಲಿಂ ಯುವಕ ತನ್ನ ಪತ್ನಿಯನ್ನೇ ಕೊಲೆಗೈದ ಘಟನೆ ಮುಂಬೈನ ತಿಲಕ್ ನಗರದಲ್ಲಿ ನಡೆದಿದೆ. ಆರೋಪಿ ಇಕ್ಬಾಲ್ ಮಹಮ್ಮದ್ ಶೇಖ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ತಿಲಕ್ ನಗರದಲ್ಲಿ ಘಟನೆ ನಡೆದಿದ್ದು, ಯುವತಿ ಕುಟುಂಬಸ್ಥರ ದೂರಿನಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂರು ವರ್ಷಗಳ ಹಿಂದೆ ರೂಪಾಲಿ ಮತ್ತು ಇಕ್ಬಾಲ್ ಮಹಮ್ಮದ್ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಬಳಿಕ ಇಸ್ಲಾಂ ಸಂಪ್ರದಾಯ ಅನುಸರಿಸಬೇಕೆಂದು ಆತನ ಮನೆಯವರು ಒತ್ತಡ ಹೇರಿದ್ದು, ಇದರಿಂದ ಯುವತಿ ತೀವ್ರ ಕಿರುಕುಳ ಅನುಭವಿಸಿದ್ದಳು. ಆದರೆ 22 ವರ್ಷದ ಯುವತಿ ಬುರ್ಖಾ ಧರಿಸಿ ಮನೆಯೊಳಗೆ ಕುಳಿತುಕೊಳ್ಳಲು ಸಿದ್ಧಳಿರಲಿಲ್ಲ. ಬದಲಿಗೆ ತಾನು ಪ್ರತ್ಯೇಕವಾಗಿ ಇರುತ್ತೇನೆಂದು ರೂಪಾಲಿ ಇತ್ತೀಚೆಗೆ ಬೇರೆಯೇ ಉಳಿದುಕೊಂಡಿದ್ದಳು.

Love Jihad: ಬುರ್ಖಾ ಧರಿಸಲು ನಿರಾಕರಿಸಿದ ರೂಪಾಲಿ, ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ!

ಸೆ.26ರಂದು ಸಂಜೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ಮಹಮ್ಮದ್ ಇಕ್ಬಾಲ್, ಜಗಳ ಶುರು ಮಾಡಿದ್ದಾನೆ. ತನಗೆ ಡೈವರ್ಸ್ ನೀಡುವಂತೆ ರೂಪಾಲಿ ಕೇಳಿದ್ದಕ್ಕೆ ಮಗುವನ್ನು ಬಿಟ್ಟು ಕೊಡುವಂತೆ ಹೇಳಿದ್ದ. ಮಗುವನ್ನು ನೀಡಲು ರೂಪಾಲಿ ನಿರಾಕರಿಸಿದ್ದು ಇದೇ ವಿಚಾರದಲ್ಲಿ ಜಗಳ ನಡೆದು ಇಕ್ಬಾಲ್ ತನ್ನ ಪತ್ನಿಯ ಕುತ್ತಿಗೆಯನ್ನು ಚೂರಿಯಿಂದ ಸೀಳಿ ಕೊಲೆ ಮಾಡಿದ್ದಾನೆ.

Mumbai: Man murders Hindu wife for refusing to wear burqa, follow Islamic  tradition

ಮದುವೆಯಾದ ದಿನದಿಂದಲೂ ರೂಪಾಲಿ ಬುರ್ಖಾ ಧರಿಸಬೇಕೆಂದು ಇಕ್ಬಾಲ್ ಮನೆಯವರು ಒತ್ತಾಯಿಸಿದ್ದರು. ಆದರೆ ರೂಪಾಲಿ ಬುರ್ಖಾ ಧರಿಸುವುದಕ್ಕೆ ನಿರಾಕರಿಸಿದ್ದಳು. ಇದೇ ವಿಚಾರದಲ್ಲಿ ಇಕ್ಬಾಲ್ ಮತ್ತು ರೂಪಾಲಿ ಮಧ್ಯೆ ಜಗಳ ನಡೆಯುತ್ತಲೇ ಇತ್ತು. ಇತ್ತೀಚೆಗೆ ಕೆಲವು ತಿಂಗಳಿಂದ ರೂಪಾಲಿ ಗಂಡನ ಮನೆಯನ್ನು ಬಿಟ್ಟು ಮಗುವಿನೊಂದಿಗೆ ಪ್ರತ್ಯೇಕವಾಗಿ ಉಳಿದುಕೊಂಡಿದ್ದಳು. ಡೈವರ್ಸ್ ನೀಡುವಂತೆ ಕೇಳಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. 

Iqbal Mohammad Sheikh, a Mumbai resident, was arrested for allegedly murdering his Hindu wife in Tilak Nagar area for refusing to wear a burqa and follow Islamic practices. Sheikh was taken into custody shortly after the incident, based on the information given by the victim's family.The victim, Rupali, and the accused, Iqbal Mohammad Sheikh, had been married for three years. Since their wedding, Rupadi faced relentless pressure from Sheikh's family to follow Islamic tradition and wear a burqa, a demand she was not willing to fulfil.