ಬ್ರೇಕಿಂಗ್ ನ್ಯೂಸ್
01-10-22 10:55 pm HK News Desk ಕ್ರೈಂ
ಕೊಟ್ಟಾಯಂ, ಅ.1: ರವಿಚಂದ್ರನ್ ಅಭಿನಯದ ದೃಶ್ಯಂ ಸಿನಿಮಾದಲ್ಲಿ ಮನೆಯ ಹಿಂಭಾಗದಲ್ಲಿಯೇ ಶವ ಹೂತಿಟ್ಟು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ, ಪೊಲೀಸರ ತನಿಖೆಯನ್ನೇ ದಿಕ್ಕು ತಪ್ಪಿಸುವ ಕತೆಯಿದೆ. ಪೊಲೀಸರನ್ನು ಯಾಮಾರಿಸಲು ಅದೇ ರೀತಿಯಲ್ಲಿ ಸ್ನೇಹಿತನ ಕೊಲೆಗೈದು ಮನೆಯಂಗಳದಲ್ಲೇ ಶವ ಹೂತಿಟ್ಟ ಪ್ರಕರಣ ಕೇರಳದಲ್ಲಿ ಬೆಳಕಿಗೆ ಬಂದಿದೆ.
ಆಲಪ್ಪುಳ ಜಿಲ್ಲೆಯ ಆರ್ಯಾಡು ಗ್ರಾಮದ ನಿವಾಸಿ, ಬಿಜೆಪಿ ಕಾರ್ಯಕರ್ತ ಬಿಂದು ಕುಮಾರ್ (42) ಸೆ.26ರಂದು ನಾಪತ್ತೆಯಾಗಿದ್ದ. ಸಂಬಂಧಿಕರು ಯಾರೋ ಸಾವನ್ನಪ್ಪಿದ್ದರಿಂದ ಅಲ್ಲಿಗೆ ಹೋಗಿ ಬರುತ್ತೇನೆಂದು ತಾಯಿ ಬಳಿ ಹೇಳಿ ಹೋಗಿದ್ದ ಯುವಕ ಹಿಂತಿರುಗಿರಲಿಲ್ಲ. ಎರಡು ದಿನಗಳ ಬಳಿಕ ಸೆ.28ರಂದು ಆತನ ತಾಯಿ ಆಲಪ್ಪುಝ ಉತ್ತರ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದರು. ಪೊಲೀಸರು ಮೊಬೈಲ್ ಟ್ರೇಸ್ ಮಾಡಿದಾಗ, ಕೊನೆಯ ಬಾರಿಗೆ ಚೆಂಗನಾಶ್ಶೇರಿಯಲ್ಲಿ ಲೊಕೇಶನ್ ತೋರಿಸಿತ್ತು. ಆನಂತರ ಸ್ವಿಚ್ ಆಫ್ ಆಗಿತ್ತು.
ಚೆಂಗನಾಶ್ಶೇರಿಯಲ್ಲಿ ಬಿಂದುಗೆ ಯಾರು ಪರಿಚಯಸ್ಥರಿದ್ದಾರೆ ಎನ್ನುವ ಬಗ್ಗೆ ಸಂಬಂಧಿಕರಲ್ಲಿ ಪೊಲೀಸರು ವಿಚಾರಿಸಿದ್ದರು. ಮುತ್ತು ಕುಮಾರ್ ಎಂಬಾತ ಪರಿಚಯದ ವ್ಯಕ್ತಿಯಿದ್ದಾನೆಂದು ತಿಳಿದುಬಂದಿತ್ತು. ಇದೇ ಜಾಡು ಹಿಡಿದ ಪೊಲೀಸರು ಮುತ್ತು ಕುಮಾರ್ ಬಳಿ ಬಿಂದುಮೋನ್ ಬಗ್ಗೆ ಪ್ರಶ್ನೆ ಮಾಡಿದ್ದರು. ಆದರೆ ಮುತ್ತು ಕುಮಾರ್ ತನಗೇನು ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದ. ಆದರೆ ಮುತ್ತು ಕುಮಾರ್ ಮನೆ ಇರುವ ಚೆಂಗನಾಶ್ಶೇರಿಯ ಎಸಿ ಕಾಲನಿಯಲ್ಲೇ ಬಿಂದುಮೋನ್ ಮೊಬೈಲ್ ಲೊಕೇಶನ್ ಇತ್ತು. ಹೀಗಾಗಿ ಸಂಶಯಕ್ಕೀಡಾಗಿದ್ದ ಪೊಲೀಸರು ಮುತ್ತು ಕುಮಾರ್ ಮನೆಯನ್ನು ಸರ್ಚ್ ಮಾಡಿದ್ದರು.
ಪರಿಶೀಲನೆ ವೇಳೆ ಮನೆಯ ಅಂಗಳದಲ್ಲಿ ಹೊಸತಾಗಿ ಕಾಂಕ್ರೀಟ್ ಹಾಕಿದ್ದು ಕಂಡುಬಂದಿತ್ತು. ಏನಿದು ಖಾಲಿ ನೆಲಕ್ಕೆ ಕಾಂಕ್ರೀಟ್ ಹಾಕಿದ್ದೀಯಲ್ಲಾ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಉತ್ತರಿಸಲು ತಡಕಾಡಿದಾಗ ಸಂಶಯ ಬಂದ ಪೊಲೀಸರು ಕಾಂಕ್ರೀಟ್ ನೆಲವನ್ನು ಅಗೆದಿದ್ದಾರೆ. ಶನಿವಾರ ಬೆಳಗ್ಗೆ ಕಾಂಕ್ರೀಟ್ ಅಗೆದು ನೋಡಿದಾಗ ಬಿಂದು ಮೋನ್ ಶವ ಸಿಕ್ಕಿದೆ. ಫಿಂಗರ್ ಪ್ರಿಂಟ್, ಶ್ವಾನದಳ, ಫಾರೆನ್ಸಿಕ್ ತಂಡದವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಏಳು ಗಂಟೆಗಳ ಕಾಲ ಅಗೆದು ತೆಗೆದ ಶವವನ್ನು ಪೋಸ್ಟ್ ಮಾರ್ಟಂ ನಡೆಸಲು ಆಸ್ಪತ್ರೆಗೆ ಒಯ್ದಿದ್ದಾರೆ.
ಮೇಲ್ನೋಟಕ್ಕೆ ಮುತ್ತುಕುಮಾರ್ ಸ್ನೇಹಿತನ ಕೊಲೆಗೈದು ತನ್ನ ಮನೆಯ ಅಂಗಳದಲ್ಲಿಯೇ ಶವ ಹೂತು ಹಾಕಿದ್ದಾನೆ ಅನ್ನೋದು ಕಂಡುಬಂದಿದೆ. ಯಾಕಾಗಿ ಕೊಲೆ ಮಾಡಿದ್ದಾನೆ, ಕೊಲೆ ಕೃತ್ಯಕ್ಕೆ ಬೇರೆ ಯಾರು ಸಹಕಾರ ನೀಡಿದ್ದಾರೆ ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಂದು ಮೋನ್ ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತನಾಗಿದ್ದು ಅವಿವಾಹಿತನಾಗಿದ್ದ. ಹೀಗಾಗಿ ನಾಲ್ಕು ದಿನಗಳಿಂದ ಬಿಜೆಪಿ ಕಾರ್ಯಕರ್ತ ನಾಪತ್ತೆಯಾಗಿದ್ದು ಕುತೂಹಲಕ್ಕೂ ಕಾರಣವಾಗಿತ್ತು. ಇದೀಗ ದೃಶ್ಯಂ ಸಿನಿಮಾ ಮಾದರಿಯಲ್ಲೇ ಕೊಲೆಗೈದು ತನ್ನದೇ ಮನೆಯಂಗಳದಲ್ಲಿ ಶವ ಹೂತು ಹಾಕಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
The body of a missing BJP worker was recovered from under the floor of a house in Kerala’s Kottayam district. The modus oprendi is similar to the plot of the hit film Drishyam.Bindu Kumar, 43, has been missing since September 26 and on September 28 his family filed a missing person’s complaint.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm