ಬ್ರೇಕಿಂಗ್ ನ್ಯೂಸ್
22-10-22 07:29 pm Mangalore Correspondent ಕ್ರೈಂ
ಮಂಗಳೂರು, ಅ.22: ದುಬೈನಲ್ಲಿದ್ದ ವ್ಯಕ್ತಿಯಿಂದ 2.40 ಕೋಟಿ ರೂಪಾಯಿ ಮೌಲ್ಯದ ಜಾಗ ತೋರಿಸಿ, ಅದನ್ನು ಖರೀದಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ ಘಟನೆ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ಲಾ ಉದ್ಯಾವರ ಬೆಲ್ಲಿಕುಂಞ ಎಂಬವರು ದುಬೈನಲ್ಲಿ ಉದ್ಯೋಗದಲ್ಲಿದ್ದು, ಮಂಗಳೂರಿನ ಫಳ್ನೀರ್ ನಲ್ಲಿ ಅಪಾರ್ಟ್ಮೆಂಟಿನಲ್ಲಿ ಫ್ಲಾಟ್ ಹೊಂದಿದ್ದಾರೆ. ಫ್ಲ್ಯಾಟ್ ಖಾಲಿ ಇಡುವುದು ಬೇಡ ಎಂದು ಸಂಬಂಧಿಕ ಮಹಮ್ಮದ್ ಅಬ್ದುಲ್ ಮಜೀದ್ ಎಂಬವರನ್ನು ಉಳಿಯಲು ಕೊಟ್ಟಿದ್ದರು. ಇದೇ ವೇಳೆ, ಅಬ್ದುಲ್ಲಾ ಅವರು ಜಾಗ ಖರೀದಿಸಲು ನೋಡುತ್ತಿದ್ದಾರೆಂದು ತಿಳಿದು ತಾನೇ ಡೀಲ್ ಮಾಡಲು ಮುಂದಾಗಿದ್ದರು.
ಆನಂತರ, ಅಬ್ದುಲ್ಲಾ ಅವರಿಗೆ ಫೋನ್ ಕರೆ ಮಾಡಿದ್ದ ಮಹಮ್ಮದ್ ಅಬ್ದುಲ್ ಮಜೀದ್ ಕೇರಳದಲ್ಲಿ 1.01 ಎಕ್ರೆ ಜಾಗ ಇದೆ. ಅದರ ಮಾಲಕರೂ ದುಬೈನಲ್ಲಿದ್ದಾರೆ. ಒಳ್ಳೆ ಜಾಗವೆಂದು ಹೇಳಿ ಅದರ ಫೋಟೋ ಕಳುಹಿಸಿದ್ದರು. ಆನಂತರ, ಜಾಗ ನೋಡಿ ಓಕೆ ಆಗಿದ್ದರಿಂದ ಮಂಗಳೂರಿಗೆ ಬಂದಿದ್ದ ಅಬ್ದುಲ್ಲಾ ಅವರು ಡೀಲ್ ಮುಗಿಸುವಂತೆ ಹೇಳಿ 2,16,96,470 ರೂ.ಗಳನ್ನು ಮಹಮ್ಮದ್ ಅಬ್ದುಲ್ ಮಜೀದ್ ಅವರಿಗೆ ನೀಡಿದ್ದರು.
ಆದರೆ ಹಣ ಪಡೆದಿದ್ದ ಮಹಮ್ಮದ್ ಜಾಗವನ್ನು ಅಬ್ದುಲ್ಲಾ ಅವರ ಹೆಸರಿಗೆ ರಿಜಿಸ್ಟರ್ ಮಾಡಿಕೊಟ್ಟಿರಲಿಲ್ಲ. ಆನಂತರ, ಈ ಬಗ್ಗೆ ಪ್ರಶ್ನೆ ಮಾಡಿದಾಗ ಬೆದರಿಕೆ ಹಾಕಿದ್ದರು. 2.40 ಕೋಟಿ ಹಣದಲ್ಲಿ ಖರೀದಿಸಿದ್ದ ಜಾಗವನ್ನು ಆಬಳಿಕ ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡಿದ್ದರು. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಅಬ್ದುಲ್ಲಾ ಅವರು ದೂರು ನೀಡಿದ್ದಾರೆ.
A case is filed in city CEN police station accusing cheating Rs 2.40 crore on the pretext of providing one acre of land in Kerala.Abdulla Udyavara Bellikunhi is the victim of fraud. He was working and living in Dubai and has an apartment at Falnir. He had given the flat to his relative Mohammed Abdul Majid P for residing. Mohammed Abdul came to know through others that Abdulla is looking out for land. He spoke to Abdulla over a phone call and said that there is 1.01 acre plot for sale in Kerala and its owner is in Dubai.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm