ಬ್ರೇಕಿಂಗ್ ನ್ಯೂಸ್
19-11-22 09:07 pm HK News Desk ಕ್ರೈಂ
ಎರ್ನಾಕುಲಂ, ನ.19: 19 ವರ್ಷದ ಕಾಸರಗೋಡು ಮೂಲದ ಮಾಡೆಲ್ ಒಬ್ಬಳನ್ನು ನಾಲ್ವರು ಸೇರಿ ನಡುರಾತ್ರಿಯಲ್ಲಿ ಕಾರಿನಲ್ಲಿ ಸಾಗುತ್ತಲೇ ಅತ್ಯಾಚಾರ ಎಸಗಿರುವ ಘಟನೆ ಕೊಚ್ಚಿಯಲ್ಲಿ ನಡೆದಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಗುರುವಾರ ರಾತ್ರಿ ಕೊಚ್ಚಿನ್ ಶಿಪ್ ಯಾರ್ಡ್ ಬಳಿಯಿರುವ ಪಬ್ ಗೆ ಮಾಡೆಲ್ ತನ್ನ ಗೆಳೆತಿ ಜೊತೆ ತೆರಳಿದ್ದಳು. ಆನಂತರ ತಡರಾತ್ರಿ ಆಕೆಯನ್ನು ಕಾಕ್ಕನಾಡ್ ನಲ್ಲಿರುವ ಆಕೆಯ ಪಿಜಿಗೆ ಬಿಡುವುದಾಗಿ ಹೇಳಿ ಗೆಳೆಯರು ಸೇರಿ ಕಾರು ಹತ್ತಿಸಿದ್ದಾರೆ. ಕುಡಿದು ಟೈಟ್ ಆಗಿದ್ದ ಯುವತಿಯನ್ನು ಕಾರಿನಲ್ಲಿ ತಿರುಗಾಡುತ್ತಲೇ ಗ್ಯಾಂಗ್ ರೇಪ್ ಮಾಡಿದ್ದಾರೆ. ಆನಂತರ ಹಲ್ಲೆ ನಡೆಸಿ, ನಸುಕಿನಲ್ಲಿ ಯುವತಿಯನ್ನು ಕಾಕನಾಡಿನ ಪಿಜಿ ಸೆಂಟರಿಗೆ ಬಿಟ್ಟು ಹೋಗಿದ್ದರು.
ಯುವತಿಯನ್ನು ಪಿಜಿಯಲ್ಲಿದ್ದ ಆಕೆಯ ಗೆಳತಿ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದ್ದಳು. ವೈದ್ಯರು ಪರೀಕ್ಷಿಸಿ ಗ್ಯಾಂಗ್ ರೇಪ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ಮಹಿಳೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರೇಪ್ ಒಳಗಾಗಿರುವ ಯುವತಿ ಕಾಸರಗೋಡಿನವಳಾಗಿದ್ದು, ಕೊಚ್ಚಿಯಲ್ಲಿದ್ದುಕೊಂಡು ಓದುತ್ತಿದ್ದಳು. ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಯುವತಿ, ರಾಜಸ್ಥಾನಿ ಯುವತಿ ಡಿಂಪಲ್ ಲಾಂಬಾ ಜೊತೆಗೆ ಪಬ್ ಗೆ ಹೋಗಿದ್ದೆ. ಅಲ್ಲಿ ಬೀಯರ್ ಜೊತೆಗೆ ಅಮಲು ಬರಿಸುವ ಪದಾರ್ಥ ಮಿಕ್ಸ್ ಮಾಡಿ ನನಗೆ ಕೊಟ್ಟಿದ್ದಾರೆ. ಹಿಂತಿರುಗಿ ಹೋಗುವ ಸಂದರ್ಭದಲ್ಲಿ ಒತ್ತಾಯದಿಂದ ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಕಾರಿನಲ್ಲಿ ತೆರಳುತ್ತಿದ್ದಾಗಲೇ ಕೊಡುಂಗಲ್ಲೂರು ನಿವಾಸಿಗಳಾದ ನಿತಿನ್, ವಿವೇಕ್, ಸುದೀಪ್ ಸೇರಿ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳು ಡಿಂಪಲ್ ಲಾಂಬಾಗೆ ಗೆಳೆಯರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ.
Four people, including a woman, were taken into custody in connection with the alleged rape of a 19-year-old model in a moving car, police said on Friday. Three men, natives of Kodungallur, allegedly sexually assaulted the girl, hailing from Kasaragod, in their vehicle on Thursday night. The victim, who was staying at Kakkanad in the city, was invited to a DJ party by her friend, a Rajasthani woman, and was introduced to the men, they said.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm