ಬ್ರೇಕಿಂಗ್ ನ್ಯೂಸ್
21-11-22 06:51 pm HK News Desk ಕ್ರೈಂ
ಇಂದೋರ್, ನ.21: ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ಸಂಗಾತಿಯನ್ನು ಕೊಂದು 35 ತುಂಡುಗಳನ್ನಾಗಿ ಕತ್ತರಿಸಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಮಧ್ಯಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯ ಶೀಲ ಶಂಕಿಸಿ ಗಂಡನೇ ಆಕೆಯನ್ನು ಕಡಿದು ಕತ್ತರಿಸಿ ಹಾಕಿದ್ದಾನೆ.
ಹೀಗೆ ಕತ್ತರಿಸಲ್ಪಟ್ಟ ಮಹಿಳೆಯನ್ನು ಸರಸ್ವತಿ ಪಟೇಲ್ ಎಂದು ಗುರುತಿಸಿದ್ದು, ಆಕೆಯ ಗಂಡನನ್ನು ರಾಮಕಿಶೋರ್ ಪಟೇಲ್ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕಡಿದು ಹಾಕಲು ಬಳಸಿದ ಹರಿತ ಆಯುಧವನ್ನು ಮತ್ತು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿಯನ್ನು ಕಡಿದು ಹಾಕಿದ್ದಲ್ಲದೆ ಎರಡಾಗಿ ವಿಭಜಿಸಿ ಪ್ರತ್ಯೇಕವಾಗಿ ಎರಡು ಕಡೆ ಹೂತು ಹಾಕಿದ್ದ. ನರಸಿಂಗಪುರ್ ಜಿಲ್ಲೆಯ ಕರೇಲಿ ಎಂಬಲ್ಲಿ ಘಟನೆ ನಡೆದಿದೆ.
ನ.13ರಂದು ತನ್ನ ಪತ್ನಿ ನಾಪತ್ತೆ ಆಗಿರುವುದಾಗಿ ರಾಮಕಿಶೋರ್ ಪೊಲೀಸ್ ದೂರು ನೀಡಿದ್ದ. ಆದರೆ ಆತನ ಈ ಹೇಳಿಕೆಯಿಂದ ಆಕೆಯ ಸೋದರಿ ಸಂಶಯಕ್ಕೀಡಾಗಿದ್ದರು. ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾಗಲೇ ಕಾಡಿನಲ್ಲಿ ಆಕೆಯ ಬಟ್ಟೆಗಳು ಲಭಿಸಿದ್ದವು. ಆನಂತರ ಹುಡುಕಾಟ ನಡೆಸಿದಾಗ, ಮಹಿಳೆಯ ತಲೆಯ ಭಾಗ ಒಂದು ಕಡೆಯಲ್ಲಿ ಪತ್ತೆಯಾಗಿದೆ. ಆನಂತರ ದೇಹದ ಇನ್ನಿತರ ಭಾಗಗಳು ಕೆಲವು ಕಡೆ ಸಿಕ್ಕಿದ್ದು, ಗಂಡ ರಾಮಕಿಶೋರ್ ನನ್ನು ಸಂಶಯದ ಮೇರೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ತನ್ನ ಕೃತ್ಯ ಒಪ್ಪಿಕೊಂಡಿದ್ದಾನೆ. ಪತ್ನಿಯ ನಡವಳಿಕೆಯಿಂದ ಸಂಶಯ ಹೊಂದಿದ್ದ ರಾಮಕಿಶೋರ್, ಕಾಡಿಗೆ ಕರೆದೊಯ್ದು ಅಲ್ಲಿಯೇ ತನ್ನಲ್ಲಿದ್ದ ಕೊಡಲಿಯಿಂದ ತಲೆಯನ್ನು ಕಡಿದು ಹಾಕಿದ್ದಾನೆ. ಆನಂತರ ರುಂಡ ಮುಂಡ ಬೇರೆಯಾಗಿಸಿ ದೇಹದ ಭಾಗವನ್ನು ಹೂತಿದ್ದ.
In a similar incident to the Shraddha Walkar murder in Delhi, where the accused strangled, chopped his live-in partner into 35 pieces and then dumped those pieces at different places in Mehrauli forest, a man in Madhya Pradesh’s Shahdol cut his wife into two and buried those parts at different places in a forest. The deceased was identified as Saraswati Patel and her husband, the accused as Ram Kishore Patel. The accused allegedly killed his wife with an axe on suspicion of infidelity.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 12:28 pm
HK News Desk
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
28-07-25 01:14 pm
Mangalore Correspondent
Sullia, Rain, Mangalore Death: ಸುಳ್ಯದಲ್ಲಿ ಮಳೆ...
28-07-25 10:51 am
Mangalore Kodakkena Restaurant owner Suicide:...
27-07-25 09:58 pm
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm