ಬ್ರೇಕಿಂಗ್ ನ್ಯೂಸ್
24-11-22 09:17 pm HK News Desk ಕ್ರೈಂ
ದಾವಣಗೆರೆ, ನ.24: ಆರು ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಕೊಂದು ಕಾಡಿನಲ್ಲಿ ಹೂತು ಹಾಕಿ, ಏನೂ ಆಗದಂತೆ ನಾಟಕವಾಡಿದ ಕಿರಾತಕ ಪತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿಯ ಗಂಗೊಂಡನಹಳ್ಳಿ ನಿವಾಸಿ ಮೋಹನ್ ಕುಮಾರ್ (25) ಆರೋಪಿಯಾಗಿದ್ದು ಆತನ ಹೆತ್ತವರು ನಾಪತ್ತೆಯಾಗಿದ್ದಾರೆ. ಆತನ ಪತ್ನಿ ಚಂದ್ರಕಲಾ(21) ಮೃತ ಯುವತಿ. ಒಂದು ವರ್ಷದ ಹಿಂದೆ ಚಂದ್ರಕಲಾ ಮತ್ತು ಮೋಹನ್ ಮದುವೆಯಾಗಿದ್ದು, ಆರಂಭದಲ್ಲಿಯೇ ಪತ್ನಿಯ ಬಗ್ಗೆ ಕಿರುಕುಳ ನೀಡುತ್ತಿದ್ದ. ಆಕೆಯ ನಡತೆ ಬಗ್ಗೆ ಸಂಶಯಪಟ್ಟು ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ. ಜೊತೆಗೆ, ವರದಕ್ಷಿಣೆ ತರುವಂತೆ ಪೀಡನೆಯನ್ನೂ ನೀಡುತ್ತಿದ್ದ.
ಯಾರ ಜೊತೆ ಮಾತನಾಡಿದರೂ, ಅವರಿಗೆ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದ. ಇದೇ ರೀತಿ ವಾಗ್ವಾದ, ಸಂಶಯ ಪಡುವುದು ನಡೆದಿದ್ದರಿಂದ ತನ್ನ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು. ಅಲ್ಲದೆ, ಗಂಡನ ಮನೆ ಬಿಟ್ಟು ಒಮ್ಮೆ ತವರು ಮನೆಗೆ ಹೋಗಿ ಕುಳಿತಿದ್ದಳು. ಆನಂತರ, ಮಾತುಕತೆ ಮಾಡಿ ಮನೆಯವರು ಒಂದೂವರೆ ತಿಂಗಳ ಹಿಂದೆ ಚಂದ್ರಕಲಾಳನ್ನು ಗಂಡನ ಮನೆಗೆ ಕಳಿಸಿಕೊಟ್ಟಿದ್ದರು. ಮತ್ತೆ ಪತ್ನಿಯೊಂದಿಗೆ ಜಗಳವಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದ. ಅಲ್ಲದೆ, ಆಕೆಯ ಶವವನ್ನು ಚಿಕ್ಕಮಗಳೂರಿನ ಅಜ್ಜಂಪುರ ಬಳಿಯ ಹುನಘಟ್ಟ ಎಂಬಲ್ಲಿನ ಕಾಡಿಗೆ ಕೊಂಡೊಯ್ದು ಗುಂಡಿ ತೋಡಿ ಹೂತು ಹಾಕಿದ್ದ.
ಆನಂತರ, ಅಕ್ಟೋಬರ್ 10ರಂದು ಆರೋಪಿ ಮೋಹನ್ ಕುಮಾರ್ ಪೊಲೀಸ್ ದೂರು ಕೊಟ್ಟು ತನ್ನ ಪತ್ನಿ ನಾಪತ್ತೆಯಾಗಿದ್ದು, ಯಾರ ಜೊತೆಗೋ ಓಡಿ ಹೋಗಿದ್ದಾಳೆಂದು ತಿಳಿಸಿದ್ದ. ಆದರೆ ಚಂದ್ರಕಲಾ ಮನೆಯವರು ಮೋಹನ್ ಕುಮಾರ್ ಬಗ್ಗೆಯೇ ಸಂಶಯ ಪಟ್ಟಿದ್ದು, ಪೊಲೀಸ್ ದೂರು ನೀಡಿದ್ದರು. ಪೊಲೀಸರು ಆತನ ಚಲನವಲನದ ಬಗ್ಗೆ ಗಮನಿಸಿದಾಗ, ಪತ್ನಿ ನಾಪತ್ತೆಯಾಗಿದ್ದಾಳೆಂದು ಹೇಳಿದ ದಿವಸ ತಡರಾತ್ರಿ 2 ಗಂಟೆ ವೇಳೆಗೆ ತನ್ನ ಕಾರಿನಲ್ಲಿ ಹೊರಗೆ ಹೋಗಿರುವುದು ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಡ್ರಿಲ್ ಮಾಡಿದಾಗ ನಿಜ ವಿಚಾರ ಬಾಯಿಬಿಟ್ಟಿದ್ದಾನೆ. ಅಲ್ಲದೆ, ಆತನನ್ನೇ ಚಿಕ್ಕಮಗಳೂರಿನ ಕಾಡಿಗೆ ಕರೆದೊಯ್ದು ಶವವನ್ನು ಮತ್ತೆ ಅಗೆದು ತೆಗೆಸಿದ್ದಾರೆ. ಇದೀಗ ಶವದ ಪೋಸ್ಟ್ ಮಾರ್ಟಂ ನಡೆಸಲು ಕಳಿಸಲಾಗಿದೆ.
ತನಿಖೆಯಲ್ಲಿ ಪತ್ನಿಯನ್ನು ಅದಕ್ಕೂ ಮೊದಲೇ ಕೊಲೆ ಮಾಡಲು ಪ್ಲಾನ್ ಹಾಕಿದ್ದ ಅನ್ನುವುದೂ ತಿಳಿದುಬಂದಿದೆ. ಅಲ್ಲದೆ, ಕೊಂದು ಸಾಕ್ಷ್ಯ ಸಿಗದಂತೆ ಮಾಡುವುದು, ಕಾಡಿನಲ್ಲಿ ಮೊದಲೇ ಹೂತು ಹಾಕಲು ಗುಂಡಿ ತೋಡಿದ್ದ ವಿಚಾರವನ್ನೂ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
A man in Karnataka's Davanagere district was arrested on Thursday for allegedly killing his 6-month pregnant wife and burying her body in the jungle - in a pit he had prepared much earlier, police said. The accused is identified as Mohan Kumar, 25, a resident of Gangondanahalli near Channagiri town near Davanagere. Police have launched a hunt for parents of Mohan, who are on the run.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm