ಬ್ರೇಕಿಂಗ್ ನ್ಯೂಸ್
26-11-22 04:17 pm HK News Desk ಕ್ರೈಂ
ನವದೆಹಲಿ, ನ.26: ಆಸ್ಟ್ರೇಲಿಯಾದಲ್ಲಿ ಮಹಿಳೆಯನ್ನು ಕೊಂದು ಭಾರತಕ್ಕೆ ಬಂದು ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 2018ರಲ್ಲಿ ಕ್ವೀನ್ಸ್ ಲ್ಯಾಂಡ್ ನಲ್ಲಿ ಮಹಿಳೆಯನ್ನು ಕೊಂದು ಪರಾರಿಯಾಗಿದ್ದ ರಾಜ್ವಿಂದರ್ ಸಿಂಗ್ ಬಗ್ಗೆ ಸುಳಿವು ಕೊಟ್ಟವರಿಗೆ ಬರೋಬ್ಬರಿ ಹತ್ತು ಲಕ್ಷ ಆಸ್ಟ್ರೇಲಿಯನ್ ಡಾಲರ್ (5.31 ಕೋಟಿ ರೂ.) ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾ ಸರಕಾರ ಘೋಷಣೆ ಮಾಡಿತ್ತು.
ಆಸ್ಟ್ರೇಲಿಯಾದ ಪೊಲೀಸರು ಪಂಜಾಬ್, ದೆಹಲಿಗೆ ಬಂದು ಹುಡುಕಾಟ ನಡೆಸಿದ್ದರು. ಅಲ್ಲದೆ, ಪಂಜಾಬಿನ ಅಮೃತಸರ, ಆತನ ಹುಟ್ಟೂರು ಮೋಗಾ ಜಿಲ್ಲೆಯಲ್ಲೂ ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ರಾಜ್ವಿಂದರ್ ಸಿಂಗ್ ಪತ್ತೆ ಸಾಧ್ಯವಾಗಿರಲಿಲ್ಲ. ಶುಕ್ರವಾರ ರಾಜ್ವಿಂದರ್ ನನ್ನು ದೆಹಲಿಯಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಯನ್ನು ನ.30ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಬಂಧನ ಖಚಿತವಾಗುತ್ತಿದ್ದಂತೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪೊಲೀಸರು ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ.
ನಾಯಿ ಬೊಗಳಿದ್ದಕ್ಕೆ ಕೊಲೆ ಮಾಡಿದ್ನಾ?
2018ರ ಅಕ್ಟೋಬರ್ 21ರಂದು ಕ್ವೀನ್ಸ್ ಲ್ಯಾಂಡ್ ಬೀಚ್ ನಲ್ಲಿ ತನ್ನ ನಾಯಿ ಜೊತೆಗೆ ವಾಕಿಂಗ್ ಹೋಗುತ್ತಿದ್ದ ಟೋಯಾ ಕಾರ್ಡಿಂಗ್ಲೇ ಎಂಬ ಮಹಿಳೆಯನ್ನು ರಾಜ್ವಿಂದರ್ ಸಿಂಗ್ ಚಾಕು ಇರಿದು ಕೊಲೆ ಮಾಡಿದ್ದಾರೆ ಎನ್ನುವ ಆರೋಪಗಳಿವೆ. ರಾಜ್ವಿಂದರ್ ಕುಟುಂಬ ಎರಡು ದಶಕಗಳಿಂದ ಕ್ವೀನ್ಸ್ ಲ್ಯಾಂಡ್ ನಲ್ಲಿ ನೆಲೆಸಿದ್ದು, ಹಲವು ವರ್ಷಗಳಿಂದ ಅಲ್ಲಿನ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ತನ್ನನ್ನು ನೋಡಿ ಕಾರ್ಡಿಂಗ್ಲೇ ಜೊತೆಗಿದ್ದ ನಾಯಿ ಬೊಗಳಿದ್ದರಿಂದ ಸಿಟ್ಟುಗೊಂಡು ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ, ಮಹಿಳೆ ಮತ್ತು ರಾಜ್ವಿಂದರ್ ನಡುವೆ ಜಗಳವಾಗಿದ್ದು, ತನ್ನ ಕೈಯಲ್ಲಿದ್ದ ಚೂರಿಯಲ್ಲಿ ಇರಿದು ಮಹಿಳೆಯನ್ನು ಸಾಯಿಸಿದ್ದಾನೆ. ಕ್ವೀನ್ಸ್ ಲ್ಯಾಂಡ್ ಬೀಚ್ ನಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಸಮುದ್ರ ಬದಿಯ ಹೊಯ್ಗೆಯಲ್ಲಿ ಹೂತು ಹಾಕಿದ್ದಾನೆ. ನಾಯಿಯನ್ನು ಅಲ್ಲಿಯೇ ಮರಕ್ಕೆ ಕಟ್ಟಿ ಹಾಕಿ ಮರಳಿದ್ದ.
ಘಟನೆಯ ಬಳಿಕ ಬೆದರಿದ್ದ ರಾಜ್ವಿಂದರ್ ತನ್ನ ಮೂರು ಮಕ್ಕಳು ಮತ್ತು ಪತ್ನಿಯನ್ನು ಅಲ್ಲಿಯೇ ಬಿಟ್ಟು ಭಾರತಕ್ಕೆ ಮರಳಿದ್ದ. ಆತನ ತಂದೆ ಅಮರ್ ಸಿಂಗ್ ಮತ್ತು ಮಾವನೂ ಅಲ್ಲಿಯೇ ಇದ್ದರು. ನಾಲ್ಕು ವರ್ಷಗಳಲ್ಲಿ ಒಂದು ಬಾರಿಯೂ ಅವರನ್ನು ಸಂಪರ್ಕಿಸಿಲ್ಲ. ಎರಡೇ ದಿನದಲ್ಲಿ ಅ.23ರಂದು ರಾಜ್ವಿಂದರ್ ಸಿಡ್ನಿಯ ಮೂಲಕ ಭಾರತಕ್ಕೆ ಬಂದಿದ್ದು, ಅದರ ಸಿಸಿಟಿವಿಯನ್ನು ಪೊಲೀಸರು ಪತ್ತೆ ಮಾಡಿದ್ದರು. ಅಲ್ಲದೆ, ರಾಜ್ವಿಂದರ್ ಕೊಲೆಯಾದ ಯುವತಿಯಿದ್ದ ಸ್ಥಳದಲ್ಲಿದ್ದ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದರಿಂದ ಪೊಲೀಸರು ಬೆನ್ನು ಬಿದ್ದಿದ್ದರು. ಆತ ತನ್ನೂರು ಪಂಜಾಬಿಗೆ ಮರಳಿದ್ದಾನೆಂದು ತಿಳಿದು ಅಲ್ಲಿನ ಪೊಲೀಸರು ಪಂಜಾಬ್, ದೆಹಲಿಗೆ ಬಂದು ಹುಡುಕಾಟ ನಡೆಸಿದ್ದರು. ಅಲ್ಲದೆ, ಇಂಟರ್ ಪೋಲ್ ನೋಟೀಸ್ ಬಿಡುಗಡೆ ಮಾಡಿ ರಾಜ್ವಿಂದರ್ ಪತ್ತೆಗೆ ಕೋರಿದ್ದರು. ಹಾಗಿದ್ದರೂ, ರಾಜ್ವಿಂದರ್ ಕುರಿತ ಯಾವುದೇ ಸುಳಿವು ಲಭಿಸಿರಲಿಲ್ಲ. ಆತ ತನ್ನ ಕ್ರೆಡಿಟ್ ಕಾರ್ಡ್ ಆಗಲೀ, ಎಟಿಎಂ ಕಾರ್ಡ್ ಆಗಲೀ ಬಳಕೆ ಮಾಡಿರಲಿಲ್ಲ.
ರಾಜ್ವಿಂದರ್ ಭಾರತದಲ್ಲಿಯೇ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಆಧರಿಸಿ ಕ್ವೀನ್ಸ್ ಲ್ಯಾಂಡ್ ಸರಕಾರ ಇತ್ತೀಚೆಗೆ ಹತ್ತು ಲಕ್ಷ ಆಸ್ಟ್ರೇಲಿಯನ್ ಡಾಲರ್ ಬಹುಮಾನದ ಆಮಿಷ ಒಡ್ಡಿದ್ದರು. ಬಹುಮಾನ ಘೋಷಣೆಯ ತಿಂಗಳ ನಂತರ ದೆಹಲಿಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದು ಪೊಲೀಸರು ಬಂಧಿಸಿದ್ದಾರೆ.
The Australian Police on Friday tweeted that a Punjabi suspect allegedly accused of murdering 24-year-old Toyah Cordingley on a beach in Queensland in 2018 has been arrested. The Queensland Police have said that Rajwinder Singh was arrested in Delhi and could face an extradition court hearing soon. He was produced in a Delhi court on Friday, which sent him to five-day judicial custody. Singh was sent to jail till November 30 after he was produced before the court.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm