ಗಂಡನೊಂದಿಗೆ ನಿರಂತರ ಜಗಳ ; ಕೋಪಕ್ಕೆ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಂದ ಕ್ರೂರಿ ತಾಯಿ 

28-11-22 08:46 pm       HK News Desk   ಕ್ರೈಂ

ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಹೆತ್ತ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಔರಂಗಪುರ ಭಿಕ್ಕು ಗ್ರಾಮದಲ್ಲಿ ನಡೆದಿದೆ.

ಉತ್ತರ ಪ್ರದೇಶ, ನ.28: ಪತಿಯ ಮೇಲಿನ ಕೋಪಕ್ಕೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನೇ ಹೆತ್ತ ತಾಯಿ ಕತ್ತು ಹಿಸುಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಔರಂಗಪುರ ಭಿಕ್ಕು ಗ್ರಾಮದಲ್ಲಿ ನಡೆದಿದೆ.

ಅಂಕಿತ್ ಸಿಂಗ್ ಮತ್ತು ಶಿವಾನಿ ರಾಣಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಗಳು ಹುಟ್ಟಿದ ನಂತರ ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಮೊನ್ನೆ ಕೂಡ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಪತಿಯೊಂದಿಗೆ ತೀವ್ರ ವಾಗ್ವಾದದ ನಂತರ ಅಂಕಿತ್ ಮೇಲಿನ ಕೋಪಕ್ಕೆ ಶಿವಾನಿ ಮಗುವನ್ನು ಸಾಯಿಸಿದ್ದಾಳೆ.

ಮಗುವಿನ ತಂದೆ ಅಂಕಿತ್ ಸಿಂಗ್ ಶನಿವಾರ ತಮ್ಮ ಮಗಳು ನಿಗೂಢವಾಗಿ ಸಾವನ್ನಪ್ಪಿದೆ ಎಂದು ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಗೆಯಲ್ಲಿ ಮಗು ಉಸಿರುಗಟ್ಟಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಬಳಿಕ ಮಗುವಿನ ತಾಯಿ ಶಿವಾನಿ ರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ಮಗುವನ್ನು ಕತ್ತು ಹಿಸುಕಿ ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ದಿನೇಶ್ ಸಿಂಗ್ ತಿಳಿಸಿದ್ದಾರೆ. ಆರೋಪಿ ತಾಯಿ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A one-and-a-half-year-old baby girl was strangled to death allegedly by her mother in a fit of rage only to spite her husband. The incident took place in the Aurangpur Bhikku village in Bijnor district. Bijnor superintendent of police, Dinesh Singh, said, “The child’s father, Ankit Singh, has filed a complaint that his daughter died under mysterious circumstances on Saturday. We sent the body for post-mortem, which revealed that the death was caused due to suffocation.”