ಬ್ರೇಕಿಂಗ್ ನ್ಯೂಸ್
13-09-26 10:11 pm HK News ಕರಾವಳಿ
ಮಂಗಳೂರು, ಸೆ.13: ಯಾವುದೇ ಹಣಕಾಸು ಸಂಸ್ಥೆ ಆರಂಭಿಸುವುದು ದೊಡ್ಡ ವಿಷಯವಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳುವುದು, ಸ್ವಯಂ ಟಾರ್ಗೆಟ್ ಇಟ್ಟುಕೊಂಡು ಕೆಲಸ ಮಾಡುವುದು ಮುಖ್ಯ. ರಾಷ್ಟ್ರೀಕೃತ ಬ್ಯಾಂಕುಗಳಾಗಿರುವ ಸಂಸ್ಥೆಗಳು ಕೂಡ ನಮ್ಮದೇ ಜಿಲ್ಲೆಯಲ್ಲಿ ಸೊಸೈಟಿ ರೂಪದಲ್ಲಿ ಬೆಳೆದು ಬಳಿಕ ದೊಡ್ಡ ಸಂಸ್ಥೆಗಳಾದವು. ಕೊಂಕಣ್ ಕೆಥೋಲಿಕ್ ಕ್ರೆಡಿಟ್ ಸೊಸೈಟಿ ಕೂಡ ಜನರ ವಿಶ್ವಾಸ ಗಳಿಸಿ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದು ಡಿಕೆ ಗ್ರೂಪ್ ಆಫ್ ಕಂಪನೀಸ್ ಸಂಸ್ಥೆಯ ಪ್ರವರ್ತಕ ಜೋಯಲ್ ನೊರೊನ್ಹಾ ಹೇಳಿದರು.
ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿ ಕೊಂಕಣ್ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಗ್ಲೋಬಲ್ ಟ್ರಸ್ಟ್, ಸಹರಾ ರೀತಿಯ ಹಲವಾರು ಹಣಕಾಸು ಸಂಸ್ಥೆಗಳು ಮುಳುಗಿದ್ದನ್ನು ಜನರು ಹೇಳುತ್ತಾರೆ, ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಆ ರೀತಿ ಜನರಿಗೆ ಟೋಪಿ ಹಾಕಿ ಹಣಕಾಸು ಸಂಸ್ಥೆಗಳು ಮುಳುಗಿದ ಉದಾಹರಣೆ ಇಲ್ಲ. ಇದರಿಂದಾಗಿ ಈ ಭಾಗದಲ್ಲಿ ಜನರ ವಿಶ್ವಾಸವೂ ಹೆಚ್ಚಿದೆ.









ಈಗ ಜೆನ್ ಜೀ ಜನರೇಶನ್ ಮುನ್ನೆಲೆಗೆ ಬರುತ್ತಿದ್ದು ಪ್ರತಿಯೊಂದನ್ನೂ ಅಳೆದು ತೂಗಿ ನಿರ್ಧರಿಸುತ್ತಾರೆ. ಒಂದು ಸಂಸ್ಥೆಯಲ್ಲಿ ಹೂಡಿಕೆ ಮಾಡಬೇಕಿದ್ದರೂ, ಬ್ಯಾಲೆನ್ಸ್ ಶೀಟ್, ಪಾರದರ್ಶಕತೆ ಬಯಸುತ್ತಾರೆ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನವೂ ಅಗತ್ಯವಾಗಿದ್ದು, ಆಧುನಿಕ ಮಾದರಿಯನ್ನು ಅಳವಡಿಸಿಕೊಳ್ಳಬೇಕಿದೆ. ಕೊಂಕಣ್ ಕೆಥೋಲಿಕ್ ಸೊಸೈಟಿ ಆರಂಭದಲ್ಲಿಯೇ ನೆಫ್ಟ್ ಹಣಕಾಸು ವರ್ಗಾವಣೆ ಜೊತೆಗೆ ಎಟಿಎಂ ಇನ್ನಿತರ ಹೊಸ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಿಓಡಿಪಿ ನಿರ್ದೇಶಕರಾದ ರೆ.ಫಾ.ವಿನ್ಸೆಂಟ್ ಡಿಸೋಜ, ಮಂಗಳೂರು ಧರ್ಮಪ್ರಾಂತ್ಯದ ರೆ.ಫಾ.ಬೊನಾವೆಂಚರ್ ನಜರೆತ್ ಸಂಸ್ಥೆಗೆ ಶುಭ ಹಾರೈಸಿದರು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ದಕ್ಷಿಣ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಬಿಲ್ಡರ್ ಜಾನ್ ಸುರೇಶ್, ಕದ್ರಿಯ ಮಾಜಿ ಕಾರ್ಪೊರೇಟರ್ ಮನೋಹರ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಯೋಗಿಶ್ ಶೆಟ್ಟಿ ಜೆಪ್ಪು ಮತ್ತಿತರರು ಉಪಸ್ಥಿತರಿದ್ದರು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಜೋಸೆಫ್ ಕ್ರಾಸ್ತಾ ಅವರನ್ನು ಸನ್ಮಾನಿಸಲಾಯಿತು. ಸನ್ ಮೆಡಿಕ್ಸ್ ಸಂಸ್ಥೆಯ ನಿರ್ದೇಶಕ ದೀಪಕ್ ಡಿಸೋಜ ಸ್ವಾಗತಿಸಿ, ಕೊಂಕಣ್ ಕೆಥೋಲಿಕ್ ಕ್ರೆಡಿಟ್ ಸೊಸೈಟಿ ಸಂಸ್ಥೆಯ ಉಪಾಧ್ಯಕ್ಷೆ ಸೂಕ್ಷ್ಮಾ ಕ್ರಾಸ್ತಾ ವಂದಿಸಿದರು.
Starting a financial institution is not a major challenge, but maintaining public trust and working with self-defined goals is crucial in today’s competitive environment, said DK Group of Companies promoter Joel Noronha. He was speaking after inaugurating the new office of Konkan Catholic Credit Co-operative Society at Kadri Mallikatta in Mangaluru.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm