ಬ್ರೇಕಿಂಗ್ ನ್ಯೂಸ್
12-09-26 09:38 pm HK News Staffer ಕರ್ನಾಟಕ
ಬೆಂಗಳೂರು, ಸೆ 12: ಸಚಿವ ಸತೀಶ್ ಜಾರಕಿಹೊಳಿ ಅಕ್ರಮ ಹೊಡಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದ ವಿಚಾರಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಇಂಥಹ ಗಾಳಿ ಸುದ್ದಿಗಳನ್ನು ನಂಬಲು ಸಾಧ್ಯವಿಲ್ಲ, ಪ್ರೆಸ್ ನೋಟ್ನಲ್ಲಿ, ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ ಅಂತ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಅಂತಾರೆ, ಏನು ಸಾಕ್ಷಿ ಸಿಕ್ಕಿದೆ ಅಂತ ಹೇಳಿಲ್ಲ. ಇಂತಹ ಪ್ರೆಸ್ ನೋಟ್ ನೂರು ನೋಡಿದ್ದೇವೆ. ಇದು ಹೊಸದಾ, ಮನಿ ಟ್ರಯಲ್ ತೋರಿಸಲಿ ಎಂದರು.
ಇಂತಹ 196 ಇಡಿ ದಾಳಿಗಳು ಆಗಿವೆ ಎಂದು ನಾನು ಅಂಕಿ ಅಂಶ ಕೊಟ್ಟಿದ್ದೆ. ಎರಡು ಕೇಸ್ನಲ್ಲಿ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವಾ? ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಿಜೆಪಿಯ ವಿಜಯೇಂದ್ರ ಬಗ್ಗೆ ಯತ್ನಾಳ್ ಅವರು ಸಾಕಷ್ಟು ಬಾರಿ ಅಕ್ರಮ, ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ, ಅವರ ಮೇಲೆ ಇಡಿ, ಐಟಿ ದಾಳಿ ಆಗಿದೆಯೇ, ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ದಾಳಿ ಆಗುತ್ತಿದೆ ಎಂದ ಮೇಲೆ ಇದು ರಾಜಕೀಯ ಪ್ರೇರಿತವಲ್ಲವೇ ಎಂದರು.
ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎಲ್ಲಾ ಸಾಬೀತು ಮಾಡಬಹುದು. ನಾವು ಎಲ್ಲಿಯೂ ಹೂಡಿಕೆ ಮಾಡಿಲ್ಲ, ಹೂಡಿಕೆ ಮಾಡಬೇಕು ಅಂತ ಇದ್ದೇವೆ ಅಂತ ಹೇಳಿದ್ದಾರೆ, ಅದರಲ್ಲಿ ತಪ್ಪೇನಿದೆ? ಈಗ ಮೋದಿ ಅವ್ರು ಹೇಳ್ತಾರೆ ಭಾರತೀಯರು ಹೋಗಿ ಹೊರಗಡೆ ಬಂಡವಾಳ ಹಾಕಬೇಕು. ಇಲ್ಲಿ ಹೂಡಿಕೆ ಮಾಡಬೇಕು ಅಂತ ಹೇಳ್ತಾರೆ. ಇವ್ರು ಅದನ್ನ ಮಾಡ್ತಾ ಇರೋದು ಅಲ್ವ? ಕಾನೂನು ಬಾಹಿರವಾಗಿ ಹೂಡಿಕೆ ಮಾಡಿದ್ರೆ ಮಾತ್ರ ತಪ್ಪು.
ಏನೇ ಇರಲಿ ಕ್ಲಿಯರ್ ಹೇಳಿಕೆ ನೀಡಿದ್ದಾರೆ. ಕಾಂಗೋದಲ್ಲಿ ಇರಬಹುದು, ಕೆನಡಾದಲ್ಲಿ ಇರಬಹುದು, ಹೂಡಿಕೆ ಮಾಡೋದು ತಪ್ಪಾ? ಅದನ್ನ ಎಲ್ಲೂ ಹೇಳಿಲ್ಲ. ಇವ್ರು ಮಾಡಬೇಕು ಅಂತ ಹೇಳಿದ್ದಾರೆ. ಅವ್ರು ಮಾಡಿದ್ದಾರೆ ಹೂಡಿಕೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇಡಿಯವರು ಕತೆ ಕಟ್ಟುತ್ತಾರೆ. ಇಲ್ಲಿ ಲಂಚ ತೆಗೆದುಕೊಂಡು ಹೂಡಿಕೆ ಮಾಡಿದ್ದಾರೆ ಎಂದಿದ್ದಾರೆ. ಇದಕ್ಕೆ ದಾಖಲೆ ಸಮೇತ ಕೊಡ್ತೀನಿ ನಾನು ಹೂಡಿಕೆ ಮಾಡೋಕೆ ರೆಡಿಯಾಗ್ತಾ ಇದ್ದೆ ಅಂತ ಜಾರಕಿಹೊಳಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
06-10-26 06:17 pm
HK News Staffer
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm