ಬ್ರೇಕಿಂಗ್ ನ್ಯೂಸ್
13-12-22 02:41 pm HK News Desk ಕ್ರೈಂ
ಬಾಗಲಕೋಟೆ, ಡಿ.13 : ಕುಡಿದು ಬಂದು ಜಗಳವಾಡುತ್ತಿದ್ದ ತಂದೆಯನ್ನು ಮಗನೇ ಕೊಡಲಿ ಬೀಸಿ ಕೊಚ್ಚಿದ್ದಲ್ಲದೆ, ದೇಹವನ್ನು ತುಂಡು ತುಂಡು ಮಾಡಿ ಹೊಲದ ನಡುವಿನ ನಿರುಪಯುಕ್ತ ಬೋರ್ವೆಲ್ ಗೆ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಘಟನೆ ಬಾಗಲಕೋಟ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದ ಜಂಜರಕೊಪ್ಪ ಗಲ್ಲಿಯಲ್ಲಿ ಘಟನೆ ನಡೆದಿದ್ದು ಪರಶುರಾಮ (54) ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ, ಆತನ ಮಗ ವಿಠ್ಠಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತಾಯಿ ಸರಸ್ವತಿ ಗಂಡ ಕಾಣೆಯಾಗಿರುವ ಬಗ್ಗೆ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮುಧೋಳ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸಂಶಯದ ಮೇರೆಗೆ ಮಗ ವಿಠಲ್ ನನ್ನು ವಶಕ್ಕೆ ಪಡೆದಾಗ ನಿಜ ವಿಚಾರ ತಿಳಿದುಬಂದಿದೆ.
ಡಿಸೆಂಬರ್ 7 ರಂದು ಹೊಲದ ಶೆಡ್ ನಲ್ಲಿ ಕೊಲೆ ಕೃತ್ಯ ನಡೆದಿತ್ತು. ಆನಂತರ, ಕೊಲೆಯ ಬಗ್ಗೆ ಗುರುತು ಸಿಗಬಾರದು ಮತ್ತು ಯಾರಿಗೂ ತಿಳಿಯಬಾರದು ಎನ್ನುವ ಉದ್ದೇಶದಿಂದ ಹೊಲದ ನಡುವೆ ಇದ್ದ ನಿರುಪಯುಕ್ತ ಕೊಳವೆ ಬಾವಿಯಲ್ಲಿ ದೇಹವನ್ನು ತುಂಡರಿಸಿ ಒಳಗೆ ತುರುಕಿದ್ದ. ನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದರಿಂದ ತಂದೆ - ಮಗನಿಗೆ ಜಟಾಪಟಿ ಉಂಟಾಗಿತ್ತು.
ಪೊಲೀಸರು ಶವದ ಪತ್ತೆಗಾಗಿ ಬೋರ್ವೆಲ್ ಗುಂಡಿಯನ್ನು ಜೆಸಿಬಿಯಲ್ಲಿ ತೋಡಿದ್ದು ಹುಡುಕಾಟ ನಡೆಸುತ್ತಿದ್ದಾರೆ.
A man killed his father and stuffed his body in an uncovered borewell after chopping it into 30 pieces in Karnataka's Bagalkot district, police said on Tuesday. Fifty-year-old Parashuram used to come home every day in an inebriated state and thrash his son Vittal (20), the police said. On December 6, Parashuram argued with Vittal, during which the latter, in a fit of rage, killed him with an iron rod. Then, Vittal chopped Parshuram's body and stuffed it in the borewell.
10-01-25 07:03 pm
Bangalore Correspondent
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 06:23 pm
Mangalore Correspondent
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am