ಬ್ರೇಕಿಂಗ್ ನ್ಯೂಸ್
18-12-22 02:32 pm HK News Desk ಕ್ರೈಂ
ಜೈಪುರ, ಡಿ.18 : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್ ಹತ್ಯೆ ಮಾದರಿಯಲ್ಲೇ ಯುವಕನೊಬ್ಬ ತನ್ನ ಹೆತ್ತಮ್ಮನಿಗೆ ಸಮನಾದ ದೊಡ್ಡಮ್ಮನನ್ನೇ ಕೊಲೆಗೈದು ತುಂಡು ತುಂಡು ಮಾಡಿದ ಪ್ರಕರಣ ರಾಜಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.
ಜೈಪುರದ ವ್ಯಕ್ತಿಯೊಬ್ಬ ತನ್ನ ದೊಡ್ಡಮ್ಮನನ್ನು ಕೊಲೆ ಮಾಡಿ, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಿ ಜೈಪುರ್- ದೆಹಲಿ ಹೆದ್ದಾರಿಯ ವಿವಿಧೆಡೆ ಎಸೆದಿದ್ದಾನೆ.
ಸರೋಜ್ ಶರ್ಮಾ (65) ಮೃತ ಮಹಿಳೆ. ಆರೋಪಿ ಅಂಜು ಶರ್ಮಾ ಅಲಿಯಾಸ್ ಅಚಿಂತ್ಯ ಗೋವಿಂದ ದಾಸ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ, ನಂತರ ನಾಪತ್ತೆ ನಾಟಕವಾಡಿದ್ದ ಹಂತಕ !
ಅಂಜು ಶರ್ಮಾ, ಆತನ ತಂದೆ ಹಾಗೂ ತಂದೆಯ ಅಣ್ಣನ ಹೆಂಡತಿ ಸರೋಜ್ ಶರ್ಮಾ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಡಿ.11ರಂದು ತಂದೆ ಇಂದೋರ್‌ಗೆ ತೆರಳಿದ್ದರು. ಇದೇ ಸಂದರ್ಭದಲ್ಲಿ ಅಂಜು ಶರ್ಮಾ ದೆಹಲಿಗೆ ಹೋಗಲು ಮುಂದಾಗಿದ್ದ. ಇದಕ್ಕೆ ದೊಡ್ಡಮ್ಮ ನಿರಾಕರಿಸಿದ್ದು ಇದೇ ವಿಚಾರದಲ್ಲಿ ವಾಗ್ವಾದ ಉಂಟಾಗಿ ಅಂಜು ಶರ್ಮಾ ಸುತ್ತಿಗೆಯಿಂದ ದೊಡ್ಡಮ್ಮನ ತಲೆಗೆ ಹೊಡೆದಿದ್ದ. ಅಕಸ್ಮಾತ್ ಹೊಡೆದ ಏಟಿನಿಂದ ಸರೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ತಪ್ಪಿಸಿಕೊಳ್ಳುವ ಯತ್ನವಾಗಿ, ಶವವನ್ನು ಹೊರಕ್ಕೆ ಸಾಗಿಸುವುದಕ್ಕಾಗಿ ಸ್ನಾನದ ಗೃಹಕ್ಕೆ ಎಳೆದೊಯ್ದು ಮಾರ್ಬಲ್ ಕತ್ತರಿಸುವ ಯಂತ್ರದಲ್ಲಿ ಕತ್ತರಿಸಿದ್ದ. ಎಂಟರಿಂದ ಹತ್ತು ತುಂಡುಗಳನ್ನಾಗಿ ಕತ್ತರಿಸಿ ಬಳಿಕ ಸೂಟ್‌ಕೇಸ್‌ನಲ್ಲಿ ಅವುಗಳನ್ನು ತುಂಬಿ ಹೆದ್ದಾರಿಯ ವಿವಿಧೆಡೆ ಎಸೆದು ಬಂದಿದ್ದ. ಆನಂತರ ಏನೂ ಆಗಿಲ್ಲವೆಂಬಂತೆ ದೊಡ್ಡಮ್ಮ ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಸಂಬಂಧಿಕರೊಂದಿಗೆ ಸೇರಿ ಹುಡುಕಾಟದ ನಾಟಕವನ್ನೂ ಮಾಡಿದ್ದ.
ಆದರೆ, ಅಂಜು ಶರ್ಮಾನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಸುಳಿವುಗಳು ಲಭಿಸಿದ್ದವು. ಹೇಳಿಕೆ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ಕೈಗೊಂಡಾಗ, ಸೂಟ್‌ಕೇಸ್ ಹಿಡಿದು ರಾತ್ರಿ ವೇಳೆ ಅಂಜು ಶರ್ಮಾ ಮನೆಯಿಂದ ಹೊರಕ್ಕೆ ತೆರಳುವ ಸಿ.ಸಿ.ಟಿ.ವಿ ದೃಶ್ಯ ಪತ್ತೆಯಾಗಿತ್ತು. ಅಲ್ಲದೆ ಶರ್ಮಾ, ಮನೆಯಲ್ಲಿ ರಕ್ತದ ಕಲೆಗಳನ್ನು ಒರೆಸುತ್ತಿರುವುದನ್ನು ಸಂಬಂಧಿಕ ವ್ಯಕ್ತಿಯೊಬ್ಬರು ನೋಡಿದ್ದರು. ಇದರ ಆಧಾರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪ್ರಕರಣ ಸಂಬಂಧ ಅಂಜು ಶರ್ಮಾನನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Even as the country is still reeling under the shock of Shraddha Walkar's gruesome murder, another such incident has come to light. A man allegedly murdered his aunt, chopped the body into pieces and dumped them at different places near Delhi highway here, police said on Saturday. He then informed the police that his aunt was missing and also started looking for her along with other relatives, they said. However, police got suspicious of him and interrogated him, following which he revealed that he bludgeoned his aunt to death with a hammer on December 11.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm