ಬ್ರೇಕಿಂಗ್ ನ್ಯೂಸ್
18-12-22 08:45 pm HK News Desk ಕ್ರೈಂ
ಮೈಸೂರು, ಡಿ 18: ಬೆತ್ತಲೆ ಪೋಟೋ ತೋರಿಸಿ ಪುರುಷರನ್ನ ಬುಟ್ಟಿಗೆ ಬೀಳಿಸಿಕೊಂಡು ಯಾಮಾರಿಸುವುದು ಇವಳ ಕೆಲಸ. ಕೊಟ್ಟ ಸಾಲ ಕೇಳಿದಕ್ಕೆ ಮೊಬೈಲ್‌ನಲ್ಲಿ ಅರೆಬೆತ್ತಲೆ ಪೋಟೋ ಕಳುಯಿಸಿ ಬೆದರಿಸುವುದು ಬೇರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗೆ ಹಣ ಕಿತ್ತು ಎಸ್ಕೇಪ್ ಆಗ್ತಿದ್ದ ಖತರ್ನಾಕ್ ಲೇಡಿ ಇದೀಗ ಪೊಲೀಸರ ಅಥಿತಿ ಆಗಿದ್ದಾಳೆ. ಪುರುಷರನ್ನ ಅಟ್ರ್ಯಾಕ್ಟ್ ಮಾಡೋಕೆ ತನ್ನ ಮೈ ಕೈ ಕುಣಿಸಿ ಯಾಮಾರಿಸ್ತಿದ್ದ ಲೇಡಿ ಹೆಸರು ಸವಿತ ಆಲಿಯಾಸ್ ಮಂಜುಳ ಯಾದವ್. ಈಗೆ ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನವಳು. ಈ ಸವಿತಾ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದು ಸೆಟಲ್ ಆಗಿ ಮಾಡ್ತಿದ್ದದ್ದು ಮಾತ್ರ ಮನೆ ಹಾಳು ಮಾಡೋ ಕೆಲಸ.
ಹಣ ಪಡೆದ ಬಳಿಕ ವರಸೆ ಬದಲು:
ಕಷ್ಟ ಅಂತಾ ಕೆಲ ದಂಪತಿ ಬಳಿ ಹಣ ಇಸ್ಕೊಳ್ಳೋ ಈಕೆ ಹಣ ಪಡೆದ ಬಳಿಕ ತನ್ನ ವರಸೆ ಬದಲಿಸ್ತಾಳೆ. ದಂಪತಿ ನಡುವೆ ಕಲಹ ತಂದಿಟ್ಟು ಹಣ ಕೇಳಿದರೆ ತನ್ನದೇ ನಗ್ನ ಪೋಟೋ ಕಳಿಸಿ ಹಣ ಕೊಡದೆ ಯಾಮಾರಿಸ್ತಾಳೆ. ಈಕೆಯ ವರಸೆ ಗಂಡನಿಗೆ ಗೊತ್ತಾಗಿ ಸ್ವತಃ ಪತಿಯೇ ಚಾಕುವಿನಿಂದ ಇರಿದಿದ್ದರೂ ಈಕೆ ಮಾತ್ರ ಬುದ್ದಿ ಕಲಿತಿರಲಿಲ್ಲ. ಸಿಕ್ಕ ಸಿಕ್ಕವರನ್ನ ಬುಟ್ಟಿಗೆ ಹಾಕೊಳ್ಳೋಕೆ ವಾಟ್ಸಪ್ ಚಾಟ್ ಮಾಡಿ ತನ್ನ ಅರೆ ನಗ್ನ ಸ್ಥಿತಿಯ ಪೋಟೋಗಳನ್ನ ಸೆಂಡ್ ಮಾಡಿ ಅಮಾಯಕರನ್ನ ಯಾಮಾರಿಸಿ ಲಕ್ಷ ಲಕ್ಷ ಹಣ ಪೀಕುತ್ತಿದ್ದಳು.
ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ:
ಈ ಖತರ್ನಾಕ್ ಲೇಡಿಯ ಮುಖವಾಡ ಈಗ ಬಯಲಾಗಿದೆ. ಮೈಸೂರಿನಲ್ಲಿ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷ ಹಣ ಪೀಕಿದ್ದ ಈ ಲೇಡಿ ಹಣ ಕೇಳೋಕೆ ಬಂದ ದಂಪತಿ ಮೇಲೆ ಹಲ್ಲೆ ಕೂಡ ಮಾಡೋಕೆ ಹೋಗಿದ್ದ ಆರೋಪವೂ ಇದೆ. ಇನ್ನೂ ವಿಜಯನಗರ ಎರಡನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಸ್ಪಾ ಹೆಸರಲ್ಲಿ ವೈಶ್ಯವಾಟಿಕೆ ದಂಧೆ ನಡೆಸಿ ಸವಿತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಖತರ್ನಾಕ್ ಲೇಡಿಯನ್ನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Mysuru Woman arrested for sharing her nude pics and blackmailing for money.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm