ಬ್ರೇಕಿಂಗ್ ನ್ಯೂಸ್
24-12-22 09:13 pm HK News Desk ಕ್ರೈಂ
ಚೆನ್ನೈ, ಡಿ.24 : ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಕೋಪದಲ್ಲಿ ಬಿಜೆಪಿ ಮುಖಂಡನಿಗೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಮಿಳುನಾಡಿನ ಚೆಂಗಲ್ ಪಟ್ಟು ಎಂಬಲ್ಲಿ ನಡೆದಿದೆ.
ರಸ್ತೆ ಮಧ್ಯೆ ತೀವ್ರ ಹಲ್ಲೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಧನಸೇಕರನ್ ಎಂಬ ಬಿಜೆಪಿ ಮುಖಂಡನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಪಕ್ಷದ ಕಾರ್ಯಕರ್ತನಿಗೆ ಬೆಂಬಲ ಘೋಷಿಸಿದ್ದು ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.
ಧನಸೇಕರನ್ ಇತ್ತೀಚೆಗೆ ಗಾಂಜಾ ಮಾರಾಟ ಕುರಿತ ವಿಡಿಯೋ ಒಂದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅರೆ ಅಮಲಿನಲ್ಲಿದ್ದ ಕಲೇಶ ಎಂಬ ವ್ಯಕ್ತಿಯೊಬ್ಬ ಗಾಂಜಾ ಮಾರುತ್ತಿದ್ದು ಅದು ಯಾರು ಕೊಟ್ಟಿದ್ದು ಎಂದು ಕೇಳಿದಾಗ ಬಶೀರ್ ಎನ್ನುವಾತ ಕೊಟ್ಟಿದ್ದು 700 ರೂ.ಗೆ ಮಾರಲು ತಿಳಿಸಿದ್ದಾನೆಂದು ಹೇಳಿದ್ದ. ಶರೀಫ್ ಎನ್ನುವ ವ್ಯಕ್ತಿ ಆನಂತರವೂ ಗಾಂಜಾ ಮಾರಾಟದಲ್ಲಿ ತೊಡಗಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಘಟನೆ ಹಿನ್ನೆಲೆಯಲ್ಲಿ ಎರಡು ತಂಡಗಳ ಮಧ್ಯೆ ಜಗಳ ನಡೆದು ಒಂದು ತಂಡ ರಾಸ್ತಾ ರೋಕೊ ನಡೆಸಿತ್ತು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಸೇಕರನ್ ಕಾರಿನಲ್ಲಿ ಬಂದಿದ್ದು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ್ದು ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
கஞ்சா விற்பவர்களுக்கு எதிராகக் குரல் கொடுத்து அவர்களால் கண்மூடித்தனமாகத் தாக்கப்பட்ட @BJP4TamilNadu நிர்வாகி திரு தனசேகர் மற்றும் அவரது குடும்பத்தாரை சற்று நேரத்திற்கு முன்பு செங்கல்பட்டு அரசு மருத்துவமனையில் சந்தித்து அவரோடு தோளோடு தோள் நிற்பேன் என்ற வாக்குறுதியை அளித்தேன். pic.twitter.com/OCq4G2Iq0l
— K.Annamalai (@annamalai_k) December 18, 2022
A Bharatiya Janata Party (BJP) functionary was thrashed by miscreants for reportedly exposing rampant ganja sales in Tamil Nadu’s Chengalpattu. He was rescued with blood-soaked clothes after he was brutally thrashed. Police have detained six men in connection with the attack and have initiated an investigation. BJP state president Annamalai condemned the attack and assured full support to the victim and his family.
10-01-25 07:03 pm
Bangalore Correspondent
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 06:23 pm
Mangalore Correspondent
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am