ಬ್ರೇಕಿಂಗ್ ನ್ಯೂಸ್
25-12-22 01:23 pm Bangalore Correspondent ಕ್ರೈಂ
ಬೆಂಗಳೂರು, ಡಿ.25 : ಗುಪ್ತಾಂಗದಲ್ಲಿ ಎರಡು ಬೇಸಿಕ್ ಸೆಟ್ ಮೊಬೈಲನ್ನು ಬಚ್ಚಿಟ್ಟು ಕೈದಿಗೆ ನೀಡಲು ಬಂದಿದ್ದ ಸಂದರ್ಶಕಿ ಮಹಿಳೆಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಕಾಡುಗೊಂಡನಹಳ್ಳಿ ನಿವಾಸಿಯಾದ 25 ವರ್ಷದ ಮಹಿಳೆ ಉಮ್ಮೆಶಾಮ ಎಂಬವರು, ಜೈಲಿನಲ್ಲಿ ಕೈದಿಯಾಗಿರುವ ಮಹಮ್ಮದ್ ನದೀಮ್ ಅಲಿಯಾಸ್ ಬಡ್ಡೆ ಎಂಬಾತನನ್ನು ನೋಡಲು ಡಿ.22ರಂದು ಸಂಜೆ ಜೈಲಿಗೆ ಬಂದಿದ್ದರು. ಮಹಿಳೆ ಮೇಲೆ ಅನುಮಾನಗೊಂಡ ಸಿಬಂದಿ ತಪಾಸಣೆ ನಡೆಸಿದಾಗ ಗುಪ್ತಾಂಗದಲ್ಲಿ ಎರಡು ಬೇಸಿಕ್ ಮೊಬೈಲ್‌ಗಳು ಸಿಕ್ಕಿವೆ.
ಉಮ್ಮೆಶಾಮ ಅವರನ್ನು ವಶಕ್ಕೆ ಪಡೆದು ಪೊಲೀಸರ ಸುಪರ್ದಿಗೆ ಒಪ್ಪಿಸಲಾಗಿದೆ. ಉಮ್ಮೆಶಾಮ ಹಾಗೂ ಕೈದಿ ಮಹಮ್ಮದ್ ನದೀಮ್ ಇಬ್ಬರ ವಿರುದ್ಧವೂ ಜೈಲು ಸಿಬಂದಿ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಅಪರಾಧ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಮಹಮ್ಮದ್ ನದೀಮ್, ಜೈಲಿನಿಂದಲೇ ಅಕ್ರಮ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ. ಇದಕ್ಕಾಗಿ ಸಂಬಂಧಿ ಮಹಿಳೆ ಉಮ್ಮೆಶಾಮ ಮೂಲಕ ಮೊಬೈಲ್ ತರಿಸಿಕೊಳ್ಳಲು ಮುಂದಾಗಿದ್ದ. ಮಹಿಳೆಯಿಂದ ಮೊಬೈಲ್ ತರಿಸಿಕೊಂಡರೆ ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವುದಿಲ್ಲವೆಂದು ಕೈದಿ ಅಂದುಕೊಂಡಿದ್ದ. ಆದರೆ, ಮಹಿಳಾ ಭದ್ರತಾ ಸಿಬ್ಬಂದಿಯೇ ಉಮ್ಮೆಶಾಮ ಅವರನ್ನು ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿದೆ.
Woman carries mobile hiding inside her privates to visit jail inmate, arrested in Bengaluru.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm