ಬ್ರೇಕಿಂಗ್ ನ್ಯೂಸ್

ಒಳ ಉಡುಪಿನಲ್ಲಿ ಬಚ್ಚಿಟ್ಟು ಕೇಜಿಗಟ್ಟಲೆ ಚಿನ್ನ ತರುತ್ತಿದ್ದ 19 ವರ್ಷದ ಕಾಸರಗೋಡಿನ ಯುವತಿ ಪೊಲೀಸರ ವಶಕ್ಕೆ 

26-12-22 01:05 pm       HK News Desk   ಕ್ರೈಂ

ತನ್ನ ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ 19 ವರ್ಷದ ಯುವತಿಯನ್ನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು ಆಕೆಯ ಬಳಿಯಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು, ಡಿ.26 : ತನ್ನ ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟು ಸಾಗಿಸುತ್ತಿದ್ದ 19 ವರ್ಷದ ಯುವತಿಯನ್ನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು ಆಕೆಯ ಬಳಿಯಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಸರಗೋಡು ನಿವಾಸಿ ಶಹಲಾ (19) ಬಂಧಿಸಲ್ಪಟ್ಟ ಯುವತಿ. 

1.884 ಕಿಲೋ ತೂಗುತ್ತಿದ್ದ ಚಿನ್ನಾಭರಣವನ್ನು ಆಕೆ ಮೂರು ಪ್ಯಾಕೆಟ್ ಗಳನ್ನಾಗಿಸಿ ಒಳ ಉಡುಪಿನ ಒಳಗೆ ಇರಿಸಿದ್ದಳು. ಭಾನುವಾರ ರಾತ್ರಿ ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿದ್ದ ಶಹಲಾ ಕಸ್ಟಮ್ಸ್ ತಪಾಸಣೆ ಬಳಿಕ ರಾತ್ರಿ 11 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಳು. ಆದರೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಬ್ಯಾಗ್ ಸೇರಿದಂತೆ ಆಕೆಯ ಬಳಿ ಯಾವುದೇ ಚಿನ್ನ ಸಿಕ್ಕಿರಲಿಲ್ಲ. 

ಯುವತಿಯನ್ನು ವಿಚಾರಣೆಗೊಳಪಡಿಸಿದರೂ ಸ್ಪಷ್ಟ ಉತ್ತರ ನೀಡದೇ ಇದ್ದುದರಿಂದ ಮಹಿಳಾ ಪೊಲೀಸರು ಕೊನೆಗೆ ದೇಹವನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ, ಒಳ ಉಡುಪಿನಲ್ಲಿ ಪೇಸ್ಟ್ ರೂಪದಲ್ಲಿ ಬಚ್ಚಿಟ್ಟಿದ್ದ ಚಿನ್ನಾಭರಣ ಪತ್ತೆಯಾಗಿದೆ.

 A 19-year-old woman was taken into custody outside the Kozhikode airport after it was found that she was carrying gold worth Rs one crore hidden in her innerwear. Acting on a tip off, Malappurram Superintendent of Police (SP) Suchith Das and his team took the girl into custody after she had successfully cleared the Customs at the airport late on Sunday night.