ಬ್ರೇಕಿಂಗ್ ನ್ಯೂಸ್
26-12-22 05:35 pm Mangalore Correspondent ಕ್ರೈಂ
ಉಳ್ಳಾಲ, ಡಿ.26 : ಕೊಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಭಂಡಾರಿ ಅವರು ಡ್ರಗ್ ಸಾಗಾಟದ ವಿರುದ್ಧ ಸಮರ ಸಾರಿದ್ದು ಇಂದು ಬೆಳಗ್ಗೆ ಬೆಂಗಳೂರಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ 3 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ಮತ್ತು ಕೇರಳ ಮೂಲದ ನಾಲ್ಕು ಡ್ರಗ್ ಪೆಡ್ಲರ್ ಗಳನ್ನ ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್(24), ಮಲಪ್ಪುರಂ ಜಿಲ್ಲೆಯ ಪೊನ್ನಾನಿ ನಿವಾಸಿ ಜಂಶೀರ್(24), ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಮಹಮ್ಮದ್ ಬಾತಿಷ್ (37), ಕಾಸರಗೋಡು ಜಿಲ್ಲೆಯ ಮುಟ್ಟತೇಡಿ ನಿವಾಸಿ ಮಹಮ್ಮದ್ ಅಶ್ರಫ್(42) ಬಂಧಿತ ಡ್ರಗ್ ಪೆಡ್ಲರ್ ಗಳು.
ಕೊಣಾಜೆ ಪೊಲೀಸ್ ಠಾಣೆ ಪಿಎಸ್ಸೈ ಶರಣಪ್ಪ ಭಂಢಾರಿ ಮತ್ತು ತಂಡ ಚೇಳೂರಿನ ಚೆಕ್ ಪೋಸ್ಟಲ್ಲಿ ಗಸ್ತಲ್ಲಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿಂದ ಉಪ್ಪಿನಂಗಡಿ, ಮೆಲ್ಕಾರ್ ಮಾರ್ಗವಾಗಿ ಕೇರಳಕ್ಕೆ ಗಾಂಜಾ ಸಾಗಾಟ ನಡೆಸುತ್ತಿದ್ದ ಆಲ್ಟೋ ಕಾರನ್ನ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಆಲ್ಟೋ ಕಾರಲ್ಲಿ 3,19,000 ಮೌಲ್ಯದ 32.195 ಕೆ.ಜಿ ಗಾಂಜಾ ಸಾಗಾಟ ನಡೆಸುತ್ತಿರುವುದು ಕಂಡುಬಂದಿದೆ. ನಿಷೇಧಿತ ಗಾಂಜಾ, ಕಾರು ಮತ್ತು ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.



ಪಿಎಸ್ಐ ಶರಣಪ್ಪ ಅವರು ವಾರದ ಹಿಂದೆ ಡಿ.17 ರಂದು ಬೋಳಿಯಾರಲ್ಲಿ ಕಾರನ್ನ ತಡೆದು ಭಾರೀ ಪ್ರಮಾಣದ ನಿಷೇಧಿತ ಗಾಂಜಾ ಮತ್ತು ಎಂಡಿಎಂಎ ಮಾದಕ ವಸ್ತುಗಳನ್ನ ದಸ್ತಗಿರಿ ನಡೆಸಿ ನಾಲ್ವರು ಪೆಡ್ಲರ್ ಗಳನ್ನ ಬಂಧಿಸಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ 4 ಮೊಬೈಲ್, ಆಲ್ಟೋ ಕಾರನ್ನ ವಶ ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶೈಲೇಂದ್ರ, ಮಹಮ್ಮದ್ ಶರೀಫ್, ಮಹೇಶ್,ಪುರುಷೋತ್ತಮ್, ದೀಪಕ್ ಅಂಬರೀಷ್, ಅಶ್ವಿನ್, ಸುರೇಶ್, ಬರಮ ಬಡಿಗೇರ, ರೇಷ್ಮಾ, ಸುನೀತ ಭಾಗವಹಿಸಿದ್ದರು.
Mangalore Three lakhs worth Ganja seized by Konaje Police PSI Sharanappa. Four have been arrested who were transporting Ganja from Bangalore.
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm