ಬ್ರೇಕಿಂಗ್ ನ್ಯೂಸ್
27-12-22 01:50 pm HK News Desk ಕ್ರೈಂ
ಲಕ್ನೋ, ಡಿ.27 : ಹಿಂದು ಯುವತಿಯನ್ನು ಮದುವೆಯಾಗಿ ಮುಸ್ಲಿಂ ಆಗಿ ಮತಾಂತರಗೊಳಿಸಿದ್ದಲ್ಲದೆ, ಏಳು ವರ್ಷಗಳ ಜೀವನದ ನಂತರ ಆಕೆ ಜೊತೆ ಜಗಳವಾಡಿ ಗಂಡನೇ ವಿದ್ಯುತ್ ಶಾಕ್ ಕೊಟ್ಟು ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದ ಲಖೀಂಪುರ್ ಜಿಲ್ಲೆಯಲ್ಲಿ ನಡೆದಿದೆ.
ಉಮಾ ಶರ್ಮಾ ಎಂಬ ಯುವತಿ ಮುಸ್ಲಿಂ ಯುವಕ ವಾಸಿಂ ಅಹ್ಮದ್ ಎಂಬವನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಉಮಾ ಶರ್ಮಾಳನ್ನು ಆಕೆಯ ಪತಿ ವಾಸಿಂ ಅಹ್ಮದ್ ಇಸ್ಲಾಂಗೆ ಮತಾಂತರ ಮಾಡಿದ್ದು ಅಕ್ಸಾ ಫಾತಿಮಾ ಎಂದು ಹೆಸರು ಬದಲಿಸಿದ್ದ. ಮದುವೆಯಾಗಿ ಏಳು ವರ್ಷಗಳಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ಈ ನಡುವೆ ಮನಸ್ತಾಪ ಉಂಟಾಗಿದ್ದು ಇತ್ತೀಚೆಗೆ ಮನೆಯಲ್ಲಿ ದಿನವೂ ಜಗಳ ಮಾಡುತ್ತಿದ್ದರು. ಇದೇ ಕೋಪದಲ್ಲಿ ಗಂಡ ವಾಸಿಮ್ ಅಹ್ಮದ್, ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದಾನೆ. ನಂತರ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶವವನ್ನು ಹೂತು ಹಾಕಿದ್ದಾನೆ.
ಘಟನೆ ಸಂದರ್ಭದಲ್ಲಿ ವಾಸಿಮ್ ಅಹ್ಮದ್ ತಾಯಿ ಆಶಿಯಾ ಬೇಗಂ ಊರಿನಲ್ಲಿ ಇರಲಿಲ್ಲ. ಮಗಳ ಮನೆಗೆ ಹೋಗಿದ್ದರು. ಎರಡು ದಿನಗಳ ನಂತರ ಮನೆಗೆ ಬಂದ ತಾಯಿ ಆಶಿಯಾ ಸೊಸೆಯ ಬಗ್ಗೆ ವಿಚಾರಿಸಿದ್ದು ಪತ್ನಿ ಹೊರಗೆ ಹೋಗಿದ್ದಾಳೆ ಎಂದು ಮಗ ಸುಳ್ಳು ಹೇಳಿದ್ದ. ಸೊಸೆ ದಿನ ಕಳೆದರೂ ಕಾಣದಿದ್ದಾಗ ಅತ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ.
ಮನೆಯ ಒಳಗೆ ನೆಲ ಅಗೆದಿರುವುದನ್ನು ನೋಡಿ ಅನುಮಾನದ ಮೇಲೆ, ಪೊಲೀಸರು ಆ ಜಾಗವನ್ನು ಅಗೆದು ನೋಡಿದಾಗ ಉಮಾ ಶರ್ಮಾಳ ಮೃತದೇಹ ಹೂತಿರುವುದು ಪತ್ತೆಯಾಗಿದೆ. ಆರೋಪಿ ವಾಸಿಮ್ ಅಹ್ಮದ್ನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಲಖೀಂ ಪುರ್ ಖೇರಿ ಜಿಲ್ಲೆಯ ಹಫೀಜ್ ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ.
A young Muslim man who fell in love with a Hindu young woman and married her, killed her and buried her under the bed room in Uttar Pradesh. Such a terrible incident took place in Hafijapur village of Lakhimpur Kheri district. Mohammed Wasi brutally killed his wife Uma Sharma alias Aksha Fatima. He beat her, then gave her an electric shock, and then buried her dead body in the room of his house.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm