ಬ್ರೇಕಿಂಗ್ ನ್ಯೂಸ್
27-12-22 05:09 pm Mangalore Correspondent ಕ್ರೈಂ
ಮಂಗಳೂರು, ಡಿ.27: ಕಾಟಿಪಳ್ಳ ಜಲೀಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕಾಟಿಪಳ್ಳ ನಾಲ್ಕನೇ ಬ್ಲಾಕ್ ಕೃಷ್ಣಾಪುರ ನಿವಾಸಿ ಲಕ್ಷ್ಮೀಶ ದೇವಾಡಿಗ(28) ಬಂಧಿತ.
ಈಗಾಗಲೇ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಶೈಲೇಶ್ ಪೂಜಾರಿ, ಸವಿನ್ ಕಾಂಚನ್ ಮತ್ತು ಪವನ್ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಲಕ್ಷ್ಮೀಶ ಮತ್ತು ಶೈಲೇಶ್ ಸೇರಿಕೊಂಡು ಜಲೀಲ್ ಕೊಲೆಗೆ ಸಂಚು ಹೆಣೆದಿದ್ದರು ಎನ್ನಲಾಗಿದೆ.


ಶೈಲೇಶ್ ಮತ್ತು ಸವಿನ್ ಕಾಂಚನ್ ರೌಡಿ ಶೀಟರ್ ಗಳಾಗಿದ್ದು ಕೃತ್ಯ ಎಸಗಿದವರು. ಹಿಂದು ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಇರಿಸಿಕೊಂಡ ಕಾರಣಕ್ಕೆ ಶೈಲೇಶ್ ಪೂಜಾರಿ, ಜಲೀಲ್ ಜೊತೆಗೆ ಜಟಾಪಟಿ ಮಾಡಿಕೊಂಡಿದ್ದ. ಈ ಹಿಂದೆ ಜಲೀಲ್ ಗೆ, ಮಹಿಳೆಯ ಸಂಬಂಧ ಬಿಡುವಂತೆ ಎಚ್ಚರಿಕೆಯನ್ನೂ ನೀಡಿದ್ದ. ಮೊನ್ನೆ ಶನಿವಾರ ಬೆಳಗ್ಗೆ ಬೈಕಿನಲ್ಲಿ ಸಾಗುತ್ತಿದ್ದಾಗ ಎದುರಿನಲ್ಲಿ ಸಿಕ್ಕಿದ್ದ ಜಲೀಲನಿಗೆ ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿ ಬೆದರಿಕೆಯನ್ನೂ ಹಾಕಿದ್ದ. ಅದೇ ದಿನ ಮಧ್ಯಾಹ್ನ ಸುರತ್ಕಲ್ಲಿನ ಶೇಂದಿ ಅಂಗಡಿಯಲ್ಲಿ ಕುಳಿತು ಸವಿನ್ ಕಾಂಚನ್ ಬರಹೇಳಿ, ಸಂಜೆ ವೇಳೆಗೆ ಕೃತ್ಯ ಎಸಗುವ ಬಗ್ಗೆ ಪ್ಲಾನ್ ಹಾಕಿದ್ದರು.
ಆರೋಪಿಗಳಲ್ಲಿ ಒಬ್ಬಾತನಿಗೆ ಆ ಮಹಿಳೆಯ ಜೊತೆಗೆ ಸ್ನೇಹ ಇತ್ತು. ಹಾಗಾಗಿ, ಜಲೀಲ್ ಜೊತೆಗೆ ಸಂಬಂಧ ಬಿಟ್ಟು ಬಿಡುವಂತೆ ಆಕೆಗೂ ಸೂಚಿಸಿದ್ದರು. ಆದರೆ ಜಲೀಲ್, ಮಹಿಳೆಗೆ ಸ್ಕೂಟರ್ ತೆಗೆಸಿಕೊಟ್ಟು ತನ್ನ ಸಂಬಂಧ ಮುಂದುವರಿಸಿದ್ದ. ಇದೇ ಸಿಟ್ಟಿನಲ್ಲಿ ನಾಲ್ವರು ಸೇರಿ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
Surathkal Jaleel Murder case, Lakshmish Devadiga fourth accused arrested in Mangalore. Earlier, three persons Shailesh Poojary (21) from Krishnapura, Savin Kanchan (24) from Hejamady and Pavan (23) from Katipalla were arrested. Shailesh and Savin are also the accused in Pinky Nawaz murder attempt case who is the prime accused of the 2018 Deepak Rao murder case.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am