ಬ್ರೇಕಿಂಗ್ ನ್ಯೂಸ್
09-01-23 05:44 pm HK News Desk ಕ್ರೈಂ
ಶಿವಮೊಗ್ಗ, ಜ.8: ಹೊಂಚು ಹಾಕಿ ಮಚ್ಚಿನಿಂದ ಹಲ್ಲೆ ಮಾಡುವ ವೇಳೆ ಭಜರಂಗದಳ ಕಾರ್ಯಕರ್ತನೊಬ್ಬ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಘಟನೆ ಸಾಗರದ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ. ಸಮೀರ್ ಎನ್ನುವ ವ್ಯಕ್ತಿ ಹಲ್ಲೆಗೆ ಯತ್ನಿಸಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸದಿದ್ದರೇ ನಾಳೆ ಸಾಗರ ಬಂದ್ ಮಾಡೋದಾಗಿ ಭಜರಂಗದಳದ ಮುಖಂಡರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಸಾಗರದ ಉಪ್ಪಾರ ಕೇರಿ ಗ್ರಾಮದ ಸುನಿಲ್ (28) ಮಚ್ಚಿನೇಟಿನಿಂದ ತಪ್ಪಿಸಿಕೊಂಡ ಕಾರ್ಯಕರ್ತ. ಇವತ್ತು ಬೆಳಗ್ಗೆ 9 ಗಂಟೆ ಸಮಯದಲ್ಲಿ ಸುನಿಲ್ ಜಿಯೋ ಫೈಬರ್ ಕಚೇರಿಯ ಹತ್ತಿರ ಬೈಕ್ನಲ್ಲಿ ಬಂದಿದ್ದಾರೆ. ಈ ವೇಳೆ ಸಮೀರ್ ತನ್ನ ಸ್ಕೂಟಿ ಬೈಕ್ನಲ್ಲಿಟ್ಟಿದ್ದ ಮಚ್ಚು ತೆಗೆದುಕೊಂಡು ಹಲ್ಲೆ ಮಾಡಲು ಮುಂದಾಗಿದ್ದಾನೆ. ತಕ್ಷಣ ಸುನಿಲ್ ಎಚ್ಚೆತ್ತುಕೊಂಡು ಬೈಕ್ ಓಡಿಸಲು ಮುಂದಾಗುತ್ತಾರೆ. ಆಗ ಸಮೀರ್ ಸ್ಕೂಟಿಯಲ್ಲಿ ಸುನಿಲ್ ಬೈಕ್ ಹಿಂಬಾಲಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏನಿದು ಪ್ರಕರಣ..?
ಸುನಿಲ್ ಹಾಗೂ ಸಮೀರ್ ಸಾಗರದ ಉಪ್ಪಾರ ಕೇರಿ ನಿವಾಸಿಗಳು. ಹಿಜಾಬ್ ವಿವಾದದಲ್ಲಿ ಇಬ್ಬರ ನಡುವೆ ವೈಷಮ್ಯ ಉಂಟಾಗಿತ್ತು. ಹೀಗಾಗಿ ಸಮೀರ್ ಹಗೆತನ ಸಾಧಿಸಿ ನಿನ್ನೆ ಸುನಿಲ್ಗೆ ಧಮ್ಕಿ ಹಾಕಿದ್ದ. ಮತ್ತೆ ಇವತ್ತು ಹೊಂಚು ಹಾಕಿ ಹಲ್ಲೆ ಮಾಡಿ ಮಚ್ಚಿನಿಂದ ಹೊಡೆಯಲು ಮುಂದಾಗಿದ್ದ ಎನ್ನಲಾಗಿದೆ.
ಸುನಿಲ್ ಮೇಲಿನ ದಾಳಿ ಯತ್ನ ಖಂಡಿಸಿ ಠಾಣಾ ಮುಂದೆ ನೂರಾರು ಭಜರಂಗದಳದ ಕಾರ್ಯರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸಮೀರ್ ವಿರುದ್ಧ ಸಾಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಜರಂಗದಳದ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆಗೆ ಯತ್ನ ಖಂಡಿಸಿ ನಾಳೆ ಸಾಗರ ಟೌನ್ ಬಂದ್ ಗೆ ಕರೆ ಹಿಂದೂಪರ ಸಂಘಟನೆಗಳು ಕರೆ ನೀಡಿದೆ.
Attempt to attack Bajrang Dal activists in Sagara over Hijab row, call for bandh in city. Bajrang Dal activists have warned the Karnataka Police that if they fail to arrest the accused, who tried to attack and kill a Bajrang Dal activist, by Monday evening, they would stage a bandh in Sagara town of Karnataka. 28-year-old Sunil, a resident of Upparakeri in Sagara had managed to escape attack from local resident Sameer. The accused Sameer allegedly tried to attack Sunil with a machete and he even chased him on bike.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm