ಬ್ರೇಕಿಂಗ್ ನ್ಯೂಸ್
18-01-23 10:00 pm Bangalore Correspondent ಕ್ರೈಂ
ಬೆಂಗಳೂರು, ಜ.17: ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ರಾಜಾನುಕುಂಟೆ ಸಮೀಪದ ಶಾನುಭೋಗನಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ.
ಶಾನುಭೋಗನಹಳ್ಳಿ ಗ್ರಾಮದ ರಾಶಿ(20) ಹತ್ಯೆಗೀಡಾದವರು. ಇಂದು ಸಂಜೆ 5 ಗಂಟೆ ಸುಮಾರಿಗೆ ಕಾಲೇಜು ಮುಗಿಸಿ ಮನೆಗೆ ಹೊರಟಿದ್ದ ಯವತಿ ದಿಬ್ಬೂರು ಗೇಟಿನಲ್ಲಿ ಬಸ್ನಿಂದ ಇಳಿದಿದ್ದಾರೆ. ಅಲ್ಲಿಂದ ಶಾನುಭೋಗನಹಳ್ಳಿಗೆ ನಡೆದು ಹೋಗುವಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯುವತಿಯ ಕತ್ತುಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಹತ್ಯೆಗೀಡಾದ ಯುವತಿ ಯಲಹಂಕದ ಕಾಲೇಜು ಒಂದರಲ್ಲಿ ಪ್ರಥಮ ಬಿ.ಎ ವ್ಯಾಸಂಗ ಮಾಡುತ್ತಿದ್ದರು. ಪ್ರೀತಿ ನಿರಾಕರಿಸಿದ ಹಿನ್ನೆಲೆ ಯುವತಿಯನ್ನು ಹತ್ಯೆ ಮಾಡಲಾಗಿದೆ.
ಸದ್ಯ ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಮಧುಚಂದ್ರನನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿ ಕೊಲೆ ಮಾಡಿದ ಬಳಿಕ ಆಂಧ್ರ ಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಮೂರು ವರ್ಷಗಳಿಂದ ಕಾಲೇಜು ರಜಾ ದಿನಗಳಲ್ಲಿ ಸೀಬೆ ಹಣ್ಣು ತೋಟದಲ್ಲಿ ಯುವತಿ ಕೆಲಸಕ್ಕೆ ಹೋಗುತ್ತಿದ್ದಳಂತೆ. ಈ ವೇಳೆ ಆಗಾಗ ತೋಟಕ್ಕೆ ಸೀಬೆ ಹಣ್ಣು ಬಾಕ್ಸ್ ಗಳನ್ನ ತೆಗೆದುಕೊಂಡು ಹೋಗಲು ಆರೋಪಿ, ಮಧುಚಂದ್ರ ಟೆಂಪೋ ತರುತ್ತಿದ್ದನಂತೆ. ಈ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಆತ್ಮೀಯತೆ ಇತ್ತು ಎನ್ನಲಾಗಿದೆ.
ಆರೋಪಿಗೆ ಈಗಾಗಲೇ ಮದುವೆಯಾಗಿ ಮಗು ಕೂಡ ಇದೆ:
ಆದರೆ ಆರೋಪಿ ಮಧುಚಂದ್ರನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, ಒಂದು ಮಗು ಸಹ ಇದೆಯಂತೆ. ಹೀಗಿದ್ದರೂ ಪ್ರೀತಿ ಮಾಡುವಂತೆ ಹಾಗೂ ತನ್ನ ಆಸೆಯಂತೆ ನಡೆದುಕೊಳ್ಳುವಂತೆ ಆರೋಪಿ ಒತ್ತಾಯ ಮಾಡುತ್ತಿದ್ದನಂತೆ. ಮದುವೆ ವಿಚಾರ ಹಾಗೂ ಆರೋಪಿ ವರ್ತನೆಯಿಂದ ಬೇಸತ್ತು ಯುವತಿ ಆತನಿಂದ ದೂರ ಇರಲು ಆರಂಭಿಸಿದ್ದಳಂತೆ. ಇದೇ ಕಾರಣಕ್ಕೆ ಕೋಪಗೊಂಡಿದ್ದ ಆರೋಪಿ, ನಿನ್ನೆ ತೋಟದಲ್ಲಿ ಅಡ್ಡ ಹಾಕಿ ಯುವತಿಯ ಕತ್ತುಕೊಯ್ದು ಪರಾರಿಯಾಗಿದ್ದ.
Bangalore 20 Year Old Girl Murdered On Her Way Back Home from college for rejecting love, slit throat. Rashi, a resident of Shanboganahalli, was a BA 1st year student at Yelahanka college who was attacked and the accused slit her throat on Tuesday evening when she was on her way home.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm