ಬ್ರೇಕಿಂಗ್ ನ್ಯೂಸ್
03-02-23 11:38 pm Mangaluru Correspondent ಕ್ರೈಂ
ಮಂಗಳೂರು, ಫೆ.3: ಧೂಳೆಬ್ಬಿಸಿಕೊಂಡು ಹೋಗಬೇಡ ಎಂದು ಬುದ್ಧಿವಾದ ಹೇಳಿದ ವ್ಯಕ್ತಿಯನ್ನು ಟಿಪ್ಪರ್ ಹಾಯಿಸಿ ಚಾಲಕನೇ ಕೊಲೆಗೈದ ಘಟನೆ ಮೂಡುಬಿದ್ರೆಯಲ್ಲಿ ನಡೆದಿದೆ. ಕೋಟೆಬಾಗಿಲು ನಿವಾಸಿ ಫಯಾಜ್ (63) ಕೊಲೆಯಾದವರು.
ಶುಕ್ರವಾರ ಮಧ್ಯಾಹ್ನ ಮಸೀದಿಗೆ ತೆರಳುತ್ತಿದ್ದಾಗ ಟಿಪ್ಪರ್ ಚಾಲಕ ಹ್ಯಾರಿಸ್ ಬಳಿ ಧೂಳು ಎಬ್ಬಿಸಿಕೊಂಡು ಸಾಗುತ್ತಿದ್ದ ಬಗ್ಗೆ ಪ್ರಶ್ನೆ ಮಾಡಿದ್ದರು. ಶಾಲಾ ಮಕ್ಕಳು ಹೋಗುವ ದಾರಿ, ಈ ರೀತಿ ಯಾಕೆ ಹೋಗುತ್ತೀಯಾ ಎಂದು ಕೇಳಿದ್ದರು. ಅದಕ್ಕೆ ಹ್ಯಾರಿಸ್, ನೀನು ಯಾರು ಕೇಳಲು ಎಂದು ಮರು ಪ್ರಶ್ನೆ ಮಾಡಿದ್ದು ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಆನಂತರ ಮಸೀದಿಯಿಂದ ಮರಳುತ್ತಿದ್ದಾಗ ಇದೇ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ಆಗಿದೆ. ಟಿಪ್ಪರ್ ಬಾಗಿಲಿನ ಬಳಿ ಹತ್ತಿ ನಿಂತಿದ್ದ ಫಯಾಜ್ ಮೇಲೆ ರಾಡಿನಿಂದ ಹ್ಯಾರಿಸ್ ಹಲ್ಲೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಫಯಾಜ್ ಬಾಗಿಲು ತೆಗೆದು ಒಳಗೆ ನುಗ್ಗಲು ಯತ್ನಿಸಿದ್ದು ಇದೇ ವೇಳೆ ಹ್ಯಾರಿಸ್ ಟಿಪ್ಪರ್ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಬಾಗಿಲಿನಲ್ಲಿ ನೇತಾಡಿಕೊಂಡಿದ್ದ ಫಯಾಜ್ ಕೆಳಕ್ಕೆ ಬಿದ್ದಿದ್ದು ಅದೇ ಟಿಪ್ಪರಿನ ಹಿಂದಿನ ಚಕ್ರ ಫಯಾಜ್ ಕಾಲು, ತೊಡೆಯ ಭಾಗದಿಂದ ಹರಿದು ಹೋಗಿದೆ.
ಕೂಡಲೇ ಫಯಾಜ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಹ್ಯಾರಿಸ್ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಮೂಡುಬಿದ್ರೆ ಠಾಣೆಯಲ್ಲಿ ಕೊಲೆ ಕೇಸು ದಾಖಲಾಗಿದೆ.
Moodbidri murder man moved down by a tipper truck driver over silly issue. Mangaluru city and Moodbidri town witnessed one each gruesome murder on Friday, February 3, when an unidentified miscreant stabbed a jewellery shop worker to death and a tipper truck driver mowed down an elderly man under the wheels of his vehicle, respectively.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm