ಬ್ರೇಕಿಂಗ್ ನ್ಯೂಸ್
07-02-23 08:46 pm Udupi Correspondent ಕ್ರೈಂ
ಉಡುಪಿ, ಫೆ.7 : ಎರಡು ದಿನಗಳ ಹಿಂದೆ ಪಾಂಗಾಳದಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಕಾಪು ಪೊಲೀಸರು ಸುರತ್ಕಲ್ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರಿನ ಸುರತ್ಕಲ್ ಪರಿಸರದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿಗಳಿವೆ. ಪಾಂಗಾಳ ಸೇತುವೆಯ ಬಳಿ ಭಾನುವಾರ ಸಂಜೆ ಶರತ್ ಶೆಟ್ಟಿ ಅವರನ್ನು ಇಬ್ಬರು ಯುವಕರು ಮಾತನಾಡುವ ನೆಪದಲ್ಲಿ ಕರೆದು ಹಾಡಹಗಲೇ ಕಡಿದು ಹತ್ಯೆ ಮಾಡಿದ್ದರು. ಹತ್ಯೆ ಬಳಿಕ ಮೂವರು ಯುವಕರು ಒಂದೇ ಬೈಕಿನಲ್ಲಿ ಪರಾರಿಯಾಗುತ್ತಿರುವ ವಿಡಿಯೋ ಲಭ್ಯವಾಗಿತ್ತು. ಅದರಲ್ಲಿ ಒಬ್ಬಾತ ಕೈಯಲ್ಲಿ ತಲವಾರು ಹಿಡಿದುಕೊಂಡೇ ಬೈಕಿನಲ್ಲಿ ತೆರಳಿರುವುದು ಕಂಡುಬಂದಿತ್ತು. ಅಲ್ಲದೆ, ಇನ್ನೊಬ್ಬ ಯುವಕ ಆ ಬೈಕಿನ ಹಿಂದೆಯೇ ಓಡುತ್ತಾ ಸಾಗಿದ್ದು ದಾಖಲಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರು ಹಲವು ಕೋನಗಳಿಂದ ತನಿಖೆ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಮಾಹಿತಿ ಪ್ರಕಾರ, ಶರತ್ ಶೆಟ್ಟಿ ಕೊಲೆಯ ಹಿಂದೆ ಹುಡುಗಿ ವಿಚಾರ ಇದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಹಲವರು ಕೈಜೋಡಿಸಿದ್ದಾರೆ ಎನ್ನಲಾಗುತ್ತಿದೆ. ಶರತ್ ಶೆಟ್ಟಿ ಅವಿವಾಹಿತನಾಗಿದ್ದು, ಕಾಪು ಮತ್ತು ಉಡುಪಿಯಲ್ಲಿ ಜಾಗದ ವ್ಯವಹಾರ ನಡೆಸುತ್ತಿದ್ದ.
ರಿಯಲ್ ಎಸ್ಟೇಟ್ ವಹಿವಾಟಿನ ವಿಚಾರದಲ್ಲಿ ಹಲವರು ವೈಷಮ್ಯವನ್ನೂ ಕಟ್ಟಿಕೊಂಡಿದ್ದ. ಹುಡುಗಿ ವಿಚಾರದಲ್ಲಿ ಕೊಲೆಗೆ ಸಂಚು ರೂಪಿಸಿದ್ದ ವ್ಯಕ್ತಿಗೆ ರಿಯಲ್ ಎಸ್ಟೇಟ್ ಕುಳಗಳು ಸಹಕಾರ ನೀಡಿರುವ ಸಂಶಯಗಳೂ ಕೇಳಿಬರತೊಡಗಿವೆ. ಸದ್ಯಕ್ಕೆ ಕಾಪು ಪೊಲೀಸರು ಸುರತ್ಕಲ್ ಮತ್ತು ಕಾಟಿಪಳ್ಳ ಪರಿಸರದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಮೂವರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಉಡುಪಿ ಎಸ್ಪಿ ಮಚೇಂದ್ರ ಹಾಕೆ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ, ಕಾಪು ಠಾಣೆ ಎಸ್ಐ ಸುಮಾ ಬಿ., ಕ್ರೈಮ್ ಪಿಎಸ್ಐ ಭರತೇಶ್ ತನಿಖೆ ನಡೆಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ ; ಪಾಂಗಾಳ ಸೇತುವೆ ಬಳಿ ಕೃತ್ಯ
Udupi real estate relator Sharath shetty murder, two from mangalore surathkal arrested by Kapu police. Love matter has resulted to murder. A youth was hacked to death by a gang of miscreants in Pangala here on Sunday, February 5 evening. The victim is identified as Sharath Shetty, a resident of Pangala. He was involved in real estate business. The incident took place near Pangala Temple on National Highway 66. Sharath Shetty was attending Bhootada Kola in the temple premises when the miscreants allegedly called him out.
Later, the gang, reportedly, attacked him with sharp weapons.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm