ಬ್ರೇಕಿಂಗ್ ನ್ಯೂಸ್
19-02-23 10:58 pm HK News Desk ಕ್ರೈಂ
ಹಾಸನ, ಫೆ.19 : ಆನ್ಲೈನಲ್ಲಿ ಐಫೋನ್ ಆರ್ಡರ್ ಮಾಡಿದ್ದ ಯುವಕನೊಬ್ಬ ಫೋನ್ ಖರೀದಿಸಲು ಹಣವಿಲ್ಲದೆ ಮೊಬೈಲ್ ಡೆಲಿವರಿ ನೀಡಲು ಬಂದಿದ್ದ ಯುವಕನನ್ನೇ ಬರ್ಬರವಾಗಿ ಕೊಲೆ ಮಾಡಿದ ಶಾಕಿಂಗ್ ಕೃತ್ಯ ಬೆಳಕಿಗೆ ಬಂದಿದೆ.
ಫೆಬ್ರವರಿ 11ರಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊರವಲಯದ ಕೊಪ್ಪಲು ರೈಲ್ವೆ ಗೇಟ್ ಸಮೀಪ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಪರಿಶೀಲನೆ ನಡೆಸಿದ್ದ ಹಾಸನ ಎಸ್ಪಿ ಹರಿರಾಮ್ ಶಂಕರ್, ತನಿಖೆಗೆ ವಿಶೇಷ ತಂಡ ನೇಮಿಸಿದ್ದರು. ಗೋಣಿ ಚೀಲದಲ್ಲಿ ಶವ ತಂದು ಯಾವುದೋ ರಾಸಾಯನಿಕ ಬಳಸಿ ಮೃತದೇಹವನ್ನು ಸುಟ್ಟು ಹಾಕಿ ಸಾಕ್ಷಿ ನಾಶ ಮಾಡಲು ಯತ್ನಿಸಿದ್ದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.
ಕೊಲೆಯಾದ ವ್ಯಕ್ತಿಯನ್ನು ಅರಸೀಕೆರೆ ತಾಲೂಕಿನ ಹಳೆಕಲ್ಲನಾಯಕನ ಹಳ್ಳಿಯ ಹೇಮಂತ್ ನಾಯ್ಕ್ (23) ಎಂದು ಪೊಲೀಸರು ಗುರುತಿಸಿದ್ದರು. ಬಳಿಕ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಅರಸೀಕೆರೆ ನಗರ ಲಕ್ಷ್ಮೀಪುರದ ಹೇಮಂತ್ ದತ್ತ (20) ಕೊಲೆ ಆರೋಪಿಯೆಂದು ಬಂಧಿಸಿ ಜೈಲಿಗಟ್ಟಿದ್ದಾರೆ.
ಫೆ.7 ರಂದು ಇ-ಕಾರ್ಟ್ ಎಕ್ಸಪ್ರೆಸ್ನಲ್ಲಿ ಡೆಲಿವರಿ ಬಾಯ್ ಆಗಿದ್ದ ಹೇಮಂತ್ ನಾಯ್ಕ್, ಆರೋಪಿ ಹೇಮಂತ್ ದತ್ತ ಆರ್ಡರ್ ಮಾಡಿದ್ದ ಸೆಕೆಂಡ್ ಹ್ಯಾಂಡ್ ಐಫೋನ್ ಡೆಲಿವರಿ ಮಾಡಲು ಅರಸೀಕೆರೆಯ ನಿವಾಸಕ್ಕೆ ಆಗಮಿಸಿದ್ದ. ಈ ವೇಳೆ ಡೆಲಿವರಿ ಬಾಯ್ ಹೇಮಂತ್ ನಾಯ್ಕ್ 42 ಸಾವಿರ ಆಗತ್ತೆ, ಹಣ ಕೊಟ್ಟರೆ ಮಾತ್ರ ಪಾರ್ಸೆಲ್ ಬಿಚ್ಚಬಹುದು ಎಂದಿದ್ದ. ಮೊಬೈಲ್ ನೋಡದೆ ಹಣ ನೀಡೋಕೆ ಆಗಲ್ಲ ಎಂದಿದ್ದಕ್ಕೆ ಡೆಲಿವರಿ ಬಾಯ್ ಕೇಳಲು ರೆಡಿ ಇರಲಿಲ್ಲ. ನಾವು ಪಾರ್ಸೆಲ್ ಮಾತ್ರ ಕೊಡುವುದು, ಬಾಕ್ಸ್ ನಲ್ಲೇನಿದೆ ಎನ್ನುವುದು ಡೆಲಿವರಿ ಬಾಯ್ ವಾದ ಮಾಡಿದ್ದ. ಹೀಗಾಗಿ ಮನೆಯ ಒಳಗಡೆ ಕುಳಿತುಕೊಳ್ಳಿ, ಹಣ ತರುತ್ತೇನೆ ಎಂದು ಆರೋಪಿ ಹೇಮಂತ್ ದತ್ತ ಮನೆಯ ಒಳಗೆ ಹೋಗಿದ್ದ.
ಆರೋಪಿ ಮಾತನ್ನು ನಂಬಿದ್ದ ಹೇಮಂತ್ ನಾಯ್ಕ್ ಮನೆಯಲ್ಲಿದ್ದ ಚೇರ್ ಮೇಲೆ ಕುಳಿತುಕೊಂಡಿದ್ದ. ಇತ್ತ ಹಣ ತರುತ್ತೇನೆ ಎಂದು ಹೇಳಿ ಒಳಗಡೆ ಹೋಗಿದ್ದ ಆರೋಪಿ ಹೇಮಂತ್ ದತ್ತ, ಹಿಂಬದಿಯಿಂದ ಬಂದು ಹೇಮಂತ್ ನಾಯ್ಕ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅನಿರೀಕ್ಷಿತ ದಾಳಿಗೆ ಸಿಲುಕಿದ ಹೇಮಂತ್ ನಾಯ್ಕ್ ತೀವ್ರ ರಕ್ತಸ್ರಾವದಿಂದ ಆತನ ಮನೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ.
ಡೆಲಿವರಿ ಬಾಯ್ನನ್ನು ಕೊಲೆ ಮಾಡಿದ್ದ ಆರೋಪಿ ಮೂರು ದಿನಗಳ ಕಾಲ ತನ್ನ ಮನೆಯಲ್ಲೇ ಮೃತದೇಹವನ್ನು ಇಟ್ಟುಕೊಂಡಿದ್ದ. ಆ ಬಳಿಕ ಫೆ.11ರಂದು ಗೋಣಿ ಚೀಲದಲ್ಲಿ ಮೃತದೇಹ ಕಟ್ಟಿ ಸ್ಕೂಟರ್ ನಲ್ಲಿ ಅರಸೀಕೆರೆ ತಾಲೂಕಿನ ಹೊರವಲಯದ ಕೊಪ್ಪಲು ರೈಲ್ವೆ ಗೇಟ್ ಬಳಿಗೆ ತಂದಿದ್ದು ಅಲ್ಲಿ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಿಸ್ಸಿಂಗ್ ಪ್ರಕರಣಗಳ ಜಾಡು ಹಿಡಿದು ತನಿಖೆ ಶುರು ಮಾಡಿದ್ದರು. ಅಲ್ಲದೆ ಕೃತ್ಯ ನಡೆದ ಸ್ಥಳದಲ್ಲಿದ್ದ ಹಲವು ಸಿಸಿಟಿವಿ ವಿಡಿಯೋ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಫೆಬ್ರವರಿ 11ರಂದು ಆರೋಪಿ ಹೇಮಂತ್ ದತ್ತ, ತನ್ನ ಸ್ಕೂಟರ್ನಲ್ಲಿ ಪೆಟ್ರೋಲ್ ಬಂಕ್ಗೆ ಆಗಮಿಸಿ ಬಾಟಲ್ನಲ್ಲಿ ಪೆಟ್ರೋಲ್ ತುಂಬಿಸಿಕೊಂಡ ದೃಶ್ಯ ಸಿಕ್ಕಿತ್ತು. ಇದರ ಬೆನ್ನತ್ತಿ ಹೇಮಂತ್ ದತ್ತ ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.
In a shocking incident, a 20-year-old allegedly killed a Flipkart delivery agent who came to deliver his iPhone in Karnataka on February 7over unboxing, reported The Hindu. The incident took place in the Haasan district of the state. The 20-year-old man reportedly stabbed the delivery partner for not having enough money to pay for his order. The accused has been identified as Hemant Datta. He is a resident of the Lakshmipuram area of Arsekere taluka.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm