ಬ್ರೇಕಿಂಗ್ ನ್ಯೂಸ್
20-02-23 10:25 pm Mangalore Correspondent ಕ್ರೈಂ
ಪುತ್ತೂರು, ಫೆ.20 : ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಕ್ಕೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಪ್ರಯಾಣಿಕನೊಬ್ಬ ಮಹಿಳಾ ಕಂಡಕ್ಟರ್ ಮೇಲೆ ಹಲ್ಲೆಗೈದು ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದೆ.
ಈ ಬಗ್ಗೆ ಸಂತ್ರಸ್ತ ಮಹಿಳಾ ಕಂಡಕ್ಟರ್ ಪುತ್ತೂರು ಠಾಣೆಗೆ ದೂರು ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ಪುತ್ತೂರಿನಿಂದ ಮಂಗಳೂರಿಗೆ ಹೊರಟಿದ್ದ ಬಸ್ ನಲ್ಲಿ ಕಿಕ್ಕಿರಿದು ತುಂಬುವಷ್ಟು ಪ್ರಯಾಣಿಕರಿದ್ದರು. ಈ ವೇಳೆ, ಬಸ್ಸಿಗೆ ಅಂಗವಿಕಲ ವ್ಯಕ್ತಿಯೊಬ್ಬರು ಹತ್ತಿದ್ದು ಕಂಡಕ್ಟರ್ ಆಗಿದ್ದ ಮಹಿಳೆ ಅಂಗವಿಕಲ ವ್ಯಕ್ತಿಗಳಿಗೆ ಮೀಸಲಾಗಿರುವ ಸೀಟು ಬಿಟ್ಟು ಕೊಡುವಂತೆ ಪ್ರಯಾಣಿಕನಿಗೆ ಹೇಳಿದ್ದಾರೆ.
ಇದರಿಂದ ಸಿಟ್ಟುಗೊಂಡ ಪ್ರಯಾಣಿಕ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕಂಡಕ್ಟರ್ ಮಹಿಳೆಯ ಕಾಲರ್ ಹಿಡಿದು ಎಳೆದಿದ್ದಾನೆ. ಅಲ್ಲದೆ, ಹಲ್ಲೆಗೆ ಮುಂದಾಗಿದ್ದು ಅಡ್ಡ ಕೈಹಿಡಿದ ಮಹಿಳೆಯ ಕೈಯನ್ನು ಹಿಡಿದು ತಿರುಚಿದ್ದಾರೆ. ಇದಾಗುತ್ತಲೇ ಚಾಲಕ ಬಸ್ ನಿಲ್ಲಿಸಿ ಕಂಡಕ್ಟರ್ ನೆರವಿಗೆ ಬಂದಿದ್ದಾರೆ. ಬಸ್ ಪುತ್ತೂರು ಹೊರವಲಯದ ಪ್ರಗತಿ ಆಸ್ಪತ್ರೆ ಬಳಿ ನಿಲ್ಲುತ್ತಿದ್ದಂತೆ ಆರೋಪಿ ಪ್ರಯಾಣಿಕ ಬಸ್ ಇಳಿದು ಪರಾರಿಯಾಗಿದ್ದಾನೆ.
ಕಂಡಕ್ಟರ್ ಮಹಿಳೆ, ಆರೋಪಿಯ ಬಗ್ಗೆ ಇತರ ಪ್ರಯಾಣಿಕರ ಜೊತೆಗೆ ಮಾತನಾಡಿದ ವೇಳೆ ಆತನ ಹೆಸರು ಹಸನ್ ಮುರ ಎಂದು ಗೊತ್ತಾಗಿದೆ. ಆರೋಪಿಯ ಹೆಸರು ಉಲ್ಲೇಖಿಸಿ ಕಂಡಕ್ಟರ್ ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ತನ್ನ ಕೈ ತಿರುಚಿದ್ದರಿಂದ ಗಾಯಗೊಂಡಿರುವ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೈ ಹಿಡಿದು ಮಹಿಳೆಯ ಮೈಗೆ ಹಾಕಿದ್ದರಿಂದ ಆರೋಪಿ ವಿರುದ್ಧ ಹಲ್ಲೆ ಮತ್ತು ಮಾನಭಂಗ ಯತ್ನ ಪ್ರಕರಣ ದಾಖಲಾಗಿದೆ.
In a shocking incident, a woman conductor was allegedly assaulted and abused by a passenger of a KSRTC bus which was on its way from Puttur to The State Bank bus stand in Mangaluru.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm