ಬ್ರೇಕಿಂಗ್ ನ್ಯೂಸ್
27-02-23 02:31 pm Mangalore Correspondent ಕ್ರೈಂ
ಬಂಟ್ವಾಳ, ಫೆ.27: ಮೇಸ್ತ್ರಿ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯೊಬ್ಬ ಮನೆ ಮಾಲೀಕನ ಪತ್ನಿಯನ್ನೇ ಸಲುಗೆ ಮಾಡಿಕೊಂಡು ಅಕ್ರಮ ಸಂಬಂಧ ಬೆಳೆಸಿದ್ದಲ್ಲದೆ, ಕೊನೆಗೆ ಆಕೆಯ ಜೊತೆಗೂಡಿ ಮಾಲಕನನ್ನೇ ಕತ್ತು ಹಿಸುಕಿ ಕೊಂದು ಹಾಕಿರುವ ಘಟನೆ ವಿಟ್ಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ವಿಟ್ಲ ಸಮೀಪದ ಇಡ್ಕಿದು ಗ್ರಾಮದ ನಿವಾಸಿ ಅರವಿಂದ ಭಾಸ್ಕರ ನಾಯ್ಕ(38) ಮೃತ ವ್ಯಕ್ತಿ. ಈತನ ಪತ್ನಿ ಆಶಾ ಮತ್ತು ಪ್ರಿಯಕರ ಯೋಗೀಶ ಗೌಡ ಸೇರಿಕೊಂಡು ಭಾಸ್ಕರ ನಾಯ್ಕನನ್ನು ರಾತ್ರಿ ವೇಳೆ ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾರೆಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಯೋಗೀಶ್ ಗೌಡ ಮೇಸ್ತ್ರಿ ಕೆಲಸಗಾರನಾಗಿದ್ದು, ವರ್ಷದ ಹಿಂದೆ ಅರವಿಂದ ಭಾಸ್ಕರನ ಹೊಸ ಮನೆಯ ಕೆಲಸಕ್ಕೆ ಬಂದಿದ್ದಾಗ ಪತ್ನಿಯ ಪರಿಚಯ ಆಗಿತ್ತು. ಆನಂತರ, ಸಲುಗೆ ಬೆಳೆಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಅರವಿಂದ ಭಾಸ್ಕರ ಕುಡಿತದ ಚಟ ಹೊಂದಿದ್ದರಿಂದ ರಾತ್ರಿ ವೇಳೆ ಯೋಗೀಶ ಗೌಡ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದ. ಪತ್ನಿಯೊಂದಿಗೆ ಸಂಬಂಧ ಇರಿಸಿಕೊಂಡಿದ್ದನ್ನು ತಿಳಿದ ಭಾಸ್ಕರ ಜಗಳವನ್ನೂ ಮಾಡಿದ್ದ. ಕಳೆದ ಒಂದು ವರ್ಷದಿಂದಲೂ ಇವರ ಸಂಬಂಧ ಮುಂದುವರಿದಿದ್ದು, ಇದರಿಂದ ರೋಸಿ ಹೋಗಿದ್ದ ಭಾಸ್ಕರ ಈ ಬಗ್ಗೆ ತನ್ನ ಗೆಳೆಯರಿಗೂ ಹೇಳಿಕೊಂಡಿದ್ದ.
ಭಾಸ್ಕರನಿಗೆ ಇಬ್ಬರು ಸಣ್ಣ ಹೆಣ್ಮಕ್ಕಳಿದ್ದು, ಅದರ ನಡುವೆಯೂ ಆಶಾ ಇನ್ನೊಬ್ಬನ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ಮೊನ್ನೆ ಶನಿವಾರ ರಾತ್ರಿ ಭಾಸ್ಕರ ಕುಡಿದು ಬಂದು ಗಲಾಟೆ ಮಾಡಿದ್ದು ಆನಂತರ ಮಲಗಿದ್ದಾಗ ತಲೆದಿಂಬನ್ನು ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ತನ್ನ ಸಂಬಂಧಿಕರಿಗೆ ಗಂಡ ಮಲಗಿದವರು ಏಳುತ್ತಿಲ್ಲ ಎಂದು ಆಶಾ ಫೋನ್ ಮಾಡಿ ತಿಳಿಸಿದ್ದಳು. ಇದೇ ವೇಳೆ, ಯೋಗೀಶ ಗೌಡನ ಜೊತೆ ಸೇರಿ ಭಾಸ್ಕರನನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಒಯ್ದಿದ್ದಳು. ಅಲ್ಲಿ ಪರಿಶೀಲಿಸಿದ ವೈದ್ಯರು ಭಾಸ್ಕರ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಆಸ್ಪತ್ರೆ ಸಿಬಂದಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಇವರ ನಾಟಕ ಬಯಲಾಗಿತ್ತು. ವಿಟ್ಲ ಪೊಲೀಸರು ಸಂಶಯದ ಮೇರೆಗೆ ಆಶಾ ಮತ್ತು ಯೋಗೀಶ್ ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
In a shocking case reported from Vitla in Mangalore, a woman and her lover strangled her husband to death over opposing her illicit relationship with a house building labourer. The deceased has been identified as Arvind Bhaskar Naik (34). Vitla police have arrested both and the investigation is in progress.
10-01-25 02:44 pm
Bangalore Correspondent
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
S T Somashekar, Yatnal, DK Shivakumar temple:...
09-01-25 04:54 pm
Hassan, Lokayukta Arrest: ಹಾಸನಾಂಬ ಜಾತ್ರಾ ಮಹೋತ...
09-01-25 04:21 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
09-01-25 07:50 pm
Mangalore Correspondent
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
Surathkal Beach, Drowning, Mangalore; ಸುರತ್ಕಲ...
08-01-25 06:13 pm
Naxal, Vikram Gowda, Surrender: ಶರಣಾಗುವವರಿಗೆ...
08-01-25 11:53 am
MCC Bank Anil Lobo, Bail Reject, Mangalore; ಎ...
07-01-25 11:13 pm
10-01-25 10:11 am
Mangalore Correspondent
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm
Old Coin Scam, Mangalore Fraud: ಎಲ್ಲ ಆಯ್ತು.....
09-01-25 01:26 pm
Vamanjoor Misfire, Mangalore Crime, Police; ಪ...
09-01-25 11:27 am