ಬ್ರೇಕಿಂಗ್ ನ್ಯೂಸ್
07-03-23 10:59 pm HK News Desk ಕ್ರೈಂ
ಲಕ್ನೋ, ಮಾ.7: ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಲ್ಲದೆ, ಹೆಣವನ್ನು ಐದು ತುಂಡುಗಳನ್ನಾಗಿಸಿ ನೀರಿನ ಟ್ಯಾಂಕ್ ನಲ್ಲಿ ಬಚ್ಚಿಟ್ಟ ಕೃತ್ಯ ಛತ್ತೀಸ್ ಗಢ ರಾಜ್ಯದ ಬಿಲಾಸ್ ಪುರ ಜಿಲ್ಲೆಯಲ್ಲಿ ನಡೆದಿದ್ದು ಒಂದೂವರೆ ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ನಕಲಿ ಕರೆನ್ಸಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದಾನೆಂಬ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯ ಮನೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ, ಮನೆಯ ಬಾತ್ ರೂಮ್ ಬಳಿಯಲ್ಲಿ ಮುಚ್ಚಿರುವ ಕೋಣೆ ಪತ್ತೆಯಾಗಿದ್ದು, ಅದನ್ನು ಒಡೆದು ನೋಡಿದಾಗ ನೀರಿನ ಖಾಲಿ ಟ್ಯಾಂಕ್ ಪತ್ತೆಯಾಗಿದೆ. ಶವದ ತುಂಡುಗಳನ್ನು ಪ್ಲಾಸ್ಟಿಕ್ ಮತ್ತು ಪಾಲಿಥೀನ್ ಕವರ್ ನಲ್ಲಿ ಮುಚ್ಚಿಡಲಾಗಿತ್ತು. ವಿಚಾರಣೆ ನಡೆಸಿದಾಗ ಜನವರಿ 5ರಂದು ಪತ್ನಿಯನ್ನು ಕೊಂದಿರುವ ವಿಚಾರ ತಿಳಿಸಿದ್ದಾನೆ.
ಆತನ ಬಳಿ ಇದ್ದ 500 ಮತ್ತು 200 ಮುಖಬೆಲೆಯ ನಕಲಿ ನೋಟುಗಳು, ಕಲರ್ ಪ್ರಿಂಟರ್ ಮೆಷಿನ್, ಫೋಟೋ ಕಾಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ನಿಯೂ ನಕಲಿ ನೋಟು ಮುದ್ರಣಕ್ಕೆ ಸಹಕರಿಸುತ್ತಿದ್ದಳು ಎಂದು ತಿಳಿಸಿರುವ ಆರೋಪಿ, ಆಕೆ ಬೇರೆಯವರ ಜೊತೆ ಸಂಬಂಧ ಇರಿಸಿದ್ದಾಳೆಂಬ ಶಂಕೆಯಲ್ಲಿ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಪತ್ನಿಯನ್ನು ಕೊಂದ ಬಳಿಕ ನೀರಿನ ಟಾಂಕಿ ಮತ್ತು ಕಟ್ಟರ್ ಮೆಷಿನ್ ಖರೀದಿಸಿ ತಂದಿದ್ದ. ಶವ ಸುಟ್ಟರೆ ವಾಸನೆ ಬರುತ್ತದೆಯೆಂದು ಪರಿಸರದ ಜನರಿಗೆ ತಿಳಿಯದಂತೆ ಮನೆಯ ಒಳಗೇ ವಾಟರ್ ಟ್ಯಾಂಕ್ ನಲ್ಲಿಟ್ಟು ಬಂದ್ ಮಾಡಿದ್ದಾನೆ. ಆನಂತರವೂ ವಾಸನೆ ಬಂದಿದ್ದಕ್ಕೆ ಕೋಣೆಯೊಳಗಿಟ್ಟು ಅದನ್ನು ಬಂದ್ ಮಾಡಿದ್ದಾನೆ.
ಹತ್ತು ವರ್ಷಗಳ ಹಿಂದೆ ಆರೋಪಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಪತ್ನಿ ಕಾಣೆಯಾಗಿದ್ದಾಳೆಂದು ಹೇಳಿ ಮಕ್ಕಳನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು ಬಂದಿದ್ದ. ಕೊಲೆ ಮತ್ತು ನಕಲಿ ನೋಟು ಮುದ್ರಣ ವಿಚಾರದಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.
A 32-year-old man allegedly killed his wife, chopped her body into five pieces and hid them inside an empty water tank at his house in Chhattisgarh's Bilaspur district. Police on Sunday recovered the body parts from the tank which was kept inside the house. Bilaspur Superintendent of Police Santosh Singh told PTI that the accused strangled his wife Sati Sahu (23) on January 6 on suspicions of infidelity.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am