ಬ್ರೇಕಿಂಗ್ ನ್ಯೂಸ್
02-04-23 02:02 pm Mangalore Correspondent ಕ್ರೈಂ
ಮಂಗಳೂರು, ಎ.2: ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನ ಹೆಸರಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಇಫ್ತಿಕಾರ್ ಅಹ್ಮದ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಮೂಲದ ಶಶಿಕಾಂತ್ ದೀಕ್ಷಿತ್ ಎಂಬವರು ತನ್ನಿಂದ 22.5 ಲಕ್ಷ ರೂಪಾಯಿ ಹಣ ಪಡೆದು ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ದೊರಕಿಸುವುದಾಗಿ ನಂಬಿಸಿ ಇಫ್ತಿಕಾರ್ ಅಹ್ಮದ್ ಮತ್ತಿತರರು ಸೇರಿ ಮೋಸ ಮಾಡಿದ್ದಾಗಿ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಮಾರ್ಚ್ 5ರಂದು ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದೇ ವೇಳೆಗೆ, ಮುಂಬೈನಲ್ಲಿ ಮೆಡಿಕಲ್ ಸೀಟು ಹೆಸರಲ್ಲಿ ಮೋಸ ಮಾಡಿದ ಪ್ರಕರಣದಲ್ಲಿ ಇಫ್ತಿಕಾರ್ ಅಹ್ಮದ್ ಎಂಬಾತನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.

ಇದೀಗ ಉಳ್ಳಾಲ ಪೊಲೀಸರು ಆರೋಪಿ ಇಫ್ತಿಕಾರ್ ಅಹ್ಮದ್ ನನ್ನು ಬಾಡಿ ವಾರೆಂಟ್ ಪಡೆದು ಮುಂಬೈನಿಂದ ಮಂಗಳೂರಿಗೆ ಕರೆತಂದಿದ್ದಾರೆ. ಶಶಿಕಾಂತ್ ದೀಕ್ಷಿತ್ ಅವರಿಂದ ಮೆಡಿಕಲ್ ಸೀಟು ಕೊಡಿಸುವ ಹೆಸರಲ್ಲಿ ಹಣ ಪಡೆದಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಇಫ್ತಿಕಾರ್ ಅಹ್ಮದ್ ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೆಂದು ಗುರುತಿಸಲಾಗಿದೆ. ಆರೋಪಿ ಇಫ್ತಿಕಾರ್ ದೇಶಾದ್ಯಂತ ಮೆಡಿಕಲ್ ಸೀಟು ಲಾಬಿಯ ನೆಪದಲ್ಲಿ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಏಜನ್ಸಿ ಹೆಸರಲ್ಲಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಮೆಡಿಕಲ್ ಸೀಟು ಗಿಟ್ಟಿಸಲು ಅಭ್ಯರ್ಥಿಗಳು ಸಾಮಾನ್ಯವಾಗಿ ಎನ್ಇಟಿ ನೋಂದಣಿ ಮಾಡುತ್ತಾರೆ. ಅಲ್ಲಿಂದಲೇ ಅಭ್ಯರ್ಥಿಗಳ ಮೊಬೈಲ್ ನಂಬರ್ ಪಡೆಯುವ ಏಜನ್ಸಿಗಳು, ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸಿ ಕಡಿಮೆ ಹಣದಲ್ಲಿ ಸೀಟು ದೊರಕಿಸುವುದಾಗಿ ಡೀಲ್ ಕುದುರಿಸುತ್ತಾರೆ. ಇಲ್ಲಿ ದೂರುದಾರ ವ್ಯಕ್ತಿ ಶಶಿಕಾಂತ್ ದೀಕ್ಷಿತ್ ಅವರನ್ನು ದೆಹಲಿ ಮೂಲದ ವ್ಯಕ್ತಿಗಳು ಸಂಪರ್ಕ ಮಾಡಿದ್ದರು. ಆನಂತರ, ಅಂಜಲಿ, ಪಾಯಲ್, ರಾಹುಲ್ ಎಂಬವರು ಫೋನ್ ಮೂಲಕ ಸಂಪರ್ಕಿಸಿದ್ದು, ಮಂಗಳೂರಿನಲ್ಲಿ ಇಫ್ತಿಕಾರ್ ಅಹ್ಮದ್ ಕನೆಕ್ಟ್ ಆಗಿದ್ದ. ದೂರಿನ ಪ್ರಕಾರ, ಕಣಚೂರು ಮೆಡಿಕಲ್ ಕಾಲೇಜು ಕ್ಯಾಂಪಸಿನಲ್ಲಿಯೇ ಆರೋಪಿ ಇಫ್ತಿಕಾರ್ ಅಹ್ಮದ್ 15 ಲಕ್ಷ ರೂಪಾಯಿ ಹಣ ತೆಗೆದುಕೊಂಡಿದ್ದ. ಏಳೂವರೆ ಲಕ್ಷ ರೂ. ಹಣವನ್ನು ಅಶೋಕ್ ಸಿಂಗ್ ಎಂಬಾತ ಹೈದರಾಬಾದ್ ನಲ್ಲಿ ಇಫ್ತಿಕಾರ್ ಸೂಚನೆಯಂತೆ ಪಡೆದಿದ್ದ.
ಆರೋಪಿ ಇಫ್ತಿಕಾರ್ ನನ್ನು ಸದ್ಯಕ್ಕೆ ಮುಂಬೈನಿಂದ ಕರೆತಂದು ಉಳ್ಳಾಲ ಪೊಲೀಸರು ಕಸ್ಟಡಿ ಪಡೆದಿದ್ದಾರೆ. ಆತನ ತನಿಖೆಯ ಬಳಿಕ ಒಟ್ಟು ಜಾಲವನ್ನು ಪತ್ತೆ ಮಾಡಬೇಕಷ್ಟೆ. ದೆಹಲಿ ಮೂಲದ ಬೋಗಸ್ ಕಂಪನಿ ಹೆಸರಲ್ಲಿ ಆರೋಪಿಗಳು ಡೀಲ್ ಕುದುರಿಸಿ ಅಮಾಯಕರಿಗೆ ಮೋಸ ಮಾಡುವ ಜಾಲ ಬಹಳಷ್ಟಿದ್ದು, ಇವರನ್ನು ಪೊಲೀಸರು ಸೂಕ್ತ ತನಿಖೆಯ ಮೂಲಕ ಬಲೆಗೆ ಹಾಕಬೇಕು. ಕಣಚೂರು ಮೆಡಿಕಲ್ ಕಾಲೇಜು ಹೆಸರಲ್ಲಿ ವಿಶಾಖಪಟ್ಟಣ ಮೂಲದ ಮತ್ತೊಬ್ಬ ವ್ಯಕ್ತಿಗೂ ಇದೇ ರೀತಿ ಮೋಸ ಮಾಡಲಾಗಿತ್ತು. ಮೆಡಿಕಲ್ ಸೀಟು ಕೊಡಿಸುತ್ತೇವೆಂದು 50 ಲಕ್ಷ ರೂಪಾಯಿ ಪಡೆದು ವಂಚಿಸಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದಿನ್ನೂ ಪತ್ತೆಯಾಗಿಲ್ಲ.
Mangalore Medical seat fraud at Kanachur medical college, Iftikhar Ahmed from Noida arrested by Ullal Police. Recently an FIR was lodged at Ullal police station by Two medical students who had been cheated of giving MBBS seats at Kanachur by taking lakhs of fee money. FIR has been lodged against Iftikar and many others.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm