ಬ್ರೇಕಿಂಗ್ ನ್ಯೂಸ್
02-04-23 09:15 pm Bangalore Correspondent ಕ್ರೈಂ
ಬೆಂಗಳೂರು, ಎ.2: ಜಾನುವಾರು ಸಾಗಿಸುತ್ತಿದ್ದ ತಂಡದ ಮೇಲೆ ಹಲ್ಲೆಗೈದು ವ್ಯಕ್ತಿಯೊಬ್ಬನ ಸಾವಿಗೆ ಕಾರಣವಾದ ಘಟನೆ ಸಂಬಂಧಿಸಿ ಹಿಂದು ಸಂಘಟನೆಯ ಮುಖಂಡ ಪುನೀರ್ ಕೆರೆಹಳ್ಳಿ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಶುಕ್ರವಾರ ರಾತ್ರಿ ಪುನೀತ್ ಕೆರೆಹಳ್ಳಿ ಮತ್ತು ತಂಡ ಅಡ್ಡಗಟ್ಟಿ ಅದರಲ್ಲಿದ್ದವರಿಗೆ ಹಲ್ಲೆ ಮಾಡಿತ್ತು. ಆ ಸಂದರ್ಭದಲ್ಲಿ ಇರ್ಫಾನ್ ಮತ್ತು ಸೈಯದ್ ಜಹೀರ್ ಎಂಬವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ ವಾಹನವನ್ನು ಚಾಲನೆ ಮಾಡುತ್ತಿದ್ದ ಇದ್ರಿಸ್ ಪಾಷಾ(38) ತಂಡದ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಎನ್ನಲಾಗಿತ್ತು.
ಆದರೆ ಇದ್ರಿಸ್ ಪಾಷಾ ಆಬಳಿಕ ಶವವಾಗಿ ಪತ್ತೆಯಾಗಿದ್ದು ಶನಿವಾರ ಬೆಳಗ್ಗೆ ಪಾಷಾ ಕುಟುಂಬಸ್ಥರು ಸಾತನೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಹಿಂದು ಸಂಘಟನೆ ಕಾರ್ಯಕರ್ತರ ಹಲ್ಲೆಯಿಂದ ಗಾಯಗೊಂಡು ಸಾವಿಗೀಡಾಗಿದ್ದಾಗಿ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ್ದು ಪೊಲೀಸರು ಬಳಿಕ ಕುಟುಂಬಸ್ಥರನ್ನು ಮನವೊಲಿಸಿ ಪೋಸ್ಟ್ ಮಾರ್ಟಂ ಅವಕಾಶ ನೀಡುವಂತೆ ಕಳಿಸಿಕೊಟ್ಟಿದ್ದರು. ಘಟನೆ ಬಗ್ಗೆ ಪುನೀತ್ ಕೆರೆಹಳ್ಳಿ ಮತ್ತಿತರ ಕಾರ್ಯಕರ್ತರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಕೇಸು ದಾಖಲಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆದಿದ್ದ ಇರ್ಫಾನ್ ಮತ್ತು ಸೈಯದ್ ಜಹೀರ್ ಬಳಿ ಕೇಳಿದಾಗ, ಇದ್ರಿಸ್ ಪಾಷಾ ಟೆಂಪೋ ಚಲಾಯಿಸುತ್ತಿದ್ದರು. ನಾವು ಪ್ರತಿ ವರ್ಷ ಕೇರಳ, ತಮಿಳುನಾಡಿಗೆ ಗೋವುಗಳನ್ನು ಒಯ್ಯುತ್ತೇವೆ. ಸಾಗಾಟಕ್ಕೆ ಪರವಾನಗಿ ಪಡೆದೇ ಹಿಡಿದುಕೊಂಡು ಹೋಗುತ್ತಿದ್ದೆವು. ಆದರೆ ಇವರು ಲೈಸನ್ಸ್ ಕೇಳುವ ಬದಲು ನೇರವಾಗಿ ಹಲ್ಲೆಗೆ ಮುಂದಾಗಿದ್ದರು. ಅದಕ್ಕಾಗಿ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಓಡಿ ಪರಾರಿಯಾಗಲು ಯತ್ನಿಸಿದ್ದೆವು. ಇದ್ರಿಸ್ ಪಾಷಾ ಓಡಿ ಪರಾರಿಯಾಗಿದ್ದಾರೆ ಎಂದುಕೊಂಡಿದ್ದೆವು. ಹೇಗೆ ಸಾವು ಕಂಡಿದ್ದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಪುನೀತ್ ಕೆರೆಹಳ್ಳಿ ಈ ಹಿಂದೆ ಬಜರಂಗದಳ ಎಂದು ಹೇಳಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ. ಆತನ ಅವ್ಯವಹಾರದ ಬ್ಗಗೆ ಪೊಲೀಸ್ ದೂರುಗಳು ದಾಖಲಾಗಿದ್ದವು. ಕಳೆದ ಬಾರಿ ಹಲಾಲ್- ಜಟ್ಕಾ ಕಾರ್ಯಾಚರಣೆ ಮೂಲಕ ಪ್ರಚಾರ ಪಡೆದುಕೊಂಡಿದ್ದ ಈತ ನಂತರ ತನ್ನದೇ ರಾಷ್ಟ್ರ ರಕ್ಷಣಾ ಪಡೆ ಎನ್ನುವ ಪ್ರತ್ಯೇಕ ಸಂಘಟನೆ ಕಟ್ಟಿಕೊಂಡಿದ್ದ. ಮೊನ್ನೆ ಜಾನುವಾರು ಸಾಗಾಟದ ಟೆಂಪೋವನ್ನು ಅಡ್ಡಗಟ್ಟಿ ಮೊದಲಿಗೆ ಎರಡು ಲಕ್ಷ ರೂಪಾಯಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದ ಎನ್ನುವ ಆರೋಪ ಕೇಳಿಬಂದಿದೆ. ಹಣ ಕೊಡದೇ ಇದ್ದುದಕ್ಕೆ ಹಲ್ಲೆಗೈದು ಪೊಲೀಸರನ್ನು ಕರೆಸಿ ಅವರ ಕೈಗೆ ಆರೋಪಿಗಳನ್ನು ಒಪ್ಪಿಸಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಪ್ರಕಾರ, ಗೋವುಗಳನ್ನು ಪರವಾನಗಿ ಇಲ್ಲದೆ ಯಾವುದೇ ಕಾರಣಕ್ಕೂ ಸಾಗಿಸುವಂತಿಲ್ಲ. ಇದೇ ನೆಪವೊಡ್ಡಿ ಗೋರಕ್ಷಣೆ ಹೆಸರಲ್ಲಿ ಪುನೀತ್ ಕೆರೆಹಳ್ಳಿ ಮತ್ತು ತಂಡ ಕಾರ್ಯಾಚರಣೆ ನಡೆಸಿತ್ತು.
ಬಿಜೆಪಿ ಸರ್ಕಾರ ಪುಂಡರನ್ನು, ರೌಡಿಗಳನ್ನು ಪೋಷಿಸಿದ್ದರ ಪರಿಣಾಮ ಈಗ ಕೊಲೆ ಮಾಡುವ ಹಂತಕ್ಕೆ ತಲುಪಿದ್ದಾರೆ.
— Karnataka Congress (@INCKarnataka) April 2, 2023
ಕನಕಪುರದಲ್ಲಿ ಗೋಸಾಗಣೆಯ ವಾಹನದ ಮೇಲೆ ದಾಳಿ ನಡೆಸಿ ಓರ್ವನ ಹತ್ಯೆ ಮಾಡಿದ ಕೊಲೆಗಡುಕರಿಗೆ ಬಿಜೆಪಿಯ ಕೃಪಾಪೋಷಣೆ ಇದೆ.
ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಅಕ್ಷರಶಃ ಕರ್ನಾಟಕದಲ್ಲಿ ಜರುಗುತ್ತಿದೆ. pic.twitter.com/kN7PEIQjKP
In a shocking incident reported from Ramanagara district of Karnataka, a cattle trader was brutally murdered allegedly by cow vigilantes on Saturday. The deceased has been identified as Idrees Pasha. One of the prime suspects in the case has been identified as Puneet Kerehalli, who has been booked by police among others, reports Imran Khan from Bengaluru.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am