ಬ್ರೇಕಿಂಗ್ ನ್ಯೂಸ್
27-10-20 05:37 pm Headline Karnataka News Network ಕ್ರೈಂ
ಚಂಡೀಗಢ, ಅಕ್ಟೋಬರ್ 27: 21 ವರ್ಷದ ವಿದ್ಯಾರ್ಥಿನಿಯ ಗುಂಡಿಟ್ಟು ಕೊಲೆಗೈದ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿದ್ದು, ಮುಸ್ಲಿಂ ಯುವಕರಿಬ್ಬರು ಆಕೆ ಮತಾಂತರ ಆಗದ್ದಕ್ಕೆ ಈ ಕೃತ್ಯ ಮಾಡಿದ್ದಾರೆ. ಇದೊಂದು ರೀತಿಯ ಲವ್ ಜಿಹಾದ್ ಎನ್ನುವ ಮಾತು ಕೇಳಿಬಂದಿದೆ.
ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಅಂತಿಮ ವರ್ಷದ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದ ಯುವತಿ ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಗೆ ಬರುತ್ತಿದ್ದಂತೆ ಆಕೆಯನ್ನು ಕಾರಿನಲ್ಲಿ ಬಂದ ಇಬ್ಬರು ಅಪಹರಿಸಲು ಮುಂದಾಗಿದ್ದಾರೆ. ಈ ವೇಳೆ ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹತ್ತಿರದಿಂದ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪ್ರಕರಣ ಈಗ ತಿರುವು ಪಡೆದುಕೊಂಡಿದ್ದು ವಿವಾಹವಾಗುವಂತೆ ಆರೋಪಿ ಬಲವಂತ ಪಡಿಸಿದ್ದಲ್ಲದೆ, ಬೆದರಿಕೆ ಹಾಕಿದ್ದ. ಇದು ಲವ್ ಜಿಹಾದ್ ಎಂದು ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ ಘಟನೆ ನಡೆದಿದ್ದು, ಯುವತಿ ನಿಖಿತಾ ತೋಮರ್ ಮೇಲಿನ ದಾಳಿ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಬಳಿಕ ರೊಚ್ಚಿಗೆದ್ದ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಕಾಲೇಜು ಆವರಣದ ಬಲ್ಲಾಬ್ ಗರ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನು ಎನ್ ಕೌಂಟರ್ ಮಾಡದಿದ್ದರೆ ಯುವತಿ ಶವ ಮುಟ್ಟುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದ ಘಟನೆಯೂ ನಡೆದಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ತೌಸಿಫ್ ಹಾಗೂ ರೆಹಾನ್ ಅನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ದಾಖಲಾಗಿತ್ತು ಕಿಡ್ನಾಪ್ ಕೇಸ್ !
ಆರೋಪಿ ತೌಸಿಫ್, ಯುವತಿಯನ್ನು ಮದುವೆಯಾಗುವಂತೆ ಮತ್ತು ಮುಸ್ಲಿಂ ಆಗಿ ಮತಾಂತರವಾಗಲು ಬಲವಂತ ಪಡಿಸಿದ್ದ. ಮೂರು ವರ್ಷಗಳ ಹಿಂದೆ ಯುವತಿಯನ್ನು ಅಪಹರಿಸಲು ಯತ್ನಿಸಿದ ಬಗ್ಗೆ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಯುವತಿ ಮುಸ್ಲಿಂ ಆಗಿ ಮತಾಂತರ ಆಗಲು ನಿರಾಕರಿಸಿದ್ದಳು. ಮತ್ತೆ ಅಪಹರಿಸಲು ಪ್ರಯತ್ನಿಸಿದ್ದು ಯುವತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
2018ರಲ್ಲಿ ತೌಸಿಫ್ ವಿರುದ್ಧ ಪೊಲೀಸ್ ದೂರು ನೀಡಿದ್ದೆ. ನಾನು ದೂರು ನೀಡಿದ್ದಕ್ಕೆ ತೌಸಿಫ್ ನನ್ನ ಮಗಳ ಮೇಲೆ ಒತ್ತಡ ಹೇರಿದ್ದ. ದೂರನ್ನು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದ. ಬಳಿಕ ದೂರು ವಾಪಸ್ ಪಡೆದಿದ್ದಾಗಿ ನಿಕಿತಾ ತಂದೆ ಹೇಳಿದ್ದಾರೆ.
ಆದರೆ ಲಾಕ್ಡೌನ್ ಸಂದರ್ಭದಲ್ಲಿ ನಿಕಿತಾಗೆ ಆರೋಪಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಯುವತಿ ಬಳಿಕ ಫೋನ್ ಕರೆ ಸ್ವೀಕರಿಸದೆ ಬ್ಲಾಕ್ ಮಾಡಿದ್ದಕ್ಕೆ ತೌಸಿಫ್ ಸಿಟ್ಟುಗೊಂಡಿದ್ದ. ತೃತೀಯ ಬಿಕಾಂ ಓದುತ್ತಿದ್ದ ನಿಕಿತಾ ಈಗ ಪರೀಕ್ಷೆ ಬರೆಯಲು ಬರುತ್ತಾಳೆ ಎಂಬುದನ್ನು ತಿಳಿದು ತೌಸಿಫ್, ಕಾರಿನಲ್ಲಿ ಸ್ನೇಹಿತನ ಜೊತೆಗೆ ಕಾಲೇಜು ಆವರಣಕ್ಕೆ ಬಂದಿದ್ದ. ಬಳಿಕ ಕಾರಿನಲ್ಲಿ ಅಪಹರಿಸಲು ಯತ್ನಿಸಿ, ನಿರಾಕರಿಸಿದಾಗ ಗುಂಡಿಟ್ಟು ಸಾಯಿಸಿದ್ದಾನೆ. ಘಟನೆ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಹರಿಯಾಣ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು ಶಿಸ್ತು ಕ್ರಮಕ್ಕೆ ಸೂಚನೆ ನೀಡಿದೆ. ಹರಿಯಾಣ ಸರಕಾರ ಘಟನೆ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ನೇಮಕ ಮಾಡಿದೆ.
A 21-year-old woman was shot dead outside her college in Haryana's Faridabad district. Meanwhile, the family of the woman has linked the killing of the 21-year-old to so-called 'love jihad'. The family claimed that the woman was attacked outside her college by a man who was infatuated with her while the other accused is his associate.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am