ಬ್ರೇಕಿಂಗ್ ನ್ಯೂಸ್
04-05-23 08:59 pm HK News Desk ಕ್ರೈಂ
ಮೀರತ್, ಮೇ 4: ಉತ್ತರ ಪ್ರದೇಶದ ಪೊಲೀಸರು ಮತ್ತೊಬ್ಬ ಗ್ಯಾಂಗ್‌ಸ್ಟರ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ರಾಜಕಾರಣಿ, ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್‌ನ ಮಗ ಅಸಾದ್ ಅಹ್ಮದ್ ಹಾಗೂ ಆತನ ಸಹಚರ ಗುಲಾಂ ಮೊಹಮ್ಮದ್‌ನನ್ನು ಝಾನ್ಸಿಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಗುಂಡಿನ ಚಕಮಕಿಯಲ್ಲಿ ಕೊಂದ ಕೆಲವೇ ದಿನಗಳಲ್ಲಿ ಈ ಎನ್‌ಕೌಂಟರ್ ನಡೆದಿದೆ.
ಮೀರತ್ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಎಂಬಾತನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಅನಿಲ ದುಜಾನಾ, ಗೌತಮ ಬುದ್ಧ ನಗರ ಜಿಲ್ಲೆಯ ಬಾದಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುಜಾನಾ ಎಂಬ ಗ್ರಾಮದ ನಿವಾಸಿಯಾಗಿದ್ದಾನೆ. ಈತ ನೈಜ ಹೆಸರು ಅನಿಲ್ ನಗರ್.
ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ತನ್ನ ಹವಾ ಇಟ್ಟುಕೊಂಡಿದ್ದ ಅನಿಲ್, ಜನರಲ್ಲಿ ಭೀತಿ ಮೂಡಿಸಿದ್ದ. ಈತ ತನ್ನದೇ ಸಂಘಟಿತ ಕ್ರಿಮಿನಲ್ ಗ್ಯಾಂಗ್ ನಡೆಸುತ್ತಿದ್ದ. ಹತ್ಯೆಯಾದ ಗ್ಯಾಂಗ್‌ಸ್ಟರ್ ಮೇಲೆ 62 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅವುಗಳಲ್ಲಿ 18 ಕೊಲೆ, ಸುಲಿಗೆ, ದರೋಡೆ, ಭೂ ಕಬಳಿಕೆ ಮತ್ತು ತೆರವು ಪ್ರಕರಣಗಳು ಸೇರಿವೆ.
ಮಯೂರ ವಿಹಾರ ಪ್ರದೇಶದಲ್ಲಿ ದಿಲ್ಲಿ ಪೊಲೀಸರು 2022ರ ಡಿಸೆಂಬರ್‌ನಲ್ಲಿ ಅನಿಲ್ ದುಜಾನಾನನ್ನು ಬಂಧಿಸದ್ದರು. ಬಳಿಕ ಆತ ಜೈಲಿನಿಂದ ಹೊರಬಂದಿದ್ದ. ದುಜಾನಾ ಬಗ್ಗೆ ಸುಳಿವು ನೀಡಿದವರಿಗೆ ನೋಯ್ಡಾ ಪೊಲೀಸರು 50 ಸಾವಿರ ರೂ ಬಹುಮಾನ ಘೋಷಿಸಿದ್ದರೆ, ಬುಲಂದಶಹರ್ ಪೊಲೀಸರು 25 ಸಾವಿರ ರೂ ಬಹುಮಾನ ಪ್ರಕಟಿಸಿದ್ದರು. ಆತ 2012ರಿಂದಲೂ ಜೈಲಿನಲ್ಲಿದ್ದ. ಆದರೆ 2021ರಲ್ಲಿ ಆತನಿಗೆ ಜಾಮೀನು ದೊರಕಿತ್ತು. ನಂತರ ಹಳೆಯ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ಆತನ ವಿರುದ್ಧ ನ್ಯಾಯಾಲಯವೊಂದು ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಜೈಲಿನಿಂದಲೇ ಮಾಫಿಯಾ ನಿರ್ವಹಣೆ ;
2012ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಸೆರೆಸಿಕ್ಕ ನಂತರ ಅನಿಲ್ ದುಜಾನಾ, ಇನ್ನಿಬ್ಬರು ಕ್ರಿಮಿನಲ್‌ಗಳಾದ ರಣದೀಪ್ ಭಾಟಿ ಮತ್ತು ಅಮಿತ್ ಕಾಸನಾ ಸಹಾಯದೊಂದಿಗೆ ಜೈಲಿನ ಒಳಗಿನಿಂದಲೇ ತನ್ನ ಕ್ರಿಮಿನಲ್ ಸಾಮ್ರಾಜ್ಯವನ್ನು ನಡೆಸುತ್ತಿದ್ದ. ಜೈಲಿನಲ್ಲಿ ಕುಳಿತುಕೊಂಡೇ ಆತ ತನ್ನ ಸಹಚರರ ನೆರವಿನಿಂದ ಕೊಲೆ, ಸುಲಿಗೆ ಮತ್ತು ಇತರೆ ಕ್ರಿಮಿನಲ್ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದ.
ದುಜಾನಾ Vs ಭಾಟಿ ಗ್ಯಾಂಗ್ ವೈಷಮ್ಯ;
ದುಜಾನಾ ಕುಟುಂಬ ಹಾಗೂ ಸುಂದರ್ ಭಾಟಿ ಗ್ಯಾಂಗ್ ನಡುವೆ ಬಹಳ ದೀರ್ಘಕಾಲದ ವೈಷಮ್ಯ ಇತ್ತು. 2012ರಲ್ಲಿ ದುಜಾನಾ ಮತ್ತು ಆತನ ಗ್ಯಾಂಗ್, ಸುಂದರ್ ಭಾಟಿ ಹಾಗೂ ಆತನ ನಿಕಟವರ್ತಿಗಳ ಮೇಲೆ ಎಕೆ- 47 ರೈಫಲ್‌ನಿಂದ ಗುಂಡಿನ ದಾಳಿ ನಡೆಸಿದ್ದ. ಸರ್ಕಾರಿ ಗುತ್ತಿಗೆಗಳನ್ನು ಪಡೆದುಕೊಳ್ಳುವುದು, ಕಬ್ಬಿಣದ ಕಂಬಿಗಳನ್ನು ಕದಿಯುವುದು ಮತ್ತು ಟೋಲ್ ಪ್ಲಾಜಾ ಗುತ್ತಿಗೆಗಳ ವಿಚಾರದಲ್ಲಿ ಈ ಎರಡೂ ಗ್ಯಾಂಗ್‌ಗಳು ಅನೇಕ ಬಾರಿ ಮುಖಾಮುಖಿಯಾಗಿದ್ದವು. ಭಾಟಿ ಗ್ಯಾಂಗ್‌ನಿಂದ ಬೆದರಿಕೆ ಇದ್ದ ಕಾರಣಕ್ಕೆ ಪೊಲೀಸರು ತಮ್ಮ ವಶದಲ್ಲಿದ್ದಾಗ ದುಜಾನಾನನ್ನು ಬುಲೆಟ್ ಪ್ರೂಫ್ ಜಾಕೆಟ್ ತೊಡಿಸಿ ಕರೆದೊಯ್ಯುತ್ತಿದ್ದರು.
ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ದುಜಾನಾ ಕೂಡ ಸೇರಿದ್ದ. ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಐಎ), ಗೂಂಡಾ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
Gangster Anil Dujana, 36, has been killed in an encounter with a team of Uttar Pradesh Police's Special Task Force (STF) in Meerut. "Anil Dujana, a wanted criminal, was surrounded by our team in a village in Meerut on Thursday afternoon. Dujana fired at our team to escape and was killed in retaliatory firing," Amitabh Yash, the STF's Additional Director-General, said,
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm