ಬ್ರೇಕಿಂಗ್ ನ್ಯೂಸ್
05-05-23 07:59 pm Mangalore Correspondent ಕ್ರೈಂ
ಉಳ್ಳಾಲ, ಮೇ 5 : ಕೇರಳ- ಕರ್ನಾಟಕದ ಗಡಿ ಪ್ರದೇಶ ತಲಪಾಡಿಯ ತಚ್ಛಣಿ ಎಂಬಲ್ಲಿ ಗುಡ್ಡ ಪ್ರದೇಶದ ಜುಗಾರಿ ಅಡ್ಡೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದಲ್ಲಿ ಪೊಲೀಸರು ನಿನ್ನೆ ರಾತ್ರಿ ದಾಳಿ ನಡೆಸಿದ್ದು ಜೂಜು ನಿರತ 8 ಮಂದಿಯನ್ನು ಬಂಧಿಸಿ ನಗದು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತರನ್ನ ಮಂಜೇಶ್ವರ ಕುಂಜತ್ತೂರು ನಿವಾಸಿ ಅಶ್ವಥ್ ಯಾನೆ ನಿಚ್ಚು(35), ಸುಂಕದಕಟ್ಟೆ ನಿವಾಸಿ ಇಕ್ಬಾಲ್ (34), ಬೀರಿ ನಿವಾಸಿ ಅಬ್ಬಾಸ್ (50), ಮಾಡೂರು ನಿವಾಸಿ ನವೀನ್ (38), ಮಾರಿಪಳ್ಳ ನಿವಾಸಿ ಶಂಶುದ್ದೀನ್ (37), ಅಡ್ಯಾರ್ ನಿವಾಸಿ ಇಸ್ಮಾಯಿಲ್ (65), ಬಜಾಲ್ ನಿವಾಸಿ ಹರೀಶ್(42) ಎಂದು ಗುರುತಿಸಲಾಗಿದೆ. ಬಂಧಿತರಿಂದ ಎಂಟು ಬೈಕ್ , ಒಂದು ರಿಕ್ಷಾ ಸಹಿತ 14,500 ನಗದು ಹಣವನ್ನು ಪೊಲೀಸರು ವಶಪಡಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ತಲಪಾಡಿ ತಚ್ಛಾಣಿಯ ವಿಲೇಜ್ ಬಾರ್ ಎದುರಿನ ಗುಡ್ಡ ಪ್ರದೇಶದಲ್ಲಿ ಸ್ಥಳೀಯ ಪ್ರಭಾವಿ ಗ್ರಾಮ ಪಂಚಾಯತ್ ಸದಸ್ಯನೇ ಜುಗಾರಿ ಅಡ್ಡೆ ನಡೆಸುತ್ತಿದ್ದಾನೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಗುರುವಾರ ರಾತ್ರಿ ದಾಳಿ ನಡೆಸಿದೆ.
ತಲಪಾಡಿಯ ಗುಡ್ಡ ಪ್ರದೇಶಗಳು ಕೇರಳಕ್ಕೆ ತಾಗಿಕೊಂಡಿರುವ ಗಡಿ ಪ್ರದೇಶವಾಗಿದ್ದು ಇದರ ಲಾಭವೆತ್ತುತ್ತಿರುವ ಗ್ರಾಮದ ಸದಸ್ಯ ಒಮ್ಮೆ ಕೇರಳ ಪ್ರದೇಶ, ಮತ್ತೊಮ್ಮೆ ಕರ್ನಾಟಕ ಪ್ರದೇಶದ ಗುಡ್ಡದಲ್ಲಿ ಜೂಜು ನಡೆಸಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಹಣ ಗಳಿಸುತ್ತಿದ್ದನಂತೆ. ತಲಪಾಡಿ ಗಡಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಧಂದೆಯಲ್ಲಿ ಈತ ತೊಡಗಿಕೊಂಡಿದ್ದ. ಮಂಗಳೂರಿಗೆ ನೂತನ ಕಮಿಷನರ್ ಬಂದ ಮೇಲೆ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸ್ವಲ್ಪ ಬ್ರೇಕ್ ಬಿದ್ದುದರಿಂದ ಇದೀಗ ಈ ಗ್ರಾಮ ಪಂಚಾಯತ್ ಸದಸ್ಯ ಗುಡ್ಡ ಪ್ರದೇಶಗಳಲ್ಲಿ ವೈಭವದ ಜುಗಾರಿ ಅಡ್ಡೆ ಮಾಡಿ ಯುವಕರನ್ನ ಹಾದಿ ತಪ್ಪಿಸುವ ಕಾರ್ಯದಲ್ಲಿ ತೊಡಗಿಸಿದ್ದು ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದಾನೆ.
Ullal South Acp Dhanya Nayak raids gambling centre, eight arrested at Talapady, cash, car seized. It is said that the Gambling centre was lead by Gram Panchyath member. It is said that during the raid he has fleed from the spot and the police are on search for the absconding accused.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm