ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ ; ರೌಡಿಶೀಟರ್ ಆಕಾಶಭವನ್ ಶರಣ್ ಗೆ ಜೀವ ಭಯ, ಎನ್ಕೌಂಟರ್ ಭೀತಿ !!

30-10-20 10:50 am       Mangalore Correspondent   ಕ್ರೈಂ

ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟನೆಂದೇ ಕರೆಸಿಕೊಂಡಿರುವ, ರೌಡಿಶೀಟರ್ ಆಕಾಶಭವನ ಶರಣ್ ಗೆ ಎನ್ ಕೌಂಟರ್ ಭೀತಿ ಎದುರಾಗಿದೆ.

ಮಂಗಳೂರು, ಅಕ್ಟೋಬರ್ 30:ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟನೆಂದೇ ಕರೆಸಿಕೊಂಡಿರುವ, ರೌಡಿಶೀಟರ್ ಆಕಾಶಭವನ ಶರಣ್ ಗೆ ಎನ್ ಕೌಂಟರ್ ಭೀತಿ ಎದುರಾಗಿದೆ. ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಬಂಟ್ವಾಳ ಪೊಲೀಸರು ಬಾಡಿ ವಾರೆಂಟ್ ಪಡೆಯಲು ಮುಂದಾಗಿರುವ ಸಂದರ್ಭದಲ್ಲೇ ಆಕಾಶಭವನ್ ಶರಣ್ ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾನೆ. 

ಮಂಗಳೂರಿನ ರೌಡಿಶೀಟರ್ ಆಗಿರುವ ಆಕಾಶಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿ ಕಳೆದ ಎರಡು ವರ್ಷಗಳಿಂದ ಪ್ರಕರಣ ಸಂಬಂಧಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಈ ನಡುವೆ, ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಆತನ ಹೆಸರು ಕೇಳಿಬಂದಿತ್ತು. ಈಗ ಬಂಧಿತ ಆರೋಪಿಗಳು ‌ನೀಡಿರುವ ಮಾಹಿತಿ ಪ್ರಕಾರ, ಬಂಟ್ವಾಳ ಪೊಲೀಸರು ಶರಣ್ ಬಾಡಿ ವಾರಂಟ್ ಪಡೆದು ವಿಚಾರಣೆಗೆ ಕರೆ ತರಲಿದ್ದಾರೆ ಎನ್ನಲಾಗುತ್ತಿದೆ. 

ಆದರೆ, ಈ ಮಧ್ಯೆ ಆಕಾಶಭವನ ಶರಣ್ ನ್ಯಾಯಾಲಯಕ್ಕೆ ಪತ್ರ ಬರೆದು ಆತಂಕ ತೋಡಿಕೊಂಡಿರುವ ಪತ್ರ ಬಯಲಾಗಿದೆ. ವಿಚಾರಣೆಗೆಂದು ಕರೆತಂದು ಎನ್ಕೌಂಟರ್ ಮಾಡುತ್ತಾರೆ. ಹಾಗಾಗಿ ವಿನಾಯಿತಿ ನೀಡಬೇಕು ಎಂದು ಪತ್ರ ಬರೆದಿದ್ದಾನೆ.

Rowdy sheeter Akashbhavan Sharan alias Sharan Poojary fears about losing his life fears death by means of a police encounter in connection to Surendra Bantwal Murder.