ಬ್ರೇಕಿಂಗ್ ನ್ಯೂಸ್
06-06-23 10:43 am Mangalore Correspondent ಕ್ರೈಂ
ಉಳ್ಳಾಲ, ಜೂ.6: ಕುತ್ತಾರು ಬಳಿಯ ಭಂಡಾರ ಬೈಲು ಎಂಬಲ್ಲಿ ಟಾಟಾ ಏಸ್ ವಾಹನದಲ್ಲಿ ಜಾನುವಾರುಗಳನ್ನ ಉಸಿರುಗಟ್ಟಿಸಿ ಅಮಾನವೀಯವಾಗಿ ವಧಾಗೃಹಕ್ಕೆ ಸಾಗಿಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಜಾನುವಾರುಗಳನ್ನ ರಕ್ಷಿಸಿದ್ದು ಈ ವೇಳೆ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಉಳ್ಳಾಲದ ಆಝಾದ್ ನಗರ ನಿವಾಸಿ ಅಹಮ್ಮದ್ ಇರ್ಷಾದ್, ಅಳೇಕಳ ನಿವಾಸಿ ಜಾಫರ್ ಸಾಧಿಕ್, ಬಸ್ತಿಪಡ್ಪು ನಿವಾಸಿ ಫಾಯಝ್, ಮಂಜೇಶ್ವರ ಬಂಗ್ರ ನಿವಾಸಿ ಖಾಲಿದ್ ಬಿ.ಎಮ್ ಬಂಧಿತ ಆರೋಪಿಗಳು.
ಆರೋಪಿಗಳು ಆದಿತ್ಯವಾರ ಅಂಬ್ಲಮೊಗರು ಎಂಬಲ್ಲಿನ ವೃದ್ಧೆಯೊಬ್ಬರಿಂದ 5 ಜಾನುವಾರುಗಳನ್ನ ಖರೀದಿಸಿ ಕೇರಳ ನೋಂದಣಿಯ ಟಾಟಾ ಏಸ್ ವಾಹನದಲ್ಲಿ ಅಮಾನವೀಯವಾಗಿ ತುಂಬಿಸಿ ಭಂಡಾರ ಬೈಲು ಮಾರ್ಗವಾಗಿ ಉಳ್ಳಾಲ ಅಲೇಕಳದ ವಧಾಗೃಹಕ್ಕೆ ಸಾಗಿಸುತ್ತಿದ್ದ ವೇಳೆ ಕಡಿದಾದ ರಸ್ತೆ ಏರನ್ನ ಏರಲಾಗದೆ ವಾಹನ ನಿಂತಿತ್ತು. ಈ ವೇಳೆ ಸ್ಥಳದಲ್ಲಿದ್ದ ಬಜರಂಗದಳದ ಹುಡುಗರು ವಾಹನವನ್ನ ತಳ್ಳಲು ಮುಂದಾದಾಗ ಗೋವುಗಳನ್ನ ಅಮಾನವೀಯವಾಗಿ ತುಂಬಿಸಿದ್ದು ಬೆಳಕಿಗೆ ಬಂದು ಚಾಲಕನಲ್ಲಿ ವಿಚಾರಿಸಿದಾಗ ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದರು. ಎಸ್ಕಾರ್ಟ್ ನೀಡುತ್ತಿದ್ದ ಇಬ್ಬರು ಆರೋಪಿಗಳು ಬೈಕನ್ನ ಬಿಟ್ಟು ಓಡಿ ಹೋಗಿದ್ದರು.
ಈ ವೇಳೆ, ವಾಹನದಲ್ಲಿದ್ದ ಒಂದು ಹಸು ಹೊರಗೆ ಓಡಿ ತಪ್ಪಿಸಿತ್ತು. ಬಾಕಿ ಉಳಿದಿದ್ದ ಒಂದು ಹಸು, ಎರಡು ಹೋರಿ, ಮತ್ತೊಂದು ಕರುವನ್ನ ರಕ್ಷಿಸಿದ ಬಜರಂಗದಳದ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಒಪ್ಪಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ, ಪ್ರಾಣಿ ಹಿಂಸೆ ಕಾಯ್ದೆ, ಐಪಿಸಿ 379 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Illegal cow transport at Kuthar, four arrested by Ullal Police in Mangalore. The arrested were caught by the bajarang dal members when the van was stuck finding difficult to climb up the road.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 09:58 pm
Mangalore Correspondent
Mangalore Police, Ravi Pujari: ಮಂಗಳೂರಿನ ಬಿಲ್ಡ...
27-07-25 08:56 pm
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm