ಬೆಂಗಳೂರಿನಲ್ಲಿ ನೆದರ್ ಲ್ಯಾಂಡ್ ಮೂಲದ ಬ್ಲಾಗರ್ ಮೇಲೆ ಹಲ್ಲೆ ; ವಿಡಿಯೋ ವೈರಲ್, ವ್ಯಾಪಕ ಆಕ್ರೋಶ

12-06-23 03:19 pm       Bangalore Correspondent   ಕ್ರೈಂ

ನಗರದ ಚಿಕ್ಕಪೇಟೆ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಡಚ್ ಬ್ಲಾಗರ್ ಪೆಡ್ರೊ ಮೋಟಾ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.

ಬೆಂಗಳೂರು, ಜೂನ್ 12: ನಗರದ ಚಿಕ್ಕಪೇಟೆ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಡಚ್ ಬ್ಲಾಗರ್ ಪೆಡ್ರೊ ಮೋಟಾ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.

ನೆದರ್ ಲ್ಯಾಂಡ್ ಮೂಲದ ಪೆಡ್ರೊ ಮೋಟಾ ಅವರೊಂದಿಗೆ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿದ ದೂರಿನ ಬಗ್ಗೆ ಆರೋಪಿ ನವಾಬ್ ಹಯಾತ್ ಷರೀಫ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 92 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ
ಲಕ್ಷ್ಮಣ್ ಹೇಳಿದ್ದಾರೆ.

ಘಟನೆಯ ವಿಡಿಯೋ ವೈರಲ್ ಆಗಿದ್ದು ವಿದೇಶಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

In a shocking incident, a Dutch YouTuber was allegedly harassed in Karnataka’s Bengaluru. The video of the same is going viral on social media platforms. The incident took place in the Chickpet area of Bengaluru while the YouTuber, a Dutch citizen, named Pedro Mota was recording a vlog on the streets of the city. The accused, identified as Nawab Hayat Sharif, has been arrested by the police after a complaint was filed against him.