ಬ್ರೇಕಿಂಗ್ ನ್ಯೂಸ್
24-07-25 07:54 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 24 : ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳಿಗೆ ಜಾಮೀನು ನೀಡಿದ್ದಕ್ಕೆ, ಇತರೆ ಕೇಸ್ಗಳಲ್ಲಿಯೂ ಕೊಲೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡುತ್ತದೆಯೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ನಟ ದರ್ಶನ್ ಸೇರಿ ಕೊಲೆ ಕೇಸ್ನ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿರುವ ಕರ್ನಾಟಕ ಹೈಕೋರ್ಟ್ನ ತೀರ್ಪಿನ ಬಗ್ಗೆ ನ್ಯಾಯಾಂಗದ ಅಧಿಕಾರದ ದುರುಪಯೋಗ ಎಂದು ಸುಪ್ರೀಂ ವಿಷಾದ ವ್ಯಕ್ತಪಡಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿ ಆರೋಪಿಗಳ ಜಾಮೀನು ಪ್ರಶ್ನೆ ಮಾಡಿ ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಗುರುವಾರ ವಿಚಾರಣೆ ನಡೆಸಿತು. ನಟ ದರ್ಶನ್ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ.
ತೀರ್ಪನ್ನು ಕಾಯ್ದಿರಿಸಿದ ಸುಪ್ರೀಂ ಕೋರ್ಟ್;
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಕಳೆದ ವಾರ ಹೈಕೋರ್ಟ್ ಜಾಮೀನು ನೀಡುವಲ್ಲಿ ವಿವೇಚನೆ ಬಳಸಿಲ್ಲ ಎಂದಿದ್ದ ಸುಪ್ರೀಂ ಕೋರ್ಟ್ ಈ ವಾರ ಮತ್ತೆ ಟೀಕೆ ಮುಂದುವರೆಸಿತು. ಹೈಕೋರ್ಟ್ ಮಾಡಿದ ತಪ್ಪನ್ನು ತಾನು ಮಾಡುವುದಿಲ್ಲ ಎಂದು 10 ದಿನಗಳು ತೀರ್ಪನ್ನು ಕಾಯ್ದಿರಿಸಿತು.
ಇದು ನ್ಯಾಯಾಂಗದ ಅಧಿಕಾರದ ದುರುಪಯೋಗ;
"ಹೈಕೋರ್ಟ್ ಆದೇಶವನ್ನು ನೀಡಿದ ರೀತಿ ನೋಡಿದರೆ, ಬೇಸರವಾಗುತ್ತದೆ. ಹೈಕೋರ್ಟ್ ಇತರ ಪ್ರಕರಣಗಳಲ್ಲೂ ಇದೇ ರೀತಿಯ ಆದೇಶಗಳನ್ನು ನೀಡುತ್ತದೆಯೇ?" ಎಂದು ನ್ಯಾಯಮೂರ್ತಿ ಪರ್ದಿವಾಲಾ ಪ್ರಶ್ನಿಸಿದ್ದಾರೆ. ಈ ತಪ್ಪನ್ನು ಕಳೆ ಹಂತದ ಕೋರ್ಟ್ನ ನ್ಯಾಯಧೀಶರು ಮಾಡಿದರೆ ಒಪ್ಪಿಕೊಳ್ಳಬಹುದು. ಆದರೆ, ಹೈಕೋರ್ಟ್ ನ್ಯಾಯಮೂರ್ತಿಗಳು ಮಾಡಿದರೆ ಹೇಗೆ? ಇತರ ಆರೋಪಿಗಳು ವರ್ಷಗಳಿಂದ ಕಾಯುತ್ತಿರುವಾಗ ಈ ಪ್ರಕರಣಕ್ಕೆ ಏಕೆ ಇಷ್ಟು ಗಮನ ನೀಡಲಾಗುತ್ತಿದೆ? ಇದು ನ್ಯಾಯಾಂಗದ ಅಧಿಕಾರದ ದುರುಪಯೋಗ. ನ್ಯಾಯಾಂಗದ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಟ ದರ್ಶನ್ ಪರ ವಕೀಲರಿಗೆ ಸಾಲು ಸಾಲು ಪ್ರಶ್ನೆ ;
ಆರೋಪಿ 2 ದರ್ಶನ್ ಬಟ್ಟೆಗಳನ್ನು 3 ದಿನಗಳ ಬಳಿಕ ವಶಕ್ಕೆ ಪಡೆದಿದ್ದಾರೆ. ಅಷ್ಟರಲ್ಲಿ ಬಟ್ಟೆಗಳನ್ನು ಒಗೆದು ಒಣಹಾಕಲಾಗಿತ್ತೆಂದು ಹೇಳಲಾಗಿದೆ. ಮಹಜರು ವೇಳೆ ರಕ್ತದ ಕಲೆ ಕಂಡುಬಂದಿಲ್ಲ. ಫೊರೆನ್ಸಿಕ್ನಲ್ಲಿ ರಕ್ತದ ಕಲೆ ಕಂಡುಬಂದಿದೆ ಎಂದು ಹೇಳುತ್ತಿದ್ದಾರೆ. ಇದ್ಯಾವುದನ್ನೂ ನಂಬಲು ಸಾಧ್ಯವಿಲ್ಲವೆಂದು ದರ್ಶನ್ ಪರ ವಕೀಲ ಸಿದ್ಧಾರ್ಥ್ ದವೆ ಕೋರ್ಟ್ನ ಗಮನಕ್ಕೆ ತಂದರು. ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅವರು, ಒಟ್ಟಾರೆ ಘಟನೆಯೇ ನಂಬಲರ್ಹವಾಗಿಲ್ಲವೇ? 2 ಪ್ರತ್ಯಕ್ಷದರ್ಶಿಗಳು ನಂಬಲರ್ಹವಾಗಿಲ್ಲ, ಸಾಕ್ಷಿಗಳ ಹೇಳಿಕೆಗೆ ಪೂರಕ ಸಾಕ್ಷ್ಯಗಳಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
The Supreme Court on Thursday strongly criticized the Karnataka High Court for granting bail to Kannada actor Darshan and other accused in the high-profile Renukaswamy murder case, stating that the decision lacked judicial prudence and amounted to a misuse of judicial authority.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
30-08-25 04:23 pm
Mangalore Correspondent
Golden Era of AI Business: YatiCorp Offers As...
30-08-25 04:11 pm
ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂ...
30-08-25 12:55 pm
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm