ಬ್ರೇಕಿಂಗ್ ನ್ಯೂಸ್
23-07-25 03:25 pm Mangalore Correspondent ಕ್ರೈಂ
ಮಂಗಳೂರು, ಜುಲೈ 23 : ಆನ್ ಲೈನ್ ಮೂಲಕ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಕಮಿಷನ್ ಪಡೆಯುವ ಆಮಿಷಕ್ಕೆ ಬಲಿಯಾದ ಕಾರ್ಕಳ ಮೂಲದ ಯುವಕ, ಮಂಗಳೂರಿನ ಸಸಿಹಿತ್ಲುವಿನಲ್ಲಿ ವಾಸವಿರುವ ಅಶ್ವಿತ್ (34) ಎಂಬವರು 15.5 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಜ.28ರಂದು ಅಶ್ವಿತ್ ಅವರ ವಾಟ್ಸ್ ಆ್ಯಪ್‌ಗೆ ಮೀನಾ ಸಕ್ಸಾಲ್ ಎಂಬ ಹೆಸರಿನಲ್ಲಿ ಸಂದೇಶ ಬಂದಿತ್ತು. ಟೆಲಿಗ್ರಾಮ್ ಆ್ಯಪ್‌ನಲ್ಲಿ ಎಸ್-ಕಾಯಿನ್ ಇನ್ವೆಸ್ಟ್‌ಮೆಂಟ್ ಟಾಸ್ಕ್ ಗೆ ಸೇರುವಂತೆ ಸಂದೇಶದಲ್ಲಿ ತಿಳಿಸಲಾಗಿತ್ತು. ಅದರಂತೆ ಅಶ್ವಿತ್ ಅವರು ಈ ಆ್ಯಪ್ ಗೆ ಸೇರಿ ತಮ್ಮ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದರು.
ಹೆಚ್ಚು ಹಣ ಹೂಡಿದರೆ ಇನ್ನೂ ಹೆಚ್ಚಿನ ಕಮಿಷನ್ ನೀಡುವುದಾಗಿ ವಂಚಕರು ಹೇಳಿದ್ದರು. ಇದನ್ನು ನಂಬಿದ ಅಶ್ವಿತ್ ಒಂದಷ್ಟು ಹಣ ಹೂಡಿಕೆ ಮಾಡಿದ್ದು ಆರಂಭದಲ್ಲಿ ಒಂದಷ್ಟು ಲಾಭಾಂಶ ಸಿಗುವಂತೆ ರುಚಿ ತೋರಿಸಿದ್ದರು. ಆಮೂಲಕ ಅಧಿಕ ಮೊತ್ತ ಹೂಡಿಕೆ ಮಾಡುವಂತೆ ಪ್ರೇರಣೆ ನೀಡಿದರು. ಮಹಾರಾಷ್ಟ್ರ ಬ್ಯಾಂಕ್ ನ ಮಂಗಳೂರು ಶಾಖೆಯಲ್ಲಿರುವ ತಮ್ಮ ಖಾತೆಯ ಮೂಲಕ ಜನವರಿಯಿಂದ ಜೂನ್ ವರೆಗೆ ಅಶ್ವಿತ್ ಹಂತ ಹಂತವಾಗಿ 15,52,650 ರೂ. ವರ್ಗಾಯಿಸಿದ್ದಾರೆ.
ವಂಚಕರು ಇನ್ನೂ ಹೆಚ್ಚಿನ ಹಣ ಹಾಕುವಂತೆ ಕೇಳಿದ್ದು ಅಶ್ವಿತ್ ನಿರಾಕರಿಸಿದ್ದರು. ಅಲ್ಲದೆ, ಈಗಾಗಲೇ ಹಾಕಿರುವ ಹಣವನ್ನು ಮರಳಿಸುವಂತೆ ಕೇಳಿದರು. ಆದರೆ ಹಾಕಿದ ಹಣ ಮರಳಿಸಲು ತೆರಿಗೆ ಪಾವತಿಸಬೇಕು ಎಂದು ಹೇಳಿದ್ದು ಆಬಳಿಕವಷ್ಟೇ ಹಣ ಹಿಂದಿರುಗಿಸುವುದಾಗಿ ತಿಳಿಸಿದ್ದರು. ತಾನು ಮೋಸ ಹೋಗಿರುವ ಕುರಿತು ಕಾರ್ಕಳ ನಗರ ಠಾಣೆಗೆ ಪೊಲೀಸ್ ದೂರು ನೀಡಿದ್ದಾರೆ.
Karkala Youth Loses ₹15.5 Lakh in Telegram Investment Scam Promising High Commissions
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm