ಬ್ರೇಕಿಂಗ್ ನ್ಯೂಸ್
21-06-23 11:10 pm Bangalore Correspondent ಕ್ರೈಂ
ಬೆಂಗಳೂರು, ಜೂನ್ 21: ನಗರದ ಕಮ್ಮನಹಳ್ಳಿ ಎಂಬಲ್ಲಿ ಸೈಂಟ್ ಪಿಯುಸ್ ಚರ್ಚ್ ಆವರಣಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಹಾನಿಯೆಸಗಿದ ಘಟನೆ ನಡೆದಿದ್ದು ಈ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಲಿಂಗರಾಜಪುರಂ ನಿವಾಸಿ ಟಾಮ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ.
ಬುಧವಾರ ಬೆಳ್ಳಂಬೆಳಗ್ಗೆ ಚರ್ಚ್ ನಲ್ಲಿ ದಾಳಿಯೆಸಗಿದ ಘಟನೆ ನಡೆದಿತ್ತು. ಚರ್ಚ್ ಸಿಬಂದಿ ಬಂದು ನೋಡಿದಾಗ, ಒಳಗಿದ್ದ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿದ್ದವು. ಪ್ರಮುಖ ದ್ವಾರದ ಬಾಗಿಲನ್ನು ಒಡೆದು ಹಾಕಲಾಗಿತ್ತು. ಕೂಡಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ್ದು ಯುವಕನ ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸರ ಬಂಧನ ಸಂದರ್ಭದಲ್ಲಿ ಆರೋಪಿ ಮ್ಯಾಥ್ಯು ಕುಡಿದ ಮತ್ತಿನಲ್ಲಿದ್ದ. ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಟಾಮ್, ಅದೇ ಕಾರಣಕ್ಕೆ ಮಾನಸಿಕ ಸ್ಥಿಮಿತ ಕಳಕೊಂಡಿದ್ದ ಎನ್ನಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಆತನ ಕೈಯಲ್ಲಿದ್ದ ಸುತ್ತಿಗೆಯನ್ನು ವಶಕ್ಕೆ ಪಡೆದಿದ್ದಾರೆ. ಸುತ್ತಿಗೆಯಿಂದ ಬಡಿದು ಕೃತ್ಯ ಎಸಗಿರುವ ಶಂಕೆಯಿದೆ.
ಚರ್ಚ್ ಒಳಗೆ ಕ್ಯಾಂಡಲ್ ಉರಿಸುವ ಸ್ಟಾಂಡ್ ಸೇರಿದಂತೆ ಪವಿತ್ರ ವಸ್ತುಗಳನ್ನು ಹಾನಿ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು ಕೃತ್ಯಕ್ಕೆ ಬೇರಾವುದೇ ದುರುದ್ದೇಶ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Pius catholic Church vandalised at Lingarajapuram in Bangalore, Christian youth arrested. A 29-year-old individual named Tom Mathew, a resident of Lingarajapuram, has been apprehended in relation to the vandalism incident that occurred at St Pius X Church in Kammanahalli, Bengaluru, in the early hours of Wednesday.
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm