ಬ್ರೇಕಿಂಗ್ ನ್ಯೂಸ್
08-07-23 05:08 pm HK News Desk ಕ್ರೈಂ
ಬೆಳಗಾವಿ, ಜುಲೈ 8: ದಿಗಂಬರ ಜೈನ ಮುನಿಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದು ಕೊಳವೆ ಬಾವಿಯಲ್ಲಿ ಹೂತಿಟ್ಟ ಅಮಾನುಷ ಕೃತ್ಯ ಚಿಕ್ಕೋಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು ಪೊಲೀಸರು ಶೋಧ ಆರಂಭಿಸಿದ್ದಾರೆ.
ಚಿಕ್ಕೋಡಿ ತಾಕೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿ ಜೈನಮುನಿಗಳಾಗಿದ್ದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು 15 ವರ್ಷಗಳಿಂದ ವಾಸವಿದ್ದರು. ಎರಡು ದಿನಗಳ ಹಿಂದೆ ಮುನಿಗಳು ನಾಪತ್ತೆಯಾಗಿದ್ದರು. ಪತ್ತೆಯಾಗದ ಹಿನ್ನೆಲೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಚಿಕ್ಕೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆಶ್ರಮದ ಒಳಗಿನವರನ್ನು ಗುರಿಯಾಗಿಸಿ ತನಿಖೆ ನಡೆಸಿದಾಗ, ಮುನಿಗಳು ಮತ್ತು ಆಶ್ರಮ ವಾಸಿಗಳ ಹಣಕಾಸು ವ್ಯವಹಾರ ಬೆಳಕಿಗೆ ಬಂದಿತ್ತು.
ಶಂಕೆ ಮೇಲೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ರಹಸ್ಯವನ್ನು ಬಾಯ್ಬಿಟ್ಟಿದ್ದಾರೆ. ಆರೋಪಿಗಳು ಸ್ವಾಮಿಜಿಯ ಶವವನ್ನು ಕತ್ತರಿಸಿ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಗದ್ದೆಯಲ್ಲಿ ತೆರೆದ ಕೊಳವೆ ಬಾವಿಗೆ ಹಾಕಿರುವುದಾಗಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಕ್ಕಾಗಿ ಪರಿಶೀಲನೆ ನಡೆಸಿದ್ದು ಶವದ ತುಂಡುಗಳನ್ನು ಪತ್ತೆ ಮಾಡಿದ್ದಾರೆ.
ಈ ನಡುವೆ, ಜೈನ ಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಖಟಕಬಾವಿಯಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಪೂರ್ವಾಶ್ರಮ ಸಂಬಂಧಿ ಪ್ರದೀಪ್ ಸ್ಫೋಟಕ ಆರೋಪ ಮಾಡಿದ್ದಾರೆ. ಕೊಲೆಯ ಪ್ರಮುಖ ಆರೋಪಿ ಆಶ್ರಮದಲ್ಲಿಯೇ ಕೆಲಸ ಮಾಡುತ್ತಿದ್ದ. ಆತನಿಗೆ ಕಷ್ಟವಿದ್ದಾಗ ಸ್ವಾಮೀಜಿಯಿಂದ ಹಣ ಪಡೆಯುತ್ತಿದ್ದ ಎಂದು ಪ್ರದೀಪ್ ಹೇಳಿದ್ದಾರೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ವಾಮೀಜಿಗಳ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
Acharya Sri 108 Kamakumar Nandi Maharaju of Hirekodi, who disappeared from his ashram in Hirekodi village in Chikkodi taluka of Belagavi district, Karnataka, was brutally murdered. Kamakumar Nandi Maharaj, who has been living in Nandiparvat Ashram for the past 15 years, has been missing since July 6. At that time the devotees who came to the ashram looked for him. But eventually it came to light that Jaina Muni had been murdered
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm