ಬ್ರೇಕಿಂಗ್ ನ್ಯೂಸ್
03-08-23 04:00 pm Mangalore Correspondent ಕ್ರೈಂ
ಉಳ್ಳಾಲ, ಆ.3: ತೊಕ್ಕೊಟ್ಟು ಒಳಪೇಟೆ ಮತ್ತು ಜಪ್ಪಿನಮೊಗರಿನ ವಾಣಿಜ್ಯ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಸಿಸಿಟಿವಿ ಡಿವಿಆರ್ ಅನ್ನು ಕಿತ್ತ ಕಳ್ಳ ಅದನ್ನ ಮರೆತು ಅಂಗಡಿಯಲ್ಲೇ ಬಿಟ್ಟು ಹೋಗಿದ್ದು ಕಳ್ಳನ ಕರಾಮತ್ತಿನ ವೀಡಿಯೋ ಪೊಲೀಸರಿಗೆ ಲಭಿಸಿದೆ.
ತೊಕ್ಕೊಟ್ಟು ಒಳಪೇಟೆಯ ಲಕ್ಷ್ಮೀ ಕ್ಯಾಂಟೀನ್, ಪಕ್ಕದ ಪಾತ್ರೆಯ ಅಂಗಡಿ ಮತ್ತು ಮೊಬೈಲ್ ಅಂಗಡಿಗಳಲ್ಲಿ ಕಳ್ಳತನ ನಡೆದಿದ್ದು ನಗದು ಹಣವನ್ನು ದೋಚಲಾಗಿದೆ. ಪಾತ್ರೆಯ ಅಂಗಡಿಗೆ ಕಳ್ಳನೋರ್ವ ಕನ್ನ ಹಾಕುವ ದೃಶ್ಯ ಒಳಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೇಲ್ಛಾವಣಿಯ ಹಂಚು ಸರಿಸಿ ಒಳ ನುಸುಳಿದ ಚಾಣಾಕ್ಷ ಕಳ್ಳ ಮೊದಲಿಗೆ ಸಿಸಿಟಿವಿ ಇರೋದನ್ನ ಗಮನಿಸಿದ್ದು ವೀಡಿಯೋ ದಾಖಲಾಗುವ ಹಾರ್ಡ್ ಡಿಸ್ಕ್ ಇರುವ ಡಿವಿಆರನ್ನೇ ಮೊದಲಿಗೆ ಕಿತ್ತು ಮೇಜಿನ ಮೇಲಿರಿಸಿದ್ದಾನೆ.



ಬಳಿಕ ಒಳಗಿದ್ದ ಸುಮಾರು ಐದು ಸಾವಿರ ನಗದನ್ನ ಎಗರಿಸಿದ ನಂತರ ಡಿವಿಆರ್ ಅನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾನೆ. ಪಕ್ಕದ ಲಕ್ಷ್ಮೀ ಕ್ಯಾಂಟೀನ್ ಗೂ ಕನ್ನ ಹಾಕಿದ್ದು ಸಿಕ್ಕಿದ 500 ರೂಪಾಯಿ ನಗದನ್ನ ಎಗರಿಸಲಾಗಿದೆ. ಮೊಬೈಲ್ ಅಂಗಡಿಯಲ್ಲಿ ನಗದು ಸಿಗದೆ ಹೆಡ್ ಫೋನ್ ಗಳನ್ನ ಕಳವು ಮಾಡಲಾಗಿದೆ.
ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ಜಪ್ಪಿನಮೊಗರುವಿನ ಟೈಲ್ಸ್ ಅಂಗಡಿಗೂ ಕನ್ನ ಹಾಕಲಾಗಿದ್ದು ಸುಮಾರು 6000 ನಗದನ್ನ ದೋಚಲಾಗಿದೆ. ಪೊಲೀಸರು ಸಿಸಿಟಿವಿ ಪೂಟೇಜನ್ನ ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಕಳ್ಳ ಹೊರ ರಾಜ್ಯದ ವಲಸಿಗನೆಂದು ತಿಳಿದು ಬಂದಿದ್ದು ಒಬ್ಬನೇ ಸರಣಿ ಕಳ್ಳತನ ನಡಸಿದ್ದಾನೆಯೇ ಅಥವಾ ಗ್ಯಾಂಗ್ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Mangalore Thokottu Robbery in various shops, CCTV footages found by Police.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm