ಬ್ರೇಕಿಂಗ್ ನ್ಯೂಸ್
10-08-23 05:37 pm Udupi Correspondent ಕ್ರೈಂ
ಉಡುಪಿ, ಆಗಸ್ಟ್ 10: ಹಿಂದುಸ್ತಾನ್ ಲಿವರ್ ಲಿಮಿಟೆಡ್ ಹೆಸರಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 81 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಿಉಡುಪಿ ಮಹಾದೇವಿ ಲೇಔಟ್ ಕುಂಜಿಗುಡ್ಡೆಯ ರೇಷ್ಮಾ ಬಾನು ಎಂಬವರು ಹಣ ಕಳಕೊಂಡವರು. ದಸ್ತಗಿರ್ ಎಂಬಾತ ಮಹಿಳೆಯ ಗಂಡನ ಗೆಳೆತನ ಮಾಡಿಕೊಂಡಿದ್ದು 2021ರ ನವೆಂಬರ್ ಮೊದಲನೇ ವಾರದಲ್ಲಿ ಮನೆಗೆ ಬಂದು, ಹಿಂದೂಸ್ತಾನ್ ಲಿವರ್ ಲಿಮಿಟೆಡ್ ಕಂಪೆನಿ ಬಗ್ಗೆ ತಿಳಿಸಿದ್ದಾನೆ. ಅಲ್ಲದೆ, ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ 35ನೇ ದಿನಕ್ಕೆ ಅದಕ್ಕೆ ಪ್ರತಿಯಾಗಿ ಲಾಭಾಂಶ ನೀಡುವುದಾಗಿ ನಂಬಿಸಿದ್ದನು. ಪ್ರತಿ ತಿಂಗಳು ಲಾಭಾಂಶ ಬರಲಿದ್ದು ನಿಮ್ಮ ಡಿಪಾಸಿಟ್ ಮೊತ್ತ ಹಾಗೆಯೇ ಇರಲಿದೆ ಎಂದು ತಿಳಿಸಿದ್ದ.
ಅದರಂತೆ ರೇಷ್ಮಾ ಹಂತ ಹಂತವಾಗಿ ಬರೋಬ್ಬರಿ 81 ಲಕ್ಷ ರೂಪಾಯಿ ಹಣವನ್ನು ಆತನಿಗೆ ನೀಡಿದ್ದು ಕಂಪನಿಯಲ್ಲಿ ಹೂಡಿಕೆ ಮಾಡಲು ತಿಳಿಸಿದ್ದರು. ಈ ಬಗ್ಗೆ ಕರಾರು ಪತ್ರವನ್ನೂ ಮಾಡಿಕೊಂಡಿದ್ದರು. ಆದರೆ ಮೂರು ವರ್ಷದಲ್ಲಿ ಯಾವುದೇ ಲಾಭಾಂಶ ಆಗಲೀ, ಅಸಲು ಹಣವನ್ನೂ ನೀಡದೆ ಮೋಸ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
Mangalore Fraud in the name of Hindustan Unilever company, women loses 81 lakhs believing of double money.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm