ಬ್ರೇಕಿಂಗ್ ನ್ಯೂಸ್
16-08-23 06:46 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 16: ಸರಕಾರಿ ಸೇವೆಯಿಂದ ನಿವೃತ್ತಗೊಂಡು ನೆಮ್ಮದಿಯಾಗಿದ್ದ ವೃದ್ಧರೊಬ್ಬರು ಚೆಲುವೆಯೊಬ್ಬಳಿಗೆ ಮರುಳಾಗಿ ಬರೋಬ್ಬರಿ 82 ಲಕ್ಷ ರೂ. ಕಳೆದುಕೊಂಡಿದ್ದಾರೆ. ವೃದ್ಧನೊಂದಿಗೆ ಹೋಟೆಲ್‌ನಲ್ಲಿ ಕಳೆದಿದ್ದ ಖಾಸಗಿ ಕ್ಷಣಗಳ ವಿಡಿಯೋ, ಫೋಟೊಗಳನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಸಹೋದರಿಯರಿಬ್ಬರನ್ನ ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ಮೂಲದ ಅಣ್ಣಮ್ಮ ಮತ್ತು ಆಕೆಯ ಸಹೋದರಿ ಸ್ನೇಹಾ (30) ಬಂಧಿತರು. ಇವರಿಬ್ಬರ 'ಹನಿಟ್ರ್ಯಾಪ್' ಕೃತ್ಯಕ್ಕೆ ಬೆಂಗಾವಲಾಗಿದ್ದ ಸ್ನೇಹಾ ಅವರ ಪತಿ ಲೋಕೇಶ್ ಎಂಬಾತನೂ ಕೂಡ ಪೊಲೀಸರ ಅತಿಥಿಯಾಗಿದ್ದಾನೆ.
ಸರಕಾರದ ಉನ್ನತ ಹುದ್ದೆಯಲ್ಲಿದ್ದ 60 ವರ್ಷದ ಕಮಲೇಶ್ (ಹೆಸರು ಬದಲಿಸಲಾಗಿದೆ) ಕೆಲ ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ನಿವೃತ್ತಿ ಬಳಿಕ ಲಕ್ಷಾಂತರ ರೂ. ಭವಿಷ್ಯ ನಿಧಿಯ (ಪಿಎಫ್) ಹಣ ಬಂದಿತ್ತು. ಸ್ನೇಹಿತರ ಮೂಲಕ ಏಪ್ರಿಲ್‌ನಲ್ಲಿ ಪರಿಚಿತಳಾದ ಅಣ್ಣಮ್ಮ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಪುತ್ರನ ಚಿಕಿತ್ಸೆಗೆ ಹಣಕಾಸಿನ ನೆರವು ನೀಡುವಂತೆ ಕೋರಿದ್ದರು. ಹಣ ನೀಡಲು ಒಪ್ಪಿದ ಕಮಲೇಶ್, ಖಾಸಗಿ ಹೋಟೆಲ್‌ವೊಂದರ ಬಳಿ ಕರೆಸಿಕೊಂಡು 5 ಸಾವಿರ ರೂ. ನೀಡಿದ್ದರು. ಆನಂತರ ಇಬ್ಬರ ನಡುವಿನ ಗೆಳೆತನ ಮತ್ತಷ್ಟು ಗಟ್ಟಿಯಾಗಿ ಆತ್ಮೀಯರಾಗಿದ್ದರು.
ಕಳೆದ ಮೇ ತಿಂಗಳ ಮೊದಲ ವಾರದಲ್ಲಿ ಕಮಲೇಶ್ ಅವರನ್ನು ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೋಟೆಲ್‌ವೊಂದಕ್ಕೆ ಅಣ್ಣಮ್ಮ ಕರೆಸಿಕೊಂಡಿದ್ದಳು. ಹೋಟೆಲ್ ಕೊಠಡಿಯಲ್ಲಿಇಬ್ಬರೂ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಹಲವು ಬಾರಿ ಇಬ್ಬರ ಏಕಾಂತ ಭೇಟಿ ನಡೆದುಹೋಗಿತ್ತು. ಈ ವೇಳೆ ಕಮಲೇಶ್‌ಗೆ ಗೊತ್ತಾಗದಂತೆ ಅಣ್ಣಮ್ಮ, ಖಾಸಗಿ ಕ್ಷಣಗಳ ಪೋಟೋ, ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿಟ್ಟುಕೊಂಡಿದ್ದಳು. ಕೆಲ ದಿನಗಳ ಬಳಿಕ ತನ್ನ ಸಹೋದರಿ ಸ್ನೇಹಾಳನ್ನು ಪರಿಚಯಿಸಿದ್ದಳು. ಸ್ನೇಹಾಳೊಂದಿಗೆ ಸಲುಗೆ ಬೆಳೆಸಿಕೊಂಡ ಕಮಲೇಶ್ ಆಕೆಗೂ ಹಣಕಾಸಿನ ನೆರವು ನೀಡಿದ್ದರು.
ವ್ಯಾಟ್ಸ್‌ಅಪ್‌ನಲ್ಲಿ ವಿಡಿಯೋ ;
ಜೂನ್ ಎರಡನೇ ವಾರದಲ್ಲಿ ಸ್ನೇಹಾ, ಕಮಲೇಶ್ ಅವರ ವಾಟ್ಸಾಪ್ ಸಂಖ್ಯೆಗೆ ಅಣ್ಣಮ್ಮ ನೊಂದಿಗೆ ಇರುವ ನಗ್ನ ಫೋಟೊ, ವಿಡಿಯೋ ಕಳುಹಿಸಿ 82 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ವಿಡಿಯೋ, ಫೋಟೊಗಳನ್ನು ಸಾಮಾಜಿಕ ಜಾಲತಾಣ, ಸಂಬಂಧಿಕರು, ಪರಿಚಯಸ್ಥರಿಗೆ ಕಳುಹಿಸುವುದಾಗಿ ಹೆದರಿಸಿದ್ದಳು. ಮರ್ಯಾದೆಗೆ ಅಂಜಿದ ಕಮಲೇಶ್, ನಿವೃತ್ತಿ ಬಳಿಕ ಬಂದಿದ್ದ ಹಣವನ್ನೆಲ್ಲಾ ಸ್ನೇಹಾಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು.
ಮತ್ತೆ 42 ಲಕ್ಷಕ್ಕೆ ಬೇಡಿಕೆ ;
ಕೆಲ ದಿನ ಸುಮ್ಮನಿದ್ದ ಸ್ನೇಹಾ ಮತ್ತು ತಂಡ ಮತ್ತೆ 42 ಲಕ್ಷ ರೂ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ವಿಡಿಯೋವನ್ನು ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಲು ತೊಡಗಿದರು. ಇದರಿಂದ ಹೆದರಿದ ಕಮಲೇಶ್ ಅಂತಿಮವಾಗಿ ಆ.11ರಂದು ದೂರು ನೀಡಿದ್ದರು. ಆನಂತರ ಅಣ್ಣಮ್ಮ, ಸ್ನೇಹಾ, ಲೋಕೇಶ್‌ನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಅಣ್ಣಮ್ಮ ಖಾಸಗಿ ಫೋಟೊ, ವಿಡಿಯೋಗಳನ್ನು ಸ್ನೇಹಾಳಿಗೆ ಕಳುಹಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಮೂವರು ಆರೋಪಿಗಳ ಮೊಬೈಲ್‌ಗಳನ್ನು ರಿಟ್ರೀವ್ ಮಾಡಲಾಗುತ್ತಿದೆ. ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸ್ವಲ್ಪ ಹಣವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇದೇ ರೀತಿ ಬೇರೆಡೆ ಕೃತ್ಯ ಎಸಗಿದ್ದರೇ ಎಂಬುದರ ಬಗ್ಗೆ ತನಿಖೆ ನಡೆಸಲು ಆ. 19ರವರೆಗೆ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.
Police arrested three individuals for allegedly extorting Rs 82 lakh from a 60-year-old man through a honey trap. The arrested have been identified as Annamma, 40, Sneha, 25, and Lokesh, 32, who resided in the same Bommanahalli house. While Annamma hails from Madikeri, the other two are from Bengaluru.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm