ಕುಂಪಲ ; ಬುಲೆಟ್ ನಲ್ಲಿ ಬಂದ ಯುವಕನಿಂದ ಯುವತಿಯ ಚಿನ್ನದ ಸರಗಳ್ಳತನ ! 

07-11-20 12:26 am       Mangaluru Correspondent   ಕ್ರೈಂ

ಇಲ್ಲಿನ ಕುಂಪಲ ಬಳಿಯ ಬಗಂಬಿಲ ಎಂಬಲ್ಲಿ ಶಾಲೆಯ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಚಿನ್ನದ ಸರವನ್ನು ಯುವಕನೊಬ್ಬ ಎಗರಿಸಿದ ಪ್ರಕರಣ ಶುಕ್ರವಾರ ರಾತ್ರಿ ನಡೆದಿದೆ. 

ಉಳ್ಳಾಲ, ನವೆಂಬರ್, 6: ಇಲ್ಲಿನ ಕುಂಪಲ ಬಳಿಯ ಬಗಂಬಿಲ ಎಂಬಲ್ಲಿ ಶಾಲೆಯ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಚಿನ್ನದ ಸರವನ್ನು ಯುವಕನೊಬ್ಬ ಎಗರಿಸಿದ ಪ್ರಕರಣ ಶುಕ್ರವಾರ ರಾತ್ರಿ ನಡೆದಿದೆ. 

ಬಗಂಬಿಲ ಕಡೆಯಿಂದ ಬುಲೆಟ್ ಬೈಕ್ ನಲ್ಲಿ‌ ಬರುತ್ತಿದ್ದ ಯುವಕ ರಸ್ತೆ ಬದಿಯಲ್ಲಿದ್ದ ಯುವತಿಯ ಚಿನ್ನದ ಸರವನ್ನು ಎಗರಿಸಿ‌ ಪರಾರಿಯಾಗಿದ್ದಾನೆ. ಯುವಕ ಸರ ಕಿತ್ತುಕೊಂಡು ಹೋಗುವುದು ಅಲ್ಲಿನ ಕಟ್ಟಡ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌ ಯುವತಿ ಬಸ್ ಇಳಿದು ಮನೆಯತ್ತ ನಡೆದುಹೋಗುತ್ತಿದ್ದಳು. 

ಉಳ್ಳಾಲ ಪೊಲೀಸರು‌ ಸಿಸಿ ಕ್ಯಾಮೆರಾ ಆಧರಿಸಿ ಆರೋಪಿಯ ಪತ್ತೆ‌ ಕಾರ್ಯ ನಡೆಸುತ್ತಿದ್ದಾರೆ. ಈ ಹಿಂದೆಯೂ ಎರಡು ಬಾರಿ ಇದೇ ಪರಿಸರದಲ್ಲಿ ಸರ ಕಳ್ಳತನ ಪ್ರಕರಣ ನಡೆದಿತ್ತು.

A chain snatching incident is reported in Kumpala, Mangalore. The incident happened at night on Friday, November 07. The Ullal Police have obtained CCTV footages and have registered the case