ಬ್ರೇಕಿಂಗ್ ನ್ಯೂಸ್
26-08-23 07:13 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 26: ಮುಸ್ಲಿಂ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುತ್ತಿದ್ದಾನೆ ಎಂಬ ಕಾರಣಕ್ಕೆ ಕಾಸರಗೋಡು ಜಿಲ್ಲೆಯ ಉಪ್ಪಳ ಮೂಲದ ಮುಸ್ಲಿಂ ವಿದ್ಯಾರ್ಥಿಯನ್ನು ಅಪಹರಿಸಿ ಅಡ್ಯಾರಿನ ಫ್ಲಾಟ್ ಒಂದರಲ್ಲಿ ಕೂಡಿ ಹಾಕಿ ಹಲ್ಲೆಗೈದ ಘಟನೆ ನಡೆದಿದ್ದು, ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧಿಸಿ ಪೊಲೀಸರು ಆರು ಮಂದಿ ವಿದ್ಯಾರ್ಥಿಗಳು ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.
ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಎದುರಿನಿಂದ ಶಾಮೀರ್ ಹಾಗೂ ಇಬ್ರಾಹಿಂ ಫಾಶಿಂ ಎಂಬಿಬ್ಬರನ್ನು ಕಾರಿನಲ್ಲಿ ಅಪಹರಿಸಿದ್ದು, ಅಡ್ಯಾರಿನ ಫ್ಲಾಟ್ ಒಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಬಂಟ್ವಾಳದ ಎಸ್ಡಿಪಿಐ ಮುಖಂಡರೊಬ್ಬರ ಪುತ್ರನೂ ಭಾಗಿಯಾಗಿದ್ದ ಆರೋಪಗಳಿದ್ದವು. ಹಲ್ಲೆಗೀಡಾದ ಇಬ್ರಾಹಿಂ ಫಾಶಿಂ(19) ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿಯಾಗಿದ್ದು, ಕಾಸರಗೋಡಿನಲ್ಲಿ ಆಸ್ಪತ್ಪೆಗೆ ದಾಖಲಾಗಿದ್ದ. ಸ್ವಧರ್ಮೀಯ ಯುವಕರೇ ಹಲ್ಲೆಗೈದು ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರಿನ ಬಂದರು ಠಾಣೆಯಲ್ಲಿ ಇಬ್ರಾಹಿಂ ಫಾಶಿಂ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಘಟನೆ ಸಂಬಂಧಿಸಿ ಪೊಲೀಸರು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿ ಇಬ್ರಾಹಿಂ ತಾಬೀಶ್(19), ಬಿಸಿ ರೋಡ್ ಗೂಡಿನ ಬಳಿ ನಿವಾಸಿ ಅಬ್ದುಲ್ಲಾ ಹನ್ನಾನ್(19), ಸಜಿಪ ಮುನ್ನೂರು ಗ್ರಾಮದ ಮೊಹಮ್ಮದ್ ಶಕೀಫ್(19), ಬಡ್ಡಕಟ್ಟೆ ನಿವಾಸಿ ಮಹಮ್ಮದ್ ಶಾಯೀಕ್ (19), ಬಜಾಲ್ ಫೈಸಲ್ ನಗರ ನಿವಾಸಿ ಯುಪಿ ತನ್ವೀರ್(20), ಅದೇ ಪ್ರದೇಶದ ಅಬ್ದುಲ್ ರಶೀದ್ (19), ಗೂಡಿನಬಳಿ ನಿವಾಸಿ ಮನ್ಸೂರ್(37) ಎಂಬವರನ್ನು ಬಂಧಿಸಿದ್ದಾರೆ.
Mangalore Seven arrested for kidnapping, assulting aloysius college student over love matter at a private flat at adyar, seven arrested. The arrested are identified as Ibrahim Tabhish (19) and Mohammed Shakif (19) from Panemangalore, Abdulla Hannan (19), Mohammed Shahiq (19) and Mansoor (37) from Bantwal, and U P Tanvir (20) and Abdul Rashid (20) from Bajal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am