ಬ್ರೇಕಿಂಗ್ ನ್ಯೂಸ್
26-08-23 10:19 pm HK News Desk ಕ್ರೈಂ
ಲಕ್ನೋ, ಆಗಸ್ಟ್ 26: 19 ವರ್ಷದ ಸೊಸೆಯ ಮೇಲೆ ಕಣ್ಣು ಹಾಕಿದ್ದಾನೆಂದು ತನ್ನ ಗಂಡನನ್ನೇ ಮಹಿಳೆಯೊಬ್ಬಳು ಕತ್ತು ಸೀಳಿ ಕೊಲೆಗೈದ ಘಟನೆ ಉತ್ತರ ಪ್ರದೇಶ ಬದೌನ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆಗಸ್ಟ್ 14ರಂದು 45 ವರ್ಷದ ತೇಜೇಂದರ್ ಸಿಂಗ್ ಎಂಬಾತ ಮನೆಯಲ್ಲೇ ಕತ್ತು ಸೀಳಿ ಕೊಲೆಯಾಗಿದ್ದ. ಈ ಬಗ್ಗೆ ಪೊಲೀಸ್ ಕೇಸು ದಾಖಲಾಗಿ, ಯಾರೋ ಅಪರಿಚಿತರು ಕೊಲೆಗೈದಿದ್ದಾರೆಂದು ದೂರಲಾಗಿತ್ತು. ಆದರೆ ಪೊಲೀಸರಿಗೆ ತೇಜೇಂದರ್ ಸಿಂಗ್ ಪತ್ನಿ ಮೈಥಿಲಿ ದೇವಿ ಬಗ್ಗೆ ಶಂಕೆಯಿತ್ತು. ಹೀಗಾಗಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಮಹಿಳೆ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಈ ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಸೊಸೆಯಂದಿರೂ ಇದ್ದಾರೆ. ಆದರೆ ಗಂಡ ತೇಜೇಂದರ್ ಸಿಂಗ್, ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಪತ್ನಿಗೆ ಹೊಡೆದು ಸೊಸೆಯಂದಿರನ್ನು ತನ್ನೊಂದಿಗೆ ಮಲಗುವಂತೆ ಒತ್ತಾಯ ಮಾಡುತ್ತಿದ್ದ. ಸೊಸೆಯನ್ನು ಕೃತ್ಯಕ್ಕೆ ಒಪ್ಪಿಸುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ. ಇದರಿಂದ ಸಿಟ್ಟಿಗೆದ್ದಿದ್ದ ಮೈಥಿಲಿ ದೇವಿ, ಸೂಕ್ತ ಸಮಯಕ್ಕಾಗಿ ಕಾದಿದ್ದಳು. ಆಗಸ್ಟ್ 14ರಂದು ಕುಡಿದು ಬಂದು ಮನೆಯ ಜಗುಲಿಯಲ್ಲಿ ಅಂಗಾತ ಮಲಗಿದ್ದ ಪತಿಯ ಕುತ್ತಿಗೆಯನ್ನೇ ಸೀಳಿ ಹಾಕಿದ್ದಳು. ಸೊಸೆಯನ್ನು ರಕ್ಷಣೆ ಮಾಡುವುದಕ್ಕಾಗಿ ಈ ಕೃತ್ಯ ಮಾಡಲೇಬೇಕಿತ್ತು ಎಂದು ಆಕೆ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾಳೆ.
A toy manufacturer in Uttar Pradesh’s Budaun was allegedly killed by his wife to “prevent him from sexually abusing" their 19-year-old daughter-in-law". Police said that the 40-year-old woman was arrested for slitting her husband’s throat.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
23-07-25 12:00 pm
Mangalore Correspondent
Dharmasthala SIT Latest News; ಧರ್ಮಸ್ಥಳ ಎಸ್ಐಟಿ...
23-07-25 10:19 am
Puttur Bus News; ಮಂಗಳೂರು-ಪುತ್ತೂರು ಬಸ್ ನಲ್ಲಿ ಯ...
22-07-25 11:13 pm
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
23-07-25 04:49 pm
Udupi Correspondent
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am
Mangalore CCB Police, Arrest, Crime: ಸಿಸಿಬಿ ಕ...
22-07-25 09:45 pm
Kalaburagi Jewellery Robbery, Arrest: ಕಲಬುರಗಿ...
22-07-25 12:38 pm