ಯುವತಿ ಕೊಲೆಗೈದು ತುಂಬೆಯಲ್ಲಿ ಎಸೆದು ಹೋದ ದುಷ್ಕರ್ಮಿಗಳು !!

07-11-20 06:08 pm       Mangalore Correspondent   ಕ್ರೈಂ

ಮುಲ್ಕಿ ಮೂಲದ ಯುವತಿಯನ್ನು ತುಂಬೆ ನದಿತೀರದಲ್ಲಿ ಕೊಲೆಗೈದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ಬಂಟ್ವಾಳ , ನವೆಂಬರ್ 07: ಮುಲ್ಕಿ ಮೂಲದ ಯುವತಿಯನ್ನು ತುಂಬೆ ನದಿತೀರದಲ್ಲಿ ಕೊಲೆಗೈದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಯುವತಿಯನ್ನು ಮುಲ್ಕಿ ಒಡೆಯರ ಬೆಟ್ಟು ನಿವಾಸಿ ಆಶಾ(36) ಎಂದು ಗುರುತಿಸಲಾಗಿದೆ. 

ಮೃತ ಯುವತಿ ಭೂ ವ್ಯವಹಾರ ವಹಿವಾಟು ನಡೆಸುತ್ತಿದ್ದು ಈಕೆಯ ಸಾವು ಸಂಶಯಕ್ಕೆ ಕಾರಣವಾಗಿದೆ. ಮುಲ್ಕಿ ಪರಿಸರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದ ಈಕೆ ಮನೆಗೆ ರಿಕ್ಷಾದಲ್ಲಿ ಬಂದು ಹೋಗುತ್ತಿದ್ದರು ಎಂದು ನಿಕಟವರ್ತಿಗಳು ತಿಳಿಸಿದ್ದಾರೆ.

ನದಿ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದು ಮೈಮೇಲೆ ರಕ್ತದ ಕಲೆಗಳು ಕಂಡುಬಂದಿದೆ. ಹೀಗಾಗಿ ಯುವತಿಯನ್ನು ಕೊಲೆಗೈದು ಎಸೆದು ಹೋಗಿರಬಹುದೆಂದು ಶಂಕಿಸಲಾಗಿದೆ.

ಮೃತ ಆಶಾ ಮುಲ್ಕಿಯ ಒಡೆಯರ ಬೆಟ್ಟು ಮನೆಯಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದು ಮನೆಯವರು ಮೃತ ಶರೀರ ಪತ್ತೆಯಾದ ಸ್ಥಳ ಬಂಟ್ವಾಳದ ತುಂಬೆಗೆ ಧಾವಿಸಿದ್ದಾರೆ.

Woman Murdered and thrown near river side at Thumbay, Bantwal. The deceased has been identified as Asha (36) from Mulki.